ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?

Twitter
Facebook
LinkedIn
WhatsApp
ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?

ಹೈದರಾಬಾದ್​: ಕೋವಿಡ್​ 19 ಲಸಿಕೆಯಾಗಿರುವ ಕೋವಾಕ್ಸಿನ್​ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆ, ಥ್ರಂಬೋಸೈಟೋಪೆನಿಯಾ, ಟಿಟಿಎಸ್, ವಿಐಟಿಟಿ, ಪೆರಿಕಾರ್ಡಿಟಿಸ್, ಮಯೋಕಾರ್ಡಿಟಿಸ್ ನಂತಹ ಯಾವುದೇ ಅಡ್ಡ ಪರಿಣಾಮದ ಅಪಾಯವನ್ನು ಹೊಂದಿಲ್ಲ. ಇದನ್ನು ಸುರಕ್ಷತೆ, ಪರಿಣಾಮಕಾರಿತ್ವದ ಆದ್ಯತೆಯೊಂದಿಗೆ ಲಸಿಕೆ ಅಭಿವೃದ್ಧಿಪಡಿಸಲಾಗಿದೆ ಎಂದು ಭಾರತ್​ ಬಯೋಟೆಕ್​ ಹೇಳಿಕೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಜಾಗತಿಕ ಔಷಧ ತಯಾರಿಕಾ ಕಂಪನಿಯಾಗಿರುವ ಅಸ್ಟ್ರಾಜೆನಕಾ, ಆಕ್ಸಫರ್ಡ್​ ಯೂನಿವರ್ಸಿಟಿ ಜೊತೆ ಸೇರಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್​​ ಲಸಿಕೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಸ್ಥೆ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೋವಿಡ್​​ ಲಸಿಕೆ ಸುರಕ್ಷಿತತೆ ಬಗ್ಗೆ ಪ್ರಶ್ನೆ ಮೂಡಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್​ ಮೂಲದ ಕಂಪನಿ ಭಾರತ್​​ ಬಯೋಟೆಕ್​​​ ಕೋವಾಕ್ಸಿನ್​ ಸುರಕ್ಷತೆ ಭರವಸೆ ಕುರಿತು ಈ ಹೇಳಿಕೆ ಬಿಡುಗಡೆ ಮಾಡಿದೆ.

ಅಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿದ ಮತ್ತು ಪುಣೆ ಮೂಲದ ಸೀರಂ ಇನ್ಸುಟಿಟ್ಯೂಟ್​ ತಯಾರಿಸಿದ ಕೋವಿಶೀಲ್ಡ್​​ನ 175 ಕೋಟಿ ಡೋಸ್​ ಅನ್ನು ಭಾರತದಲ್ಲಿ ನಿರ್ವಹಿಸಲಾಗಿದೆ ಎಂದು ವರದಿ ತಿಳಿಸಿದೆ. ಭಾರತ ಸರ್ಕಾರದ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಪರಿಣಾಮಕಾರಿ ಪ್ರಯೋಗ ನಡೆಸಿದ ಏಕೈಕ ಕೋವಿಡ್​ 19 ಲಸಿಕೆ ಕೋವಾಕ್ಸಿನ್ ಆಗಿದೆ ಎಂದು ಕಂಪನಿ ತಿಳಿಸಿದೆ.

ಕೋವಾಕ್ಸಿನ್ ಪರವಾನಗಿ ಪ್ರಕ್ರಿಯೆಯ ಭಾಗವಾಗಿ 27,000 ಕ್ಕೂ ಹೆಚ್ಚು ವಿಷಯಗಳಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಕ್ಲಿನಿಕಲ್ ಟ್ರಯಲ್ ಮೋಡ್‌ನಲ್ಲಿ ನಿರ್ಬಂಧಿತ ಬಳಕೆಯ ಅಡಿ ಇದು ಪರವಾನಗಿ ಪಡೆದಿದೆ. ಈ ವೇಳೆ ಹಲವು ವಿಷಯಗಳಿಗೆ ವಿವರವಾದ ಸುರಕ್ಷತಾ ವರದಿಯನ್ನು ಕೈಗೊಳ್ಳಲಾಗಿದೆ. ಕೋವಾಕ್ಸಿನ್​​ ಸುರಕ್ಷತೆಯನ್ನು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮೌಲ್ಯಮಾಪನ ನಡೆಸಲಾಗಿದೆ ಎಂದು ತಯಾರಿಕಾ ಸಂಸ್ಥೆ ತಿಳಿಸಿದೆ.

ಕೋವಾಕ್ಸಿನ್​ ಉತ್ಪನ್ನದ ಜೀವನ ಚಕ್ರದ ಉತ್ಪಾದನೆಯಲ್ಲಿ ಸುರಕ್ಷತಾ ಮೇಲ್ವಿಚಾರಣೆಯನ್ನು ಮುಂದುವರೆಸಲಾಗಿದೆ. ರಕ್ತ ಹೆಪ್ಪುಗಟ್ಟುವಿಕೆ, ಥ್ರಂಬೋಸೈಟೋಪೆನಿಯಾ, ಟಿಟಿಎಸ್, ವಿಐಟಿಟಿ, ಪೆರಿಕಾರ್ಡಿಟಿಸ್, ಮಯೋಕಾರ್ಡಿಟಿಸ್, ಇತ್ಯಾದಿಗಳ ಬಗ್ಗೆ ಲಸಿಕೆಯು, ಯಾವುದೇ ಅಡ್ಡ ಪರಿಣಾಮವನ್ನು ಹೊಂದಿಲ್ಲ. ಇದು ಹೆಚ್ಚಿನ ಸುರಕ್ಷತಾ ದಾಖಲೆ ಹೊಂದಿದೆ.

ಭಾರತ್ ಬಯೋಟೆಕ್ ತಂಡವು ಕೋವಿಡ್-19 ಲಸಿಕೆಗಳ ಪರಿಣಾಮಕಾರಿತ್ವವು ಅಲ್ಪಾವಧಿಯದ್ದಾಗಿದ್ದರೂ, ರೋಗಿಗಳ ಸುರಕ್ಷತೆಯ ಮೇಲಿನ ಪರಿಣಾಮವು ಜೀವಿತಾವಧಿಯವರೆಗೆ ಇರಲಿದೆ ಎಂಬುದರ ಅರಿವನ್ನು ಹೊಂದಿತ್ತು. ಇದರಿಂದ ಲಸಿಕೆಯನ್ನು ಜನರ ಸುರಕ್ಷತೆ ಗಮನದಲ್ಲಿರಿಸಿ ತಯಾರಿಸಲಾಗಿದೆ ಎಂದು ಕಂಪನಿ ಇದೇ ವೇಳೆ ಸ್ಪಷ್ಟಪಡಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist