ಪತ್ನಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ!
ತುಮಕೂರು, (ಸೆಪ್ಟೆಂಬರ್ 14): ಪತ್ನಿಯ(Wife) ಕಾಟಕ್ಕೆ ಬೇಸತ್ತು ಪತಿ(Husband) ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತುಮಕೂರು (Tumakuru) ಜಿಲ್ಲೆ ಕೆ.ಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಡೆದಿದೆ. ಮಂಜುನಾಥ್ (38) ನೇಣುಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾದ ಮೃತ ದುರ್ದೈವಿ.
ಬೆಂಗಳೂರಿನ ಬಿಎಂಆರ್ ಸಿಎಲ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್, ಕಳೆದ 10 ವರ್ಷದ ಹಿಂದೆ ತುರುವೇಕೆರೆ ಮೂಲದ ಪ್ರೀಯಾಂಕಳನ್ನ ಮದುವೆಯಾಗಿದ್ದ. ಬಳಿಕ ದಂಪತಿ ಬೆಂಗಳೂರಿನಲ್ಲಿ ವಾಸವಿತ್ತು. ಆದ್ರೆ, ಹೊಂದಾಣಿಕೆ ಇಲ್ಲದೇ ಪದೇ ಪದೇ ಗಂಡ ಹೆಂಡತಿ ನಡುವೆ ಗಲಾಟೆ ನಡೆಯುತ್ತಿತ್ತು. ನೀನು ಹಳ್ಳಿ ಗುಗ್ಗು ನಿನ್ನನ್ನ ಮದುವೆಯಾಗಲು ನನಗೆ ಇಷ್ಟ ಇರಲಿಲ್ಲ ಎಂದು ಪ್ರೀಯಾಂಕ, ಪತಿ ಮಂಜುನಾಥನಿಗೆ ಪದೇ ಪದೇ ಕಿಚಾಯಿಸುತ್ತಿದ್ದಳಂತೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಕೊನೆಗೆ ಇದೀಗ ಮಂಜುನಾಥ್ ಪತ್ನಿಯ ಕಿರುಕುಳಕ್ಕೆ ಮನನೊಂದು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಯ ಮುನ್ನ ತನ್ನ ಸಹೋದರನಿಗೆ ಆಡಿಯೋ ಮೇಸೆಜ್ ಕಳುಹಿಸಿದ್ದು, ನನಗೆ ಅವಳ ಜೊತೆ ಜೀವನ ಮಾಡುವುದಕ್ಕೆ ಆಗುತ್ತಿಲ್ಲ. ಆ ಮನೆ ಹಾಳಿಯಿಂದ ನಾನು ಸಾಯುತ್ತಿದ್ದೇನೆ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಆಡಿಯೋ ಮೇಸೆಜ್ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಪತ್ನಿ ಪ್ರೀಯಾಂಕಳ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು,ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಲಂಚ ಪ್ರಕರಣ: ಸಹಾಯಕ ಆಯುಕ್ತೆ ತಬಸ್ಸುಮ್ ಜಹೇರಾ, ಉಪ ತಹಶೀಲ್ದಾರ್ ಶಬ್ಬೀರ್ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಲೋಕಾಯುಕ್ತ ನ್ಯಾಯಾಲಯ
ತುಮಕೂರು: ಇಲ್ಲಿಯ ವಿಶೇಷ ಲೋಕಾಯುಕ್ತ ನ್ಯಾಯಾಲಯವು (special Lokayukta court) ಸಹಾಯಕ ಕಮಿಷನರ್ ತಬಸ್ಸುಮ್ ಜಹೇರಾ (assistant commissioner Tabassum Zahera) ಮತ್ತು ಉಪ ತಹಶೀಲ್ದಾರ್ ಶಬ್ಬೀರ್ ಅಹ್ಮದ್ (deputy tahsildar Shabbir Ahmed) ಅವರಿಬ್ಬರನ್ನು ಲಂಚ (bribe) ಸ್ವೀಕರಿಸಿದ ಆರೋಪದಲ್ಲಿ ದೋಷಿ ಎಂದು ಘೋಷಿಸಿದ್ದು, ಇಬ್ಬರಿಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತಬಸ್ಸುಮ್ ಜಹೇರಾ ಪ್ರಸ್ತುತ ಕೆಐಎಡಿಬಿಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಹ್ಮದ್ ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಉಪ ತಹಶೀಲ್ದಾರ್ ಆಗಿದ್ದಾರೆ.
ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಆವರಗೆರೆ ನಿವಾಸಿ ವಿ.ಟಿ. ಜಯರಾಂ ಅವರ ತಂದೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ದೂರು ಸಲ್ಲಿಸಿದ್ದರು. ತಮ್ಮ ತಂದೆಯ ಹೆಸರಿಗೆ ಜಮೀನಿನ ದಾಖಲೆಗಳನ್ನು ಮರು ವರ್ಗಾಯಿಸಿ, ಮಾಲೀಕತ್ವವನ್ನು ಮರುಸ್ಥಾಪಿಸುವಂತೆ ಕೋರಿ ಅಂದಿನ ಸಹಾಯಕ ಆಯುಕ್ತರಾದ ತಬಸ್ಸುಮ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಎಸಿ ತನ್ನ ಕಚೇರಿಯ ಸಿಬ್ಬಂದಿ ಶಬ್ಬೀರ್ ಅವರನ್ನು ಭೇಟಿಯಾಗುವಂತೆ ಕೇಳಿದ್ದರು. ಈ ಮಧ್ಯೆ ಕೆಲಸ ಮಾಡಿಕೊಡಲು 35,000 ರೂ. ಲಂಚ ಬೇಡಿಕೆ ಮುಂದಿಟ್ಟಿದ್ದರು.
ಲಂಚ ಕೊಟ್ಟರೂ ಜಯರಾಮ್ ಕಂಬ ಸುತ್ತಾಟ ಮುಂದುವರಿದಿತ್ತು. ಕೆಸಲ ಮಾತ್ರ ಆಗಿರಲಿಲ್ಲ. ಬದಲಿಗೆ ಅಂದಿನ ಉಪ ತಹಶೀಲ್ದಾರ್ ಶಬ್ಬೀರ್ ಇನ್ನಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಒಮ್ಮೆ ತಮ್ಮ ನಡುವಣ ಭೇಟಿಯಲ್ಲಿ ಅಧಿಕಾರಿಗಳ ಜೊತೆಗಿನ ಸಂಭಾಷಣೆಯನ್ನು ಜಯರಾಮ್ ರೆಕಾರ್ಡ್ ಮಾಡಿದರು. ಮೇ 23, 2017 ರಂದು ಜಯರಾಂ ಅವರು ಆಡಿಯೋ ಟೇಪ್ ಸಹಿತ ಎಸಿಬಿಗೆ ದೂರು ನೀಡಿದ್ದರು.