ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪತ್ನಿಗೆ ಸಿಗರೇಟ್‌ನಿಂದ ಮೈ-ಕೈ ಸುಟ್ಟು, ಕಚ್ಚಿ ಕಾಟ ಕೊಟ್ಟಿರೊ ಸೈಕೊ ಪತಿ!

Twitter
Facebook
LinkedIn
WhatsApp
ಪತ್ನಿಗೆ ಸಿಗರೇಟ್‌ನಿಂದ ಮೈ-ಕೈ ಸುಟ್ಟು, ಕಚ್ಚಿ ಕಾಟ ಕೊಟ್ಟಿರೊ ಸೈಕೊ ಪತಿ!

ತುಮಕೂರು: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಸೈಕೋಪಾಥ್‌ ಪತಿಯೊಬ್ಬ ಪತ್ನಿಗೆ ಸಿಗರೇಟ್‌ನಿಂದ ಮೈ-ಕೈ ಸುಟ್ಟು, ಕಚ್ಚಿದ್ದಾನೆ. ಪತಿಯ ನಿರಂತರ ಕಾಟಕ್ಕೆ ಬೇಸತ್ತು ನೊಂದ (Husband Torture) ಮಹಿಳೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಇತ್ತ ಪೊಲೀಸರು ದೂರು ದಾಖಲಿಸಿಕೊಳ್ಳದೇ ರಾಜಿಗೆ ಯತ್ನಿಸಿದ್ದಾರೆ.

ಚಾಲಕನಾಗಿರುವ ಗೋವಿಂದರಾಜು ಎಂಬಾತ ಮೂರು ವರ್ಷಗಳ ಹಿಂದೆ ಸುಮಿತ್ರಾಳನ್ನು ಪ್ರೀತಿಸಿ ಮದುವೆ ಆಗಿದ್ದ. ತುಮಕೂರಿನ ಪಂಡಿತನಹಳ್ಳಿ‌ಯಲ್ಲಿ ವಾಸವಾಗಿದ್ದ, ಇವರಿಬ್ಬರ ದಾಂಪತ್ಯವು ಮೊದಮೊದಲು ಚೆನ್ನಾಗಿಯೇ ಇತ್ತು. ಆದರೆ ದಿನ ಕಳೆದಂತೆ ಗೋವಿಂದರಾಜು ಕುಡಿದು ಬಂದು ದಿನ‌ನಿತ್ಯ ಕಿರುಕುಳ ನೀಡಲು ಶುರು ಮಾಡಿದ್ದಾನೆ ಎಂದು ಸಮಿತ್ರಾ ಆರೋಪಿಸಿದ್ದಾರೆ.

ಗಂಡನ ಕಾಟ ತಾಳಲಾರದೆ ದೂರು ನೀಡಲು ಐದಾರು ಬಾರಿ‌ ಹೆಬ್ಬೂರು ಠಾಣೆ ಹಾಗೂ ಮಹಿಳಾ‌ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದರೆ ದೂರು ದಾಖಲಿಸಿಕೊಳ್ಳದೇ ಪೊಲೀಸರು ರಾಜಿ ಮಾಡಿಸಲು ಮುಂದಾಗಿದ್ದಾರೆ. ಇತ್ತ ಪತಿ ಗೋವಿಂದರಾಜು ಸಿಗರೇಟ್‌ನಿಂದ ಮೈ-ಕೈ ಸುಡುವುದು, ಕಚ್ಚುವುದು ಹಾಗೂ ಕಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಮಕ್ಕಳಾಗಿಲ್ಲ ಅಂತಲೂ ನಿಂದನೆ ಮಾಡಿದ್ದಾನೆ.

ಸದ್ಯ ಪತಿ ವಿರುದ್ಧ ಪತ್ನಿ ಸುಮಿತ್ರಾ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದು, ತುಮಕೂರು ‌ಮಹಿಳಾ ಪೊಲೀಸರ ಮೊರೆ ಹೋಗಿದ್ದಾರೆ.

ಹೊಡೆದು ಬಡಿದು ಹಿಂಸೆ ಕೊಡುವ ಗಂಡ; ಠಾಣೆ ಮೆಟ್ಟಿಲೇರಿದ ನಾಯಕ ನಟಿ

ಬೆಂಗಳೂರು: ಹೊಡೆದು ಬಡಿದು ದೈಹಿಕವಾಗಿ ನನ್ನ ಪತಿ ನನಗೆ ಹಿಂಸೆಯನ್ನು (Assault Case) ನೀಡುತ್ತಿದ್ದಾರೆ ಎಂದು ಕೋಲಾರ 1990 ಚಿತ್ರದ ನಾಯಕ ನಟಿ ನೇಹಾ ಸರ್ವಾರ್ ಠಾಣೆ ಮೆಟ್ಟಿಲೇರಿದ್ದಾರೆ.

ನಟಿ ನೇಹಾ ಸರ್ವಾರ್‌ ಕಳೆದ 6 ವರ್ಷದ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ರಾಹುಲ್‌ ಎಂಬುವವರನ್ನು ಮದುವೆ ಆಗಿದ್ದಾರೆ. ಆದರೆ ಮದುವೆ ನಂತರ ಕೆಲಸ ಕಾರ್ಯವಿಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿರುವ ರಾಹುಲ್‌, ನೇಹಾ ಅವರಿಗೆ ದೈಹಿಕ ಹಲ್ಲೆ ಮಾಡಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ನಾಲ್ಕೈದು ವರ್ಷದಿಂದ ನಿರಂತರ ಕಿರುಕುಳ ನೀಡುತ್ತಾ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾನೆ. ಹೊಡೆದು ಬಡಿದು ಮಾಡಿದರೂ ಸಹಿಸಿಕೊಂಡು ಬಂದಿದ್ದೇನೆ. ಆದರೆ ದಿನದಿಂದ ದಿನಕ್ಕೆ ಪತಿ ರಾಹುಲ್‌ ಕಿರುಕುಳ ಹೆಚ್ಚಾಗುತ್ತಿದೆ. ಹೀಗಾಗಿ ಪತಿಯ ಕಿರುಕುಳ ತಾಳಲಾರದೆ ಬಸವೇಶ್ವರನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆತ್ತನಗೆರೆ, ಲೂಸ್ ಮಾದ ಆಭಿನಯದ ಕೋಲಾರ 1990, ಶ್ರೀನಗರ ಕಿಟ್ಟಿ ಅಭಿನಯದ ಏ ರಾಮ್, ತಮಿಳು ಚಿತ್ರ ಊಟಿ ಸೇರಿ ಹಲವರು ಚಿತ್ರಗಳಲ್ಲಿ ನಾಯಕಿಯಾಗಿ ನೇಹಾ ಅಭಿನಯಿಸಿದ್ದಾರೆ. ನಾಲ್ಕು ಕನ್ನಡ ಹಾಗೂ 2 ತಮಿಳು ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ