ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

WCL 2024: ಇರ್ಫಾನ್ - ಯೂಸುಫ್ ಪಠಾಣ್ ಸಿಡಿಲಬ್ಬರದ ಬ್ಯಾಟಿಂಗ್, ಭಾರತ - ಪಾಕಿಸ್ತಾನ ಫೈನಲ್​ಗೆ ಲಗ್ಗೆ!

Twitter
Facebook
LinkedIn
WhatsApp
WCL 2024: Irfan -Yusuf Pathan batting India Pakistan final

WCL 2024: ಶುಕ್ರವಾರ (ಜುಲೈ 12) ಇಂಗ್ಲೆಂಡ್‌ನ ನಾರ್ಥಾಂಪ್ಟನ್‌ನಲ್ಲಿರುವ ಕೌಂಟಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್ – WCL 2024 ರ  ಪಂದ್ಯದಲ್ಲಿ ಭಾರತ ಚಾಂಪಿಯನ್‌ಗಳು ಆಸ್ಟ್ರೇಲಿಯಾ ಚಾಂಪಿಯನ್‌ಗಳನ್ನು 86 ರನ್‌ಗಳ ಅಂತರದಿಂದ ಸೋಲಿಸಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟಿದೆ.

ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಅವರ ತ್ವರಿತ ಅರ್ಧಶತಕಗಳ ನಂತರ ಭಾರತ ಚಾಂಪಿಯನ್ಸ್ ತಮ್ಮ ನಿಗದಿತ 20 ಓವರ್‌ಗಳಲ್ಲಿ 254/6 ರನ್ನುಗಳ ಬೃಹತ್ ಮೊತ್ತಕ್ಕೆ ಬಲಗೊಳಿಸಿದರು, ಆಲ್ ರೌಂಡ್ ಬೌಲಿಂಗ್ ಪ್ರಯತ್ನವು ಆಸ್ಟ್ರೇಲಿಯಾ ಚಾಂಪಿಯನ್‌ಗಳನ್ನು 168/7 ಕ್ಕೆ ನಿರ್ಬಂಧಿಸಿತು.

ಇನಿಂಗ್ಸ್ ಆರಂಭಿಸಿದ ಇಂಡಿಯಾ ಚಾಂಪಿಯನ್ಸ್ ತಂಡಕ್ಕೆ ಆರಂಭಿಕ ರಾಬಿನ್ ಉತ್ತಪ್ಪ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮತ್ತೊಂದೆಡೆ ಅಂಬಾಟಿ ರಾಯುಡು ಕೇವಲ 14 ರನ್​ಗಳಿಸಿ ಔಟಾದರು. ಇದಾಗ್ಯೂ 35 ಎಸೆತಗಳನ್ನು ಎದುರಿಸಿದ ಉತ್ತಪ್ಪ 4 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 65 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸುರೇಶ್ ರೈನಾ ಕೇವಲ 5 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಯುವರಾಜ್ ಸಿಂಗ್ 28 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 59 ರನ್ ಬಾರಿಸಿದರು. 

ಅಂತಿಮ ಓವರ್​ಗಳ ವೇಳೆ ಜೊತೆಗೂಡಿದ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ 6 ಓವರ್​ಗಳಲ್ಲಿ 95 ರನ್​ಗಳು ಮೂಡಿಬಂತು. 

ಇದರ ನಡುವೆ 23 ಎಸೆತಗಳನ್ನು ಎದುರಿಸಿದ ಯೂಸುಫ್ ಪಠಾಣ್ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 52 ರನ್ ಬಾರಿಸಿದರೆ, ಇರ್ಫಾಣ್ ಪಠಾಣ್ ಕೇವಲ 19 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 50 ರನ್ ಚಚ್ಚಿದರು. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 252 ರನ್ ಕಲೆಹಾಕಿತು.

253 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 30 ರನ್​ಗಳಿಸುವಷ್ಟರಲ್ಲಿ ಆರಂಭಿಕರಾದ ಶಾನ್ ಮಾರ್ಷ್ (2) ಹಾಗೂ ಆರೋನ್ ಫಿಂಚ್ (16) ಪೆವಿಲಿಯನ್​ ಸೇರಿದ್ದರು. ಇನ್ನು ಬೆನ್ ಡಂಕ್ 10 ರನ್ ಬಾರಿಸಿದರೆ, ಕ್ಯಾಲಮ್ ಫರ್ಗುಸನ್ 23 ರನ್​ಗಳಿಸಲಷ್ಟೇ ಶಕ್ತರಾದರು.

ಹಾಗೆಯೇ ಡೇನಿಯಲ್ ಕ್ರಿಶ್ಚಿಯನ್ ಅವರನ್ನು 18 ರನ್​ಗೆ ಔಟ್ ಮಾಡುವಲ್ಲಿ ಹರ್ಭಜನ್ ಸಿಂಗ್ ಯಶಸ್ವಿಯಾದರು. ಅಂತಿಮವಾಗಿ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 168 ರನ್​ಗಳಿಸಿ 86 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಈ ಗೆಲುವಿನೊಂದಿಗೆ ಇಂಡಿಯಾ ಚಾಂಪಿಯನ್ಸ್ ತಂಡವು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಫೈನಲ್​ಗೆ ಪ್ರವೇಶಿಸಿದೆ. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಭಾರತ vs ಆಸ್ಟ್ರೇಲಿಯಾ WCL 2024 ಸೆಮಿ-ಫೈನಲ್ ಸ್ಕೋರ್‌ಕಾರ್ಡ್ IND vs AUS ಸಂಕ್ಷಿಪ್ತ ಸ್ಕೋರ್‌ಗಳು: ಭಾರತ – 20 ಓವರ್‌ಗಳಲ್ಲಿ 254/6 (ರಾಬಿನ್ ಉತ್ತಪ್ಪ 65, ಯುವರಾಜ್ ಸಿಂಗ್ 59, ಯೂಸುಫ್ ಪಠಾಣ್ 51*, ಇರ್ಫಾನ್ ಪಠಾಣ್ 50; ಪೀಟರ್ ಸಿಡ್ಲ್ 4/57) ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 168/7  (ನಾಥನ್ ಕೌಲ್ಟರ್-ನೈಲ್ 30, ಟಿಮ್ ಪೈನ್ 40*; ಪವನ್ ನೇಗಿ 2/35, ಧವಳ್ ಕುಲಕರ್ಣಿ 2/43)

ಪ್ರಶಸ್ತಿಗಳು ಮತ್ತು ಮ್ಯಾನ್ ಆಫ್ ದಿ ಮ್ಯಾಚ್ WCL 2024 ಸೆಮಿಫೈನಲ್ ಫಲಿತಾಂಶ:

ಪಂದ್ಯದ ಆಟಗಾರ: ಯುವರಾಜ್ ಸಿಂಗ್ ( 28 ಎಸೆತಗಳಲ್ಲಿ 59)

ಪಂದ್ಯದ ಬ್ಯಾಟರ್: ಯೂಸುಫ್ ಪಠಾಣ್ (ಭಾರತ) – 23 ಎಸೆತಗಳಲ್ಲಿ 51*

ಪಂದ್ಯದ ಸಿಹಿ ಕ್ಷಣ: ಇರ್ಫಾನ್ ಪಠಾಣ್ (ಭಾರತ)

ಇಂಡಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಗುರುಕೀರತ್ ಸಿಂಗ್ ಮಾನ್ , ಸುರೇಶ್ ರೈನಾ , ಅಂಬಟಿ ರಾಯುಡು , ಯುವರಾಜ್ ಸಿಂಗ್ (ನಾಯಕ) , ಯೂಸುಫ್ ಪಠಾಣ್ , ಇರ್ಫಾನ್ ಪಠಾಣ್ , ಪವನ್ ನೇಗಿ , ವಿನಯ್ ಕುಮಾರ್ , ಹರ್ಭಜನ್ ಸಿಂಗ್ , ಧವಳ್ ಕುಲಕರ್ಣಿ.

ಆಸ್ಟ್ರೇಲಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ಆರೋನ್ ಫಿಂಚ್ , ಕ್ಯಾಲಮ್ ಫರ್ಗುಸನ್ , ಬೆನ್ ಕಟಿಂಗ್ , ಡೇನಿಯಲ್ ಕ್ರಿಶ್ಚಿಯನ್ , ಟಿಮ್ ಪೈನ್ (ವಿಕೆಟ್ ಕೀಪರ್) , ಬೆನ್ ಡಂಕ್ , ಬೆನ್ ಲಾಫ್ಲಿನ್ , ಪೀಟರ್ ಸಿಡ್ಲ್ , ಬ್ರೆಟ್ ಲೀ (ನಾಯಕ) ಕ್ಸೇವಿಯರ್ ಡೊಹೆರ್ಟಿ , ನಾಥನ್ ಕೌಲ್ಟರ್-ನೈಲ್.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ