ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕೆಎಸ್ಆರ್ಟಿಸಿಯ ಹೊಚ್ಚಹೊಸ ಪಲ್ಲಕ್ಕಿ ಬಸ್ ಗಳ ಸ್ಪೆಷಾಲಿಟಿ ಏನು!

Twitter
Facebook
LinkedIn
WhatsApp
ಕೆಎಸ್ಆರ್ಟಿಸಿಯ ಹೊಚ್ಚಹೊಸ ಪಲ್ಲಕ್ಕಿ ಬಸ್ ಗಳ ಸ್ಪೆಷಾಲಿಟಿ ಏನು!

ಬೆಂಗಳೂರು, ಅ.08: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ‘ಪಲ್ಲಕಿ’ (ಸಂತೋಷವು ಪ್ರಯಾಣಿಸುತ್ತಿದೆ) ಹೆಸರಿನ ಹೊಸ ಬಸ್ ಸೇವೆಯನ್ನು ಹೊರತಂದಿದೆ. ಕೆಎಸ್ಆರ್ಟಿಸಿ ನಿಗಮ ಹೊಸದಾಗಿ 40 ನಾನ್ ಏಸಿ ಸ್ಲೀಪರ್ ಬಸ್ ಗಳನ್ನ ಖರೀದಿ ಮಾಡಿದ್ದು , ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೂತನ ಬಸ್ ಗಳಿಗೆ ಚಾಲನೆ ನೀಡಿದ್ದಾರೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಗಳ‌ ಮೇಲೆ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕೆಎಸ್ಆರ್ಟಿಸಿ ಎಂಡಿ ಅನ್ಬು ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ರು.

 

ಕೆಎಸ್ಆರ್ಟಿಸಿ ಹೊಸದಾಗಿ ಖರೀದಿ ಮಾಡಿರುವ ನಾನ್ ಏಸಿ ಸ್ಲೀಪರ್ ಬಸ್ ಗಳಿಗೆ ಪಲ್ಲಕ್ಕಿ ಎಂದು ಹೆಸರಿಡಲಾಗಿದ್ದು ದೂರದ ಜಿಲ್ಲೆಗಳಿಗೆ ಸಂಚರಿಸಲಿವೆ. 6 ರಿಂದ 8 ಗಂಟೆಗಳ ಜರ್ನಿ ಇರುವ ಜಿಲ್ಲೆಗಳಿಗೆ 30 ಬಸ್ ಗಳು ಹಾಗೂ ಹೊರ ರಾಜ್ಯಕ್ಕೆ 10 ಬಸ್ ಗಳನ್ನ ಕಾರ್ಯಾಚರಣೆ ಮಾಡಲಾಗುತ್ತದೆ. ಇಲ್ಲಿಯವರೆಗೂ ಕೆಎಸ್ಆರ್ಟಿಸಿ ಸ್ಲೀಪರ್ ಬಸ್ ಗಳಿಗೆ ಯಾವುದೇ ಬ್ರ್ಯಾಂಡ್ ಇರಲಿಲ್ಲ. ಸದ್ಯ ನಿಗಮ ಖರೀದಿ ಮಾಡಿರುವ ಹೊಸ ಬಸ್​ಗಳಿಗೆ ಪಲ್ಲಕ್ಕಿ ಎಂದು ಹೆಸರಿಟ್ಟು ನಾಮಕರಣ ಮಾಡಲಾಗಿದೆ. ಪಲ್ಲಕ್ಕಿ ಬ್ರ್ಯಾಂಡ್ ಬಸ್​ಗಳು ರಾಜ್ಯದ ಜನರಿಗೆ ಸೇವೆ ನೀಡಲು ರಸ್ತೆಗಿಳಿದಿವೆ.

 

ಪಲ್ಲಕಿ ಬಸ್ಸುಗಳ ಬಗ್ಗೆ ತಿಳಿದುಕೊಳ್ಳಬೇಕಾದ ಐದು ವಿಷಯಗಳು

  1. ಪಲ್ಲಕಿ ಬಸ್ಸುಗಳು 30 ಸ್ಲೀಪಿಂಗ್ ಬರ್ತ್‌ಗಳನ್ನು ಹೊಂದಿದ್ದು, ಪ್ರಯಾಣದ ಸಮಯದಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡುವ ಸೌಲಭ್ಯವನ್ನು ಹೊಂದಿದೆ. ಪ್ರತಿ ಬರ್ತ್‌ನಲ್ಲಿ ಮೀಸಲಾದ ಮೊಬೈಲ್ ಹೋಲ್ಡರ್ ಮತ್ತು ಪ್ರತಿ ಪ್ರಯಾಣಿಕರಿಗೆ ಚಪ್ಪಳಿ, ಶೂ‌ ಇಡಲು ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿದೆ.
  2. ಬಸ್ಸುಗಳನ್ನು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ. ಬಸ್ಸಿನಲ್ಲಿ ವಿಶೇಷ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಬಸ್ಸಿನೊಳಗೆ ಯಾವುದೇ ಅಹಿತಕರ ಸಂದರ್ಭದಲ್ಲಿ ಎಲ್ಲಾ ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಬಸ್ ನಲ್ಲಿ ಅಡಿಯೋ ಸ್ವೀಕರ್ ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ ಇದೆ.
  3. ಪ್ರಯಾಣಿಕರು ಬಸ್​ನಲ್ಲಿ ಆಗುವ ಸಮಸ್ಯೆಗಳನ್ನು ಬಸ್ ಸಿಬ್ಬಂದಿಗೆ ಸಾರ್ವಜನಿಕ ವಿಳಾಸ ವ್ಯವಸ್ಥೆ ಮತ್ತು ಬಸ್‌ನಲ್ಲಿ ಒದಗಿಸಲಾದ ಆಡಿಯೊ ಸ್ಪೀಕರ್‌ಗಳ ಮೂಲಕ ತಿಳಿಸಬಹುದು.
  4. ಬಸ್ಸುಗಳನ್ನು ರಾತ್ರಿಯ ಪ್ರಯಾಣಕ್ಕಾಗಿ ನಿರ್ಮಿಸಲಾಗಿದೆ. ಇವು 11.3 ಮೀಟರ್ ಉದ್ದದ ನಾನ್ ಎಸಿ ಬಸ್. ಬಿಎಸ್-6 ತಂತ್ರಜ್ಞಾನದ ಮಾದರಿಯ ಹೆಚ್.ಪಿ. ಇಂಜಿನ್ ಅಳವಡಿಸಲಾಗಿದೆ.
  1. ಕೆಎಸ್‌ಆರ್‌ಟಿಸಿ ಪಲ್ಲಕಿ ಬಸ್‌ಗಳಿಗೆ ಟ್ಯಾಗ್‌ಲೈನ್ ಅನ್ನು ನೀಡಿದೆ, ಅದು ‘ಸಂತೋಷವು ಪ್ರಯಾಣಿಸುತ್ತಿದೆ.’ ಪಲ್ಲಕಿ ಬಸ್‌ಗಳು ಕರ್ನಾಟಕದ ಮತ್ತು ಹೊರಗಿನ ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಪ್ರಯೋಜನಕಾರಿಯಾಗಿದೆ.
  2. ಸೀಟ್ ನಂಬರ್ ಮೇಲೆ ಎಲ್ ಇಡಿ ಅಳವಡಿಕೆ ಮಾಡಲಾಗಿದೆ. ಓದಲು ಉತ್ತಮ ಬೆಳಕಿನ ಎಲ್.ಇ.ಡಿ ಲೈಟ್ ಅಳವಳಿಸಲಾಗಿದೆ. ಡಿಜಿಟಲ್ ಗಡಿಯಾರ, ಹಾಗೆ ಎಲ್.ಇ.ಡಿ. ಫ್ಲೋರ್ ವ್ಯವಸ್ಥೆ ಇದೆ.
  3. ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ ಇದ್ದು ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ -ಕ್ಯಾಮರಾ ಅಳವಡಿಸಲಾಗಿದೆ. 40 ಬಸ್‌ಗಳ ಪೈಕಿ 30 ಬಸ್‌ಗಳನ್ನು ರಾಜ್ಯದೊಳಗೆ ಸಂಚರಿಸಲಿವೆ. ಉಳಿದ 10 ಬಸ್‌ಗಳು ಬೆಂಗಳೂರಿನಿಂದ‌ ಹೊರರಾಜ್ಯಗಳಿಗೆ ಸಂಚರಿಸಲಿವೆ.

Palakki Bus

ಸಾರಿಗೆ ಇಲಾಖೆ 40 ಪಲ್ಲಕ್ಕಿ ಸ್ಲೀಪರ್ ಬಸ್ ಗಳು ಸೇರಿ ಒಟ್ಟು 140 ಬಸ್ ಗಳನ್ನ ಖರೀದಿ ಮಾಡಿದ್ದು ನೂರು ಕರ್ನಾಟಕ ಸಾರಿಗೆ ಸಾಮಾನ್ಯ ಬಸ್ ಗಳು ಹಾಗೂ 40 ಪಲ್ಲಕ್ಕಿ ಬಸ್ ಗಳು ಕಾರ್ಯಾಚರಣೆ ಆರಂಭಿಸಿವೆ. ಉಳಿದ ಬಸ್ ಗಳನ್ನ ಪರೀಕ್ಷಾರ್ಥ ಸಂಚಾರ ನಡೆಸಿ ನಂತರ ಪ್ರಯಾಣಿಕರ ಸೇವೆಗೆ ನೀಡಲಾಗುತ್ತದೆ. ಒಟ್ನಲ್ಲಿ ಶಕ್ತಿ ಯೋಜನೆಯಿಂದ ಗೆದ್ದು ಬೀಗುತ್ತಿರುವ ಸಾರಿಗೆ ಇಲಾಖೆ , ಮತ್ತಷ್ಟು ಸ್ಟ್ರಾಂಗ್ ಆಗಲು ಹೊಸ ಹೊಸ ಬಸ್ ಗಳ ಖರೀದಿಗೆ ಮುಂದಾಗಿದ್ದು, ಈ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಮುಂದಾಗಿದೆ. ಒಂದು ಪಲ್ಲಕ್ಕಿ ಬಸ್ ಬೆಲೆ 45 ಲಕ್ಷ ರುಪಾಯಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist