ವಾಂತಿ ಬಂತೆಂದು ಬಸ್ಸಿಂದ ತಲೆ ಹೊರಗೆ ಹಾಕಿದ ಮಹಿಳೆ ; ಎರಡು ವಾಹನಗಳ ನಡುವೆ ಸಿಲುಕಿ ಮಹಿಳೆ ಸಾವು!
ಬಸ್ಸಿನಲ್ಲಿ ಕೂತಿರುವಾಗ ಮಕ್ಕಳು ತಲೆ ಹೊರಗೆ ಹಾಕಿದರೆ ಅಥವಾ ಕೈಗಳನ್ನು ಹೊರಹಾಕಿದರೆ ತಕ್ಷಣವೇ ಡ್ರೈವರ್ ಅಥವಾ ಕಂಡಕ್ಟರ್ ಮೊದಲು ತಲೆ ಒಳಗೆಹಾಕಿ ಎಂದು ಬೈಯ್ಯುವುದುಂಟು. ಪೋಷಕರು ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಕಾಗುವುದಿಲ್ಲ. ಚಲಿಸುತ್ತಿರುವ ಬಸ್ನ ಕಿಟಕಿಯಿಂದ ತಲೆ, ಕೈಗಳನ್ನು ಹೊರಹಾಕಿದರೆ ಪರಿಣಾಮ ಏನಾಗುವುದು ಎಂಬುದು ಈ ಘಟನೆಯಿಂದ ಕಲಿಯಬೇಕಾದ ಪಾಠ.
ಮಹಿಳೆಯೊಬ್ಬಳು ವಾಂತಿ ಬಂತೆಂದು ತಲೆ ಹೊರ ಹಾಕಿದಾಗ ಬಸ್ಸಿನ ಬಂದ ಮತ್ತೊಂದು ವಾಹನ ತಲೆಗೆ ಹೊಡೆದಿದ್ದು, ಎರಡು ವಾಹನಗಳ ನಡುವೆ ಮಹಿಳೆಯ ತಲೆ ನಗುಜ್ಜಾಗಿತ್ತು.
ಹರಿಯಾಣ ರೋಡ್‌ವೇಸ್ ಬಸ್‌ಗೆ ಸೇರಿದ ಘಟನೆ ಅಲಿಪುರ ಪ್ರದೇಶದಲ್ಲಿ ಸಂಭವಿಸಿದೆ. ಉತ್ತರ ಪ್ರದೇಶದ ಪ್ರತಾಪ್‌ಗಢದಿಂದ ಬಂದಿದ್ದ ಬಾಬ್ಲಿ, ಕಾಶ್ಮೀರ್ ಗೇಟ್‌ನಿಂದ ಲುಧಿಯಾನಕ್ಕೆ ಬಸ್ ಏರಿದ್ದರು.
ಇನ್ನೊಂದು ವಾಹನ ಬಸ್ಸನ್ನು ಹಿಂದಿಕ್ಕಲು ಯತ್ನಿಸಿದಾದ ಸಂದರ್ಭದಲ್ಲೇ ವಾಂತಿ ಬಂತೆಂದು ಮಹಿಳೆ ಕಿಟಕಿಯಿಂದ ತಲೆ ಹಾಕಿದ್ದರು. ಆ ಸಂದರ್ಭದಲ್ಲಿ ಆಕೆಯ ತಲೆ ಎರಡು ವಾಹನಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿದೆ.
ಆಕೆಯೊಂದಿಗೆ ಆಕೆಯ ಸಹೋದರಿ, ಆಕೆಯ ಪತಿ ಮತ್ತು ಅವರ ಮೂವರು ಮಕ್ಕಳು ಇದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಇನ್ನೊಂದು ವಾಹನಕ್ಕಾಗಿ ಶೋಧ ನಡೆಸಲಾಗುತ್ತಿದೆ.
ಕ್ಲಬ್‌ಗಳಲ್ಲಿ ಅಕ್ರಮ ಜೂಜಾಟ – 37 ಮಂದಿ ಅರೆಸ್ಟ್, ಕಾರು, ಬೈಕ್ ವಶ
ಹಾಸನ: ಜಿಲ್ಲೆಯಲ್ಲಿಂದು ವಿವಿಧ ಕ್ಲಬ್‌ಗಳ (Club) ಮೇಲೆ ನಡೆದ ದಾಳಿಯಲ್ಲಿ 37 ಮಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ರಿಕ್ರಿಯೇಷನ್ ಕ್ಲಬ್ (Recreation Club) ಹೆಸರಿನಲ್ಲಿ ಜೂಜಾಟ ನಡೆಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಎರಡು ಕ್ಲಬ್‌ಗಳ ಮೇಲೆ ದಾಳಿ ನಡೆಸಿ, 75 ಸಾವಿರ ರೂ ನಗದು ಜಪ್ತಿ ಮಾಡಿಕೊಂಡು, 37 ಜನರನ್ನ ಬಂಧಿಸಲಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆಯಲ್ಲಿ ಚೌಡೇಶ್ವರಿ ಕ್ರಿಯೇಶನ್ ಕ್ಲಬ್‌ನಲ್ಲಿ ಜೂಜಾಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 28 ಜನರನ್ನು ಬಂಧಿಸಿ, ಜೂಜಿಗಿಟ್ಟಿದ್ದ 44,150 ರೂ. ನಗದು, 20 ಮೊಬೈಲ್, ಎರಡು ಬೈಕ್, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯ ಫ್ಲಾಂಟರ್ಸ್ ಕ್ಲಬ್‌ನಲ್ಲಿ ಕಾನೂನುಬಾಹಿರವಾಗಿ ಅಂದರ್-ಬಾಹರ್ ಜೂಜಾಡುತ್ತಿದ್ದ 9 ಜನರನ್ನ ಬಂಧಿಸಿದ್ದು, ಅವರಿಂದ 31,260 ರೂ. ನಗದು, 6 ಕಾರು, 12 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಈ ಎರಡು ಕ್ಲಬ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದ್ದು. ಮುಂದೆ ಜಿಲ್ಲೆಯಲ್ಲಿ ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹರಿರಾಂ ಶಂಕರ್ ಎಚ್ಚರಿಸಿದ್ದಾರೆ.