Virat kohli :ಆರು ವರ್ಷಗಳ ಬಳಿಕ ಕೇವಲ ಮೂರು ಎಸೆತ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ, ವಿಡಿಯೋ ವೈರಲ್
ಪುಣೆ: ಐಸಿಸಿ ವಿಶ್ವಕಪ್ ಕೂಟದ ಇಂದಿನ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಆಡುತ್ತಿದೆ. ಪುಣೆಯ ಎಂಎಸ್ ಎ ಸ್ಟೇಡಿಯಂನಲ್ಲಿ ಭಾರತ ಈ ವಿಶ್ವಕಪ್ ನ ನಾಲ್ಕನೇ ಪಂದ್ಯವಾಡುತ್ತಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಬೌಲಿಂಗ್ ಮಾಡಿ ಗಮನ ಸೆಳೆದರು.
Virat Kohli bowling highlights#INDvsBANpic.twitter.com/dUrKhJTydg
— ` (@KohliKlassic) October 19, 2023
ಪುಣೆಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿದೆ. ಇನ್ನಿಂಗ್ ನ 9ನೇ ಓವರ್ ನ ವೇಳೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿದ್ದರು. ಆದರೆ ಮೂರು ಎಸೆತದ ಬಳಿಕ ಹಾರ್ದಿಕ್ ಪಾಂಡ್ಯ ಅವರು ಓಡಲು ತುಸು ಕಷ್ಟಪಟ್ಟರು. ಹೀಗಾಗಿ ಅವರು ಮೈದಾನದಿಂದ ಹೊರ ನಡೆದರು.
ಈ ವೇಳೆ ವಿರಾಟ್ ಕೊಹ್ಲಿ ಅವರು ಓವರ್ ಪೂರ್ಣಗೊಳಿಸಿದರು. ಮೂರು ಎಸೆತ ಎಸೆದ ವಿರಾಟ್ ಎರಡು ರನ್ ನೀಡಿದರು.
ವಿರಾಟ್ ಕೊಹ್ಲಿ ಅವರು 2017ರ ಬಳಿಕ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡಿದರು. ಈ ಹಿಂದೆ 2011ರ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ, ಅದೇ ವಿಶ್ವ ಕಪ್ ನ ಫೈನಲ್ ಪಂದ್ಯದಲ್ಲಿ ಮತ್ತು 2015ರ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ವಿರಾಟ್ ತಲಾ ಒಂದು ಓವರ್ ಬೌಲಿಂಗ್ ಮಾಡಿದ್ದರು.
Team India; 200 ಕಿ.ಮೀ ವೇಗದಲ್ಲಿ ಕಾರು ಓಡಿಸಿ ಮೂರು ಬಾರಿ ದಂಡ ಕಟ್ಟಿದ ರೋಹಿತ್ ಶರ್ಮ
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಪ್ರಸ್ತುತ ವಿಶ್ವಕಪ್ ನಡೆಯುತ್ತಿರುವಾಗಲೇ ಅತ್ಯಂತ ಅಪಾಯಕಾರಿ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ಅವರ ಈ ಕೃತ್ಯ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಹಲವರು ಟೀಕಿಸಿದ್ದಾರೆ.
ಗುರುವಾರ ಬಾಂಗ್ಲಾ ವಿರುದ್ಧ ಪುಣೆಯಲ್ಲಿ ಭಾರತದ ಪಂದ್ಯವಿದೆ. ಈ ಹೊತ್ತಿನಲ್ಲೇ ಅವರು ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇನಲ್ಲಿ ತಮ್ಮ ಲ್ಯಾಂಬೋರ್ಗಿನಿ ಕಾರನ್ನು ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಾಯಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಚಾರಿ ಪೊಲೀಸರು ಮೂರು ಬಾರಿ ದಂಡ ಹಾಕಿದ್ದಾರೆ! ಸಂಚಾರಿ ಇಲಾಖೆಯ ನಿಯಮಗಳ ಪ್ರಕಾರ, ರೋಹಿತ್ ಭಾರತ ಕ್ರಿಕೆಟ್ ತಂಡದ ಬಸ್‌ನಲ್ಲೇ ಪ್ರಯಾಣಿಸಬೇಕು. ಆದರೆ ಯಾವ ಕಾರಣಕ್ಕೆ ಬಿಸಿಸಿಐ ರೋಹಿತ್‌ಗೆ ಸ್ವಂತ ಕಾರಿನಲ್ಲಿ ಪ್ರಯಾಣಿಸಲು ಅನುಮತಿ ನೀಡಿದೆ ಎನ್ನುವುದು ಗೊತ್ತಾಗಿಲ್ಲ.
ರೋಹಿತ್‌ಗೆ ದುಬಾರಿ ಕಾರುಗಳನ್ನು ವೇಗದಲ್ಲಿ ಓಡಿಸುವ ತೀವ್ರ ಆಸಕ್ತಿಯಿದೆ. ಆದರೆ ವಿಶ್ವಕಪ್ ನಡೆಯುತ್ತಿರುವ ಹೊತ್ತಿನಲ್ಲಿ ಇಂತಹ ಅಪಾಯಕಾರಿ ಸಾಹಸ ಕೈಗೊಳ್ಳುವುದು ಬಿಸಿಸಿಐ ನಿಯಮಗಳ ಉಲ್ಲಂಘನೆಯಾಗುತ್ತದೆ. ಈ ಪ್ರಕರಣದಲ್ಲಿ ಬಿಸಿಸಿಐ ಕೂಡ ಆರೋಪಿ ಎಂದು ಕೆಲವರು ಹೇಳುತ್ತಾರೆ.
ಇದು ಕ್ರಿಕೆಟಿಗನ ವಿರಾಮದ ದಿನಗಳು ಅಲ್ಲವೇ ಅಲ್ಲ. ಅತಿವೇಗದಿಂದ ಒಂದು ಅವಘಡ ನಡೆದರೆ, ಬರೀ ರೋಹಿತ್ ಮಾತ್ರವಲ್ಲ ಇಡೀ ಕೂಟವೇ ಇಕ್ಕಟ್ಟಿಗೆ ಸಿಲುಕುತ್ತದೆ. ರಿಷಭ್ ಪಂತ್ ಅವರ ಭೀಕರ ಅಪಘಾತ ನೆನಪಿನಲ್ಲಿರುವಾಗಲೇ, ರೋಹಿತ್ ನಡೆಸಿದ ಈ ಬೇಜವಾಬ್ದಾರಿ ಕೃತ್ಯ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.