ತಲೆಗೆ ನಕಲಿ ಕೂದಲು ಧರಿಸಿ ಎರಡನೇ ಮದುವೆಯಾಗಲು ಯತ್ನ; ವರನಿಗೆ ಥಳಿತ ವಿಡಿಯೋ ವೈರಲ್!

ತಮ್ಮ ಮಗಳಿಗೆ ಸುಂದರವಾದ ವರನನ್ನು ಹುಡುಕಿದ್ದೇನೆ ಎನ್ನುವ ಭ್ರಮೆಯಲ್ಲಿ ಕುಟುಂಬಸ್ಥರಿದ್ದರು. ಆದರೆ ತಲೆಯಲ್ಲಿ ಒಂದೂ ಕೂದಲಿಲ್ಲದಿದ್ದರೂ ಕೂದಲನ್ನು ಅಂಟಿಸಿಕೊಂಡು ಯಾಮಾರಿಸಿದ್ದ ವರ. ಈ ವಿಷಯ ತಿಳಿದ ಹುಡುಗಿಯ ಮನೆಯವರು ಆತನನ್ನು ಥಳಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ವರ ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು. ಆದರೂ ಕರುಣೆ ತೋರದೆ ಥಳಿಸುತ್ತಲೇ ಇದ್ದರು. ವರದಿ ಪ್ರಕಾರ, ಬಿಹಾರದ ಗಯಾದ ಇಕ್ಬಾಲ್ಪುರ ಪ್ರದೇಶದ ನಿವಾಸಿಯಾಗಿರುವ ವ್ಯಕ್ತಿ ದೋಭಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜೌರಾ ಗ್ರಾಮದ ಹುಡುಗಿಯನ್ನು ಮದುವೆಯಾಗಬೇಕಿತ್ತು.
When the poll was revealed, the bald groom was thrashed fiercely, the person had reached for second marriage by applying fake hair. The case is of Bajaura village under Dobhi police station. #Bihar #Viralvideo pic.twitter.com/QSPSeFrrF7
— Yauvani (@yauvani_1) July 12, 2023
ವರದಿಗಳ ಪ್ರಕಾರ, ಇದು ಆತನ ಎರಡನೇ ಮದುವೆಯಾಗಿತ್ತು. ವಧುಗಾಗಲಿ ಆಕೆಯ ಮನೆಯವರಿಗಾಗಲಿ ಆತನ ತಲೆಯಲ್ಲಿ ಕೂದಲಿಲ್ಲ ಎನ್ನುವ ಸತ್ಯ ಗೊತ್ತಿರಲಿಲ್ಲ. ಮದುವೆ ಮನೆಯಲ್ಲಿ ಸೆಹ್ರಾ ಅಡಿಯಲ್ಲಿ ವಿಗ್ ಬಳಸಿ ತಮ್ಮ ಬೋಳು ತಲೆಯನ್ನು ಮರೆಮಾಚಲು ಯತ್ನಿಸಿದ್ದ.
ಮದುಮಗನ ದಿಬ್ಬಣ ಬಂದಿತ್ತು, ಬಳಿಕ ವಿಷಯ ತಿಳಿದು ವಧುವಿನ ಕುಟುಂಬದವರು ಬೇಸರಗೊಂಡರು. ಬಳಿಕ ಆತ ಮೊದಲ ಪತ್ನಿ ಬದುಕಿದ್ದರೂ ಎರಡನೇ ಮದುವೆಯಾಗಲು ಹೊರಟಿದ್ದಾನೆ ಎನ್ನುವ ಸತ್ಯ ತಿಳಿಯುತ್ತಿದ್ದಂತೆ ಕೋಪಗೊಂಡ ಕುಟುಂಬಸ್ಥರು ಆತನನ್ನು ಥಳಿಸಿದ್ದಾರೆ.
ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ನಲ್ಲಿ ಜನರು ಮದುವೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಮಹತ್ವವನ್ನು ಚರ್ಚಿಸುತ್ತಿದ್ದಾರೆ.
ಎಚ್ಚರ..ಎಚ್ಚರ..! ಬೆಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ ‘ಚಡ್ಡಿ ಗ್ಯಾಂಗ್’
ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸುತ್ತಮುತ್ತ ಮತ್ತೆ ಚಡ್ಡಿ ಗ್ಯಾಂಗ್(chaddi Gang) ಹಾವಳಿ ಹೆಚ್ಚಾಗಿದೆ. ಈ ಗ್ಯಾಂಗ್ ಕೈಯಲ್ಲಿ ಆಯುಧಗಳನ್ನು ಹಿಡಿದು ಸರ್ಜಾಪುರ ರಸ್ತೆ ಸುತ್ತಮುತ್ತ ಕಳ್ಳತನಕ್ಕಿಳಿದಿದೆ. ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನ ಪ್ರಯತ್ನಿಸಿರುವುದು ಸಿಸಿ ಟಿವಿ ದೃಶ್ಯದಿಂದ ಬಯಲಿಗೆ ಬಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ವಿಲ್ಲಾ, ಅಪಾರ್ಟ್‌ಮೆಂಟ್ ಗಳ ಬಳಿ ಕಳ್ಳತನ ಯತ್ನಿಸುತ್ತಿರುವ ಗ್ಯಾಂಗ್ನ ಚಲನವಲನ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದು, ಪೊಲೀಸರ ಮೊರೆ ಹೋಗಿದ್ದಾರೆ.
ಯಾರಿಗೂ ಗುರುತು ಸಿಗದಂತೆ ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಸರ್ಜಾಪುರ ರಸ್ತೆ ಸುತ್ತಮುತ್ತಲಿನ ವಿಲ್ಲಾ, ಅಪಾರ್ಟ್ಮೆಂಟ್ಗಳ ಬಳಿ ಕಳ್ಳತನಕ್ಕೆ ಯತ್ನಿಸಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡಿ ಜನರು ಭಯಭೀತರಾಗಿದ್ದಾರೆ.
ಚಡ್ಡಿ ಗ್ಯಾಂಗ್ ಕರಾಮತ್ತು ವಿಲ್ಲಾ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಕೈಯಲ್ಲಿ ಹರಿತವಾದ ಆಯುಧಗಳನ್ನಿಟ್ಟುಕೊಂಡು ಓಡಾಡುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆಯೂ ಕೆಲವು ಬಾರಿ ಈ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿತ್ತು. ಇನ್ನು ಈ ಬಗ್ಗೆ ಸ್ಥಳೀಯ ನಿವಾಸಿಗಳು ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಚಡ್ಡಿ ಗ್ಯಾಂಗ್ ಎಷ್ಟು ಖತರ್ನಾಕ್ ಅಂದ್ರೆ ಫೀಲ್ಡಿಗೆ ಇಳಿದ್ರೆ ಮುಗೀತು ಶರವೇಗದಲ್ಲಿ ಬಂದು ದೋಚಿ ಪರಾರಿಯಾಗುತ್ತದೆ. ಈ ಬಗ್ಗೆ ಜನರು ಎಚ್ಚರದಿಂದ ಇರುವುದು ಒಳಿತು.