ಸೋಮವಾರ, ಏಪ್ರಿಲ್ 29, 2024
ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!-ಲೈಂಗಿಕ ಹಗರಣ ಪ್ರಕರಣ; ಶಾಸಕ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ತನಿಖೆ ಆರಂಭ-ಪುತ್ತೂರು: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು.!-ಸ್ವಾಭಿಮಾನಿ ರಾಜಕಾರಣಿ, ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ-ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Warren Buffett: ಬಡವರಿಗಾಗಿ ಖಜಾನೆ ತೆರೆದ ವಾರನ್‌ ಬಫೆಟ್‌, 6125 ಕೋಟಿ ದಾನ!

Twitter
Facebook
LinkedIn
WhatsApp
Warren Buffett: ಬಡವರಿಗಾಗಿ ಖಜಾನೆ ತೆರೆದ ವಾರನ್‌ ಬಫೆಟ್‌, 6125 ಕೋಟಿ ದಾನ!

ನವದೆಹಲಿ (ನ.24): ಅಮೆರಿಕದ ಹಿರಿಯ ಹೂಡಿಕೆದಾರ 92 ವರ್ಷದ ವಾರನ್‌ ಬಫೆಟ್‌ ಈ ವರ್ಷದಲ್ಲಿ 2ನೇ ಬಾರಿಗೆ ಬಡವರಿಗಾಗಿ ತಮ್ಮ ಖಜಾನೆಯನ್ನು ತೆರೆದಿದ್ದಾರೆ. ಈ ಬಾರಿ ಅವರು ಅಂದಾಜು 750 ಮಿಲಿಯನ್‌ ಅಮೆರಿಕನ್‌ ಡಾಲರ್‌ ಅಂದರೆ 6125 ಕೋಟಿ ರೂಪಾಯಿ ಮೌಲ್ಯದ ಬೆರ್ಕ್‌ಶೈರ್‌ ಹ್ಯಾತ್‌ವೇ ಸ್ಟಾಕ್‌ಅನ್ನು ತಮ್ಮ ಕುಟುಂಬದ ನಾಲ್ಕು ಫೌಂಡೇಷನ್‌ಗೆ ನೀಡಿದ್ದಾರೆ. ವಾರನ್‌ ಬಫೆಟ್‌ ಪ್ರತಿ ವರ್ಷ ಬಡವರ ಹಕ್ಕುಗಳಿಗಾಗಿ ಹೋರಾಟ ಮಾಡುವ ಕುಟುಂಬ ನಾಲ್ಕು ಫೌಂಡೇಷನ್‌ಗಳಿಗೆ ಅವರ ದಾನ ನೀಡುತ್ತಾರೆ. ಈ ಬಾರಿಯ ದಾನ ಸ್ವೀಕರಿಸಿದ ಫೌಂಡೇಷನ್‌ಗಳ ಪಟ್ಟಿಯಲ್ಲಿ ಬಿಲ್‌ ಹಾಗೂ ಮೆಲಿಂಡಾ ಗೇಮ್ಸ್‌ ಫೌಂಡೇಷನ್‌ ಹೆಸರಿಲ್ಲ. ವಾರನ್‌ ಬಫೆಟ್‌, ಅಂದಾಜು 1.5 ಮಿಲಿಯನ್‌ ಕ್ಲಾಸ್‌ ಬಿ ಷೇರುಗಳನ್ನು ತಮ್ಮ ಮೊದಲ ಪತ್ನಿ ಹೆಸರಿನ ಸುಸಾನ್‌ ಥಾಮ್ಸನ್‌ ಬಫೆಟ್‌ ಫೌಂಡೇಷನ್‌ಗೆ ಬೀಡಿದ್ದರೆ, ತಲಾ 300,000 ಷೇರುಗಳನ್ನು ತಮ್ಮ ಮಕ್ಕಳು ನಿರ್ವಹಿಸುವ ಶೇರ್‌ವುಡ್‌ ಫೌಂಡೇಷನ್‌, ದಿ ಹೊವಾರ್ಡ್‌ ಬಫೆಟ್‌ ಫೌಂಡೇಷನ್‌ ಮತ್ತು ನೊವೋ ಫೌಂಡೇಷನ್‌ಗೆ ನೀಡಿದ್ದಾರೆ. ತಮ್ಮ ದಾನದ ಕುರಿತಾಗಿ ಬುಧವಾರ ಸ್ಟಾಕ್‌ ಎಕ್ಸ್‌ಚೇಂಜ್‌ ಫಿಲ್ಲಿಂಗ್‌ನಲ್ಲಿ ಮಾಹಿತಿ ನೀಡಿದ್ದಾರೆ. ತಮ್ಮ 1600 ಕ್ಲಾಸ್‌ ಎ ಷೇರುಗಳನ್ನು 2.4 ಮಿಲಿಯನ್‌ ಕ್ಲಾಸ್‌ ಬಿ ಷೇರುಗಳಾಗಿ ಪರಿವರ್ತನೆ ಮಾಡಿದ ಬಳಿಮ ಬಫೆಟ್‌ ಈ ದಾನವನ್ನು ಮಾಡಿದ್ದಾರೆ. 

2022ರ 2ನೇ ದೊಡ್ಡ ದಾನ: ಇದು ವಾರನ್‌ ಬಫೆಟ್‌ ನೀಡಿರುವ ಈ ವರ್ಷದ 2ನೇ ದೊಡ್ಡ ದಾನ ಎನಿಸಿದೆ. ಇದಕ್ಕೂ ಮುನ್ನ 2022ರ ಜೂನ್‌ನಲ್ಲಿ ಬಿಲ್‌ ಮತ್ತು ಮೆಲಿಂಡಾ ಗೇಟ್ಸ್‌ ಫೌಂಡೇಷನ್‌ಗೆ 11 ಮಿಲಿಯನ್‌ ಕ್ಲಾಸ್‌ ಬಿ ಷೇರುಗಳನ್ನು ನೀಡಿದ್ದರು. ಅದರೊಂದಿಗೆ 1.1 ಮಿಲಿಯನ್‌ ಕ್ಲಾಸ್‌ ಬಿ ಷೇರುಗಳನ್ನುಸುಸಾನ್‌ ಥಾಮ್ಸನ್‌ ಬಫೆಟ್‌ ಫೌಂಡೇಷನ್‌ ಹಾಗೂ 7, 70, 218 ಷೇರುಗಳನ್ನು ತಮ್ಮ ಮಕ್ಕಳ ಮೂರು ಫೌಂಡೇಷನ್‌ಗೆ ಸಮಾನವಾಗಿ ನೀಡಿದ್ದರು. ಆದರೆ, ಈ ಬಾರಿ ಬಿಲ್‌ ಹಾಗೂ ಮೆಲಿಂಡಾ ಗೇಟ್ಸ್‌ ಫೌಂಡೇಷನ್‌ಗೆ ಯಾಕಾಗಿ ದಾನವನ್ನು ನೀಡಲಾಗಿಲ್ಲ ಎನ್ನುವ ವಿಚಾರವಾಗಿ ಬಫೆಟ್‌ ಫ್ಯಾಮಿಲಿ ಫೌಂಡೇಷನ್‌ನಿಂದ ಯಾವುದೇ ಮಾಹಿತಿ ಬಂದಿಲ್ಲ.

ದಾನದ ಯೋಜನೆಗಳಲ್ಲಿ ಬದಲಾವಣೆ ಮಾಡಿರುವ ಬಫೆಟ್‌: ಕಳೆದ ಕೆಲವು ವರ್ಷಗಳಿಂದ ವಾರನ್‌ ಬಫೆಟ್‌ ತಮ್ಮ ದಾನದ ಯೋಜನೆಗಳನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಿದ್ದಾರೆ. ತಮ್ಮ ಮಕ್ಕಳು ನಿರ್ವಹಣೆ ಮಾಡುತ್ತಿರುವ ಫೌಂಡೇಷನ್‌ಗೆ ನೀಡುವ ದತ್ತಿ ಹಣದಲ್ಲಿ ದೊಡ್ಡ ಮಟ್ಟದ ಏರಿಕೆ ಮಾಡಿದ್ದಾರೆ. ಕುಟುಂಬದ ದತ್ತಿ ಪ್ರಯೋಜನಗಳಲ್ಲಿ ಅತ್ಯಂತ ಕಡಿಮೆ ಮೌಲ್ಯದಲ್ಲಿರುವ ಸುಸಾನ್‌ ಥಾಮ್ಸನ್‌ ಬಫೆಟ್‌ ಫೌಂಡೇಷನ್‌ಗೆ ದೊಡ್ಡ ಪ್ರಮಾಣದ ಷೇರುಗಳನ್ನು ನೀಡಲಾಗುತ್ತಿದೆ. ಈ ಹಣವನ್ನು ಸುಸಾನ್‌ ಥಾಮ್ಸನ್‌ ಫೌಂಡೇಷನ್‌ ಗರ್ಭಪಾತ ಹಕ್ಕುಗಳ ಹೋರಾಟಕ್ಕಾಗಿ ಬಳಕೆ ಮಾಡುವ ಮೂಲಕ ಗಮನಸೆಳೆದಿದೆ.

ಬಫೆಟ್‌ ಕುಟುಂಬದ ಫೌಂಡೇಷನ್‌ನ ಸಹಾಯಗಳು: ವಾರನ್‌ ಬಫೆಟ್‌ ಷೇರುಗಳ ರೂಪದಲ್ಲಿ ನೀಡಿರುವ ದಾನವನ್ನು ಅವರು ಕುಟುಂಬದ ಫೌಂಡೇಷನ್‌ಗಳು ವಿವಿಧ ಸೇವಾ ಕಾರ್ಯಗಳಿಗಾಗಿ ಬಳಕೆ ಮಾಡುತ್ತದೆ.  ಶೇರ್‌ವುಡ್‌ ಫೌಂಡೇಷನ್‌ನ ನಿರ್ವಹಣೆ ಮಾಡುತ್ತಿರುವ ಸೂಸಿ ಬಫೆಟ್‌, ಈ ಹಣವನ್ನು ಮಕ್ಕಳ ಶಿಕ್ಷಣ ಹಾಗೂ ಬಫೆಟ್‌ ಅವರ ತವರು ಒಮಾಹಾದಲ್ಲಿ ವಿವಿಧ ಮೂಲಭೂತ ಸೌಕರ್ಯಗಳ ಯೋಜನೆಗೆ ಬಳಕೆ ಮಾಡುತ್ತಿದ್ದಾರೆ. ಇನ್ನು ಹೊವಾರ್ಡ್‌ ಬಫೆಟ್‌ ತಮ್ಮ ಷೇರುಗಳ ಮೂಲಕ ಬಂದ ಹಣವನ್ನು ಬಡ ದೇಶಗಳಲ್ಲಿ ರೈತರ ಕಲ್ಯಾಣಾಭಿವೃದ್ಧಿಗಾಗಿ ಹಾಗೂ ಉತ್ಪಾದನೆಯಲ್ಲಿ ಏರಿಕೆ ಮಾಡುವ ನಿಟ್ಟಿನಲ್ಲಿ ವಿನಿಯೋಗ ಮಾಡುತ್ತಿದ್ದಾರೆ. ಇದಲ್ಲದೆ, ಪೀಟರ್ ಬಫೆಟ್ ತಮ್ಮ ನೊವೋ ಫೌಂಡೇಶನ್ ಮೂಲಕ, ಅವರು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಲು ಶಿಕ್ಷಣ, ಸಹಕಾರ ಮತ್ತು ಆರ್ಥಿಕ ಅಭಿವೃದ್ಧಿಯ ಮೂಲಕ ವಿಶ್ವದಾದ್ಯಂತ ಮಹಿಳೆಯರು ಮತ್ತು ಹುಡುಗಿಯರನ್ನು ಸಬಲೀಕರಣಗೊಳಿಸಲು ಕೆಲಸ ಮಾಡುತ್ತಿದ್ದಾರೆ.

2010 ರಲ್ಲಿ, ಅವರು ತಮ್ಮ ಸ್ನೇಹಿತರಾದ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ ಅವರೊಂದಿಗೆ ಗಿವಿಂಗ್ ಪ್ಲೆಡ್ಜ್ ಅನ್ನು ಪ್ರಾರಂಭಿಸಿದರು, ಅವರು ತಮ್ಮ ಸಂಪತ್ತಿನ 99% ಅನ್ನು ತಮ್ಮ ಜೀವಿತಾವಧಿಯಲ್ಲಿ ಅಥವಾ ಅವರ ಮರಣದ ಸಮಯದಲ್ಲಿ ದಾನ ಮಾಡುವುದಾಗಿ ಹೇಳಿದರು. ಅವರು ಈಗಾಗಲೇ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ಗೆ $32 ಶತಕೋಟಿ ಮೌಲ್ಯದ ಬರ್ಕ್‌ಷೈರ್ ಷೇರುಗಳನ್ನು ನೀಡಿದ್ದಾರೆ ಮತ್ತು ಅವರ ಕುಟುಂಬ ಸದಸ್ಯರ ನಿಯಮಿತವಾಗಿ ಹಂಚಿಕೆ ಮಾಡುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ