ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪಶ್ಚಿಮ ಬಂಗಾಳ : ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ; ಇಂದು ಮರು ಮತದಾನ !

Twitter
Facebook
LinkedIn
WhatsApp
WhatsApp Image 2023 07 10 at 7.52.45 AM

ಪಶ್ಚಿಮ ಬಂಗಾಳದ ಪಂಚಾಯತ್​ ಚುನಾವಣೆ (West Bengal Panchayat Elections) ವೇಳೆ ಭಾರೀ ಹಿಂಸಾಚಾರ (Violence) ನಡೆದ ಹಿನ್ನೆಲೆ 604 ಮತಗಟ್ಟೆಗಳಲ್ಲಿ ನಡೆದ ಮತದಾನವನ್ನು ಅಸಿಂಧುಗೊಳಿಸಿ ಇಂದು (ಜುಲೈ 9) ರಾಜ್ಯ ಚುನಾವಣಾ ಆಯೋಗವು ಆದೇಶಿಸಿದೆ. ಅಲ್ಲದೆ, ನಾಳೆ (ಜುಲೈ 10) ಈ ಬೂತ್​ಗಳಿಗೆ ಮರುಮತದಾನ ನಡೆಯಲಿದೆ ಎಂದು ಘೋಷಿಸಿದ್ದು, ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ಮುರ್ಷಿದಾಬಾದ್‌ನಲ್ಲಿ 175 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದ್ದು, ಮಾಲ್ಡಾದಲ್ಲಿ 112, ನಾಡಿಯಾದಲ್ಲಿ 89, ಉತ್ತರ 24 ಪರಗಣಗಳಲ್ಲಿ 46, ದಕ್ಷಿಣ 24 ಪರಗಣಗಳಲ್ಲಿ 36, ಪುರ್ಬಾ ಮೇದಿನಿಪುರದಲ್ಲಿ 31, ಹೂಗ್ಲಿಯಲ್ಲಿ 29, ದಕ್ಷಿಣ ದಿನಾಜ್‌ಪುರದಲ್ಲಿ 18, ಜಲ್ಪೈಗುರಿಯಲ್ಲಿ 14, ಬಿರ್ಭೂಮ್ನಲ್ಲಿ 14, ಪಶ್ಚಿಮ ಮೇದಿನಿಪುರದಲ್ಲಿ 10, ಬಂಕುರಾದಲ್ಲಿ 8, ಹೌರಾದಲ್ಲಿ 8, ಪಶ್ಚಿಮ ಬರ್ಧಮಾನ್​ನಲ್ಲಿ 6, ಪುರುಲಿಯಾದಲ್ಲಿ 4, ಅಲಿಪುರ್‌ದುವಾರ್‌ನಲ್ಲಿ 1 ಹಾಗೂ ಪುರ್ಬಾ ಬರ್ಧಮಾನ್‌ನಲ್ಲಿ 3 ಬೂತ್​ಗಳಿಗೆ ಮರು ಮತದಾನ ನಡೆಯಲಿದೆ​.

ದಕ್ಷಿಣ 24 ಪ್ಯಾರಗನ್‌ಗಳಲ್ಲಿ, ಡೈಮಂಡ್ ಹಾರ್ಬರ್‌ನಲ್ಲಿ 10 ಸೇರಿದಂತೆ 36 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದ್ದು, ಗೋಸಾಬ ಮತ್ತು ಜೋಯನಗರದಲ್ಲಿ ತಲಾ 5, ಬಸಂತಿಯಲ್ಲಿ 4, ಕುಲ್ತಾಲಿ, ಜೋಯ್‌ನಗರ II ರಲ್ಲಿ ತಲಾ 3, ಮಂದಿರ ಬಜಾರಿನಲ್ಲಿ 2, ಬಿಷ್ಣುಪುರ್, ಬರುಯಿಪುರ್, ಮಥುರಾಪುರ ಮತ್ತು ಮಗ್ರಾಹತ್‌ನಲ್ಲಿ ತಲಾ ಒಂದೊಂದು ಬೂತ್​ಗಳಲ್ಲಿ ಮರು ಮತದಾನ ನಡೆಯಲಿದೆ.

ಪಶ್ಚಿಮ ಬಂಗಾಳದಲ್ಲಿ ಶನಿವಾರ ಪಂಚಾಯತ್ ಚುನಾವಣೆಗೆ ಮತದಾನ ನಡೆದಿತ್ತು. ಈ ವೇಳೆ ಹಲವೆಡೆ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಹಿಂಸಾಚಾರಗಳು ನಡೆದಿದ್ದವು. ಘಟನೆಯಲ್ಲಿ 20 ಮಂದಿ ಸಾವನ್ನಪ್ಪಿದ್ದರು. ಮತಪೆಟ್ಟಿಗೆಗಳನ್ನು ಧ್ವಂಸಗೊಳಿಸಿದ ಹಲವಾರು ಘಟನೆಗಳು ಕೂಡ ನಡೆದಿರುವುದಾಗಿ ವರದಿಯಾಗಿತ್ತು. ಅದರಂತೆ ರಾಜ್ಯ ಚುನಾವಣಾ ಆಯೋಗವು ಹಿಂಸಾಚಾರದಲ್ಲಿ ಆದ ಸಾವುಗಳು ಮತ್ತು ಹಿಂಸಾಚಾರದ ಬಗ್ಗೆ ವಿವರವಾದ ವರದಿಯನ್ನು ಜಿಲ್ಲಾಧಿಕಾರಿಗಳಿಂದ ಕೇಳಿದೆ.

ರಾಜ್ಯದ ಮೂರು ಹಂತದ ಪಂಚಾಯತ್ ವ್ಯವಸ್ಥೆಯಲ್ಲಿ ಒಟ್ಟು 73,887 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 2.06 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ 5.67 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದರೆ, ತಾತ್ಕಾಲಿಕವಾಗಿ ಶೇಕಡಾ 66.28 ರಷ್ಟು ಮತದಾನ ದಾಖಲಾಗಿದೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ