ವಿಟ್ಲ :ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಣ್ಣ ತಮ್ಮಂದಿರು!
ಕುದ್ದುಪದವು ನಿವಾಸಿಗಳಾದ ಪೃಥ್ವಿರಾಜ್ (ಅಣ್ಣ) ಹಾಗೂ ಪವನ್ (ತಮ್ಮ) ಆತ್ಮಹತ್ಯೆಗೆ ಯತ್ನಿಸಿದ 25 ವರ್ಷದ ಒಳಗಿನ ಯುವಕರು.ಸ್ವಂತರಿಕ್ಷಾದಲ್ಲಿ ದುಡಿಯುತ್ತಿದ್ದ ಇವರಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಕೂಡಲೇ ಸ್ಥಳೀಯರು ಅಂಬುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ಯಾವುದೇ ಕಾರಣ ಈವರೆಗೆ ತಿಳಿದುಬಂದಿಲ್ಲ. ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ನಿಫಾ ವೈರಸ್ – ಕೇರಳದ ಕೊಯಿಕ್ಕೋಡ್ ಜಿಲ್ಲೆಯ ಏಳು ಗ್ರಾಮಗಳು ಕಂಟೈನ್‌ಮೆಂಟ್ ಜೋನ್
ತಿರುವನಂತಪುರಂ ಸೆಪ್ಟೆಂಬರ್ 13: ಕೇರಳದ ಕೋಯಿಕ್ಕೋಡ್ ನಲ್ಲಿ ನಿಫಾ ವೈರಸ್ ಪತ್ತೆಯಾದ ಬೆನ್ನಲ್ಲೇ ಇದೀಗ ಏಳು ಗ್ರಾಮಪಂಚಾಯತ್ ಗಳನ್ನು ಕಂಟೈನ್ ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ನಿಫಾ ವೈರಸ್‌ಗೆ ಬಲಿಯಾದ ಇಬ್ಬರು ವ್ಯಕ್ತಿಗಳು ಈ ಗ್ರಾಮಗಳ ವ್ಯಾಪ್ತಿಗೆ ಸೇರಿದವರಾಗಿದ್ದಾರೆ. ಸೋಂಕು ಹರಡದಂತೆ ನಿಯಂತ್ರಿಸಲು ಸರ್ಕಾರ ನಿರ್ಬಂಧಗಳು ಮತ್ತು ಕ್ರಮಗಳನ್ನು ಕೂಡ ಪ್ರಕಟಿಸಿದೆ.
ಅತಂಚೆರಿ, ಮರುತೊಂಕರ, ತಿರುವಳ್ಳೂರ್, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲ್ಯಾಪಳ್ಳಿ ಮತ್ತು ಕವಿಲುಂಪರ- ಕಂಟೈನ್‌ಮೆಂಟ್ ವಲಯಗಳೆಂದು ಘೋಷಿಸಲಾದ ಏಳು ಗ್ರಾಮ ಪಂಚಾಯತ್‌ಗಳಾಗಿವೆ.
ಮುಂದಿನ ಸೂಚನೆವರೆಗೂ ಕಂಟೈನ್ಮೆಂಟ್ ವಲಯಗಳೆಂದು ಘೋಷಿಸಲಾದ ಏಳು ಗ್ರಾಮಗಳ 43 ವಾರ್ಡ್‌ಗಳಲ್ಲಿ ಒಳಗೆ ಹಾಗೂ ಹೊರಗೆ ಓಡಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಒಬ್ಬರಿಗೂ ಒಳ- ಹೊರಗೆ ಪ್ರವೇಶ ನೀಡುವುದಿಲ್ಲ ಎಂದು ಕೋಳಿಕ್ಕೋಡ್ ಜಿಲ್ಲಾಧಿಕಾರಿ ಎ ಗೀತಾ ತಿಳಿಸಿದ್ದಾರೆ.
ಈಗಾಗಲೇ ಕೇರಳದಲ್ಲಿ 9 ವರ್ಷದ ಬಾಲಕ ಸೇರಿದಂತೆ ನಾಲ್ಕು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅಧಿಕಾರಿಗಳು ಸೋಂಕು ಕಾಣಿಸಿಕೊಂಡ ಪ್ರದೇಶಗಳಲ್ಲಿನ ಕೆಲವು ಶಾಲೆಗಳು ಮತ್ತು ಕಚೇರಿಗಳನ್ನು ಮುಚ್ಚಿದ್ದಾರೆ. ನಿಫಾ ಎಚ್ಚರಿಕೆ ನಡುವೆ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯು (ಎನ್‌ಐವಿ) ಕೇರಳಕ್ಕೆ ಭೇಟಿ ನೀಡಲಿದ್ದು, ಕೋಳಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ವೈರಸ್ ಪರೀಕ್ಷೆಗಳು ಹಾಗೂ ಬಾವಲಿಗಳ ಸಮೀಕ್ಷೆ ನಡೆಸಲು ಸಂಚಾರಿ ಲ್ಯಾಬ್ ಸ್ಥಾಪಿಸಲಿದೆ.
ಆದರೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಹಾಗೂ ಔಷಧ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ದಿನಬಳಕೆಯ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳನ್ನು ಬೆಳಿಗ್ಗ 7 ರಿಂದ ಸಂಜೆ 5ರವರೆಗೆ ಮಾತ್ರ ತೆರೆಯಬಹುದಾಗಿದೆ. ಆರೋಗ್ಯ ಕೇಂದ್ರ ಹಾಗೂ ಔಷಧ ಅಂಗಡಿಗಳಿಗೆ ಸಮಯದ ನಿರ್ಬಂಧ ವಿಧಿಸಿಲ್ಲ.
ಕಂಟೈನ್‌ಮೆಂಟ್ ವಲಯಗಳಲ್ಲಿರುವ ಜನರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ.