ಶನಿವಾರ, ಏಪ್ರಿಲ್ 27, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Vivo Y02: ಬಜೆಟ್ ಬೆಲೆಗೆ ಬೊಂಬಾಟ್ ಸ್ಟಾರ್ಟ್​ಫೋನ್ ಬಿಡುಗಡೆ ಮಾಡಿದ ವಿವೋ

Twitter
Facebook
LinkedIn
WhatsApp
Vivo Y02: ಬಜೆಟ್ ಬೆಲೆಗೆ ಬೊಂಬಾಟ್ ಸ್ಟಾರ್ಟ್​ಫೋನ್ ಬಿಡುಗಡೆ ಮಾಡಿದ ವಿವೋ

ಪ್ರಸಿದ್ಧ ವಿವೋ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್​ಫೋನುಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ವಿವೋ Y73t, ವಿವೋ Y52 5G ಸ್ಮಾರ್ಟ್‌ಫೋನ್​ಗಳನ್ನು ಬಿಡುಗಡೆ ಮಾಡಿದ್ದ ವಿವೋ ಕಂಪನಿ ಇದೀಗ ತನ್ನ ವೈ ಸರಣಿಯಲ್ಲೇ ಮತ್ತೊಂದು ಹೊಸ ವಿವೋ ವೈ02 (Vivo Y02) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದು ಮೀಡಿಯಾಟೆಕ್‌ ಪ್ರೊಸೆಸರ್‌ ಅನ್ನು ನೀಡಲಾಗಿದೆ. ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್​ಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ, ಫೀಚರ್ಸ್​ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • ವಿವೋ Y02 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ಒಂದು ಮಾದರಿಯಲ್ಲಷ್ಟೆ ಅನಾವರಣ ಮಾಡಲಾಗಿದೆ. ಇದರ 3GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯಕ್ಕೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ.
  • ಈ ಫೋನ್ ವಿವೋ ಕಂಪನಿಯ ಅಧಿಕೃತ ವೆಬ್​ಸೈಟ್ ಮತ್ತು ರಿಟೇಲ್ ಸ್ಟೋರ್​ಗಳಲ್ಲಿ ಖರೀದಿಗೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಫ್ಲಿಪ್​ಕಾರ್ಟ್ ಅಥವಾ ಅಮೆಜಾನ್​ನಲ್ಲಿ ಮಾರಾಟ ಆಗುವ ನಿರೀಕ್ಷೆಯಿದೆ.
  • ಈ ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51 ಇಂಚಿನ ಫುಲ್‌ ಹೆಚ್‌ಡಿ+ ಫುಲ್ ವೀವ್ ಡಿಸ್‌ಪ್ಲೇಯನ್ನು ಹೊಂದಿದೆ.
  • ಡಿಸ್​ಪ್ಲೇಯಲ್ಲಿ ವಿಶೇಷವಾಗಿ ಕಣ್ಣಿನ ಪ್ರೊಟೆಕ್ಷನ್ ಫೀಚರ್ ನೀಡಲಾಗಿದೆ. ವಾಟರ್​ಡ್ರಾಪ್ ಸ್ಟೈನ್​ನ ಕಟೌಟ್​ನಿಂದ ಆವೃತ್ತವಾಗಿದೆ.Vivo Y02 price in India tipped: launch, specifications
  • ಬೆಲೆಗೆ ತಕ್ಕಂತೆ ಬಲಿಷ್ಠವಾದ ಮೀಡಿಯಾಟೆಕ್‌ ಹೀಲಿಯೊ P22 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಗೋ ಎಡಿಷನ್​ OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
  • ವಿವೋ Y52 5G (2022) ಸ್ಮಾರ್ಟ್‌ಫೋನ್‌ ಹಿಂಭಾಗ 8 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಅಂತೆಯೆ ಮುಂಭಾಗ ಸೆಲ್ಫೀಗಾಗಿ 5 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಇದು ಫೇಸ್ ಬ್ಯೂಟಿ, ಟೈಮ್ ಲಾಪ್ಸ್ ಆಯ್ಕೆಯನ್ನು ಹೊಂದಿದೆ.
  • ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 10W ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ ಸಪೋರ್ಟ್ ಇದೆ.
  • ಉಳಿದಂತೆ ಹಾಟ್‌ಸ್ಪಾಟ್‌, ಡ್ಯುಯಲ್ ಸಿಮ್, ವೈ-ಫೈ 2.4, ಬ್ಲೂಟೂತ್ 5.0, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ-ಸಿ ಪೋರ್ಟ್ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆ ಅಳವಡಿಸಲಾಗಿದೆ.Vivo Y02 launched in Indonesia with MediaTek Helio P22 SoC: Check price and  specifications

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ