ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್

Twitter
Facebook
LinkedIn
WhatsApp
ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್

ಚೆನೈ, ನವೆಂಬರ್ 29:ನೀವು ಎಂತದ್ದೇ ಭೋಜನ ಮಾಡಿ ಕೊನೆಯಲ್ಲೊಂದು ಸಿಹಿ ತಿಂಡಿ ಇದ್ದರೆ ಊಟ ಸಂಪೂರ್ಣ ಎನಿಸುವುದು. ಯಾವುದೇ ಹೊಸ ಕಾರ್ಯ ಆರಂಭ ಮಾಡಿದರೆ, ಏನಾದರೂ ಸಮಾರಂಭಗಳಿದ್ದರೆ, ಏನಾದರೂ ವಿಶೇಷ ದಿನಗಳಿದ್ದರೆ ಸಿಹಿ ಹಂಚುವುದು ಸಾಮಾನ್ಯ. ಸಿಹಿ ತಿಂಡಿ ತಿಂದವರು ಮನಸಾರೆ ಹರಿಸಿದರೆ ಅಂದುಕೊಂಡ ಕಾರ್ಯ ಯಶಸ್ವಿ ಎನ್ನುವ ಮಾತಿದ್ದು, ಸಿಹಿಗೆ ಅದರದ್ದೇ ಆದ ಶ್ರೇಷ್ಠತೆ ಇದೆ.

ಲಡ್ಡು, ಹೋಳಿಗೆ, ಮೈಸೂರು ಪಾಕ್‌, ರಸ ಗುಲ್ಲ, ಪಾಯಸ ಹೀಗೆ ಸಾಲು ಸಾಲು ಸಿಹಿ ತಿಂಡಿಗಳ ಪಟ್ಟಿಯಲ್ಲಿ ಗುಲಾಬ್‌ ಜಾಮೂನ್‌ ಅಗ್ರ ಸ್ಥಾನದಲ್ಲಿಯೇ ನಿಲ್ಲುತ್ತದೆ. ಯಾಕೆಂದರೆ ಗುಲಾಬ್‌ ಜಾಮೂನ್‌ ಅಭಿಮಾನಿಗಳು ಮನೆಯಲ್ಲೊಬ್ಬರು ಇದ್ದೇ ಇರುತ್ತಾರೆ. ಗುಲಾಬ್‌ ಜಾಮೂನ್‌ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಳೆಯರಿಂದ ಹಿರಿಯವರೆಗೆ ಸುಲಭವಾಗಿ ಸವಿಯಬಹುದಾದ ಈ ಸಿಹಿ ತಿಂಡಿಗೆ ಫ್ಯಾನ್‌ ಫಾಲೋವರ್ಸ್‌ ತುಂಬಾ.
ತುಂಬಾ ರುಚಿ, ಸುಲಭವಾಗಿ ಮಾಡಬಹುದಾದ ಗುಲಾಬ್‌ ಜಾಮೂನ್‌ ರುಚಿ ಸವಿಯದವರ ಸಂಖ್ಯೆ ಅತಿ ವಿರಳ. ತನ್ನ ಲುಕ್‌ನಲ್ಲೇ ತಿಂಡಿ ಪ್ರಿಯರನ್ನು ತನ್ನತ್ತ ಸೆಳೆಯುವ ಈ ಗುಲಾಬ್‌ ಜಾಮೂನ್‌ ಹೋಲೆಟ್‌ಗಳಲ್ಲಿ, ಬೇಕರಿಗಳಲ್ಲಿ ಅವರೇ ತಯಾರಿಸಿದ ಸಿಹಿ ಸಿಕ್ಕರೆ, ಇತ್ತೀಚಿಗೆ ರೆಡಿಮೆಡ್‌ ಜಾಮೂನ್‌, ಮಿಕ್ಸ್‌ಗಳು ಸಿಗುತ್ತದೆ. ಗುಲಾಬ್‌ ಜಾಮೂನ್‌ ಇಷ್ಟವೆಂದು ಕಂಡ ಕಂಡಲ್ಲಿ ಇದನ್ನು ಖರೀದಿಸಿ ತಿನ್ನುವವರು ಈ ಸ್ಟೋರಿ ಓದಲೇ ಬೇಕು.

ಸಿಹಿ ಪಾಕದಲ್ಲಿ ಅದ್ದಿದ ಮೆತ್ತನೆಯ ಗುಲಾಬ್‌ ಜಾಮೂನ್‌, ಬಿಸಿ ಬಿಸಿ ಪಾಕದ ಘಮ ನಿಮ್ಮ ಮೂಗಿಗೆ ಬಡಿದು, ಬಾಯಲ್ಲಿ ನೀರು ಬರುತ್ತಿರಲು, ಇನ್ನೇನು ಚಮಚದಿಂದ ಒಂದು ಗುಲಾಬ್‌ ಜಾಮೂನ್‌ ಎತ್ತಿ ಬಾಯಿಗೆ ಇಡಬೇಕು ಅಷ್ಟರಲ್ಲಿ..ಕಂದು ಕಂದು ಜಾಮೂನ್‌ ಮೇಲೆ ಬಿಳಿ ಬಿಳಿ ಬಣ್ಣದ ಹುಳುಗಳ ಸಂಚಾರ ಕಂಡರೆ ನಿಮಗೆ ಹೇಗಾಗಬೇಡ..? ಇದಕ್ಕಿಂದ ನಿರಾಸೆ ಬೇರೊಂದಿದೆಯೇ..?
ಹೌದು ಇದೇ ರೀತಿಯ ನಿರಾಸೆ ಫುಡ್‌ ಬ್ಲಾಗರ್‌ರೊಬ್ಬರು ಅನುಭವಿಸಿದ್ದಾರೆ. ಟಿಎನ್‌ 38 ಫುಡ್ಡಿ ಎನ್ನುವ ಬ್ಲಾಗರ್‌ರೊಬ್ಬರು ಗುಲಾಬ್‌ ಜಾಮೂನ್‌ ಮೇಲೆ ಬಿಳಿ ಹುಳ ಓಡಾಡುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಗುಲಾಬ್‌ ಜಾಮೂನ್‌ಗಳ ಮೇಲೆ ಚಿಕ್ಕ ಚಿಕ್ಕ ಬಿಳಿ ಹುಳ ಓಡಾಡುತ್ತಿರುವುದನ್ನು ಕಾಣಬಹುದುದಾಗಿದೆ.
ವೈರಲ್‌ ಆದ ವಿಡಿಯೋದಲ್ಲಿ ಗುಲಾಬ್ ಜಾಮೂನ್‌ ಬಾಕ್ಸ್​​ ಕೂಡ ತೋರಿಸಲಾಗಿದ್ದು, ಬಾಕ್ಸ್​​ನಲ್ಲಿ ಚೆನ್ನೈನ ಅಶೋಕ್ ನಗರದಲ್ಲಿರುವ ಅಡ್ಯಾರ್ ಆನಂದ ಭವನದ ಔಟ್‌ಲೆಟ್‌ಅನ್ನು ಉಲ್ಲೇಖಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗುತ್ತಿದ್ದು, ಈವರೆಗೂ ಐದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ.
ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವ ಫುಡ್‌ ಬ್ಲಾಗರ್‌ಗೆ ನೋಡುಗರು ಧನ್ಯವಾದ ತಿಳಿಸಿದ್ದು, ನಿಮ್ಮ ಪ್ರಾಮಾಣಿಕ ರಿವ್ಯೂಗಾಗಿ ಥ್ಯಾಂಕ್ಸ್‌ ಎಂದಿದ್ದಾರೆ. ಅದೇನೇ ಇರಲಿ ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿ ಬಿಟ್ಟು ಹೊರಗಡೆ ಗುಲಾಬ್‌ ಜಾಮೂನ್‌ ತಿನ್ನುವಾಗ ಎಚ್ಚರವಹಿಸಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist