ಮಂಗಳವಾರ, ಜೂನ್ 18, 2024
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?-ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ ನಾಳೆ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ.?-ಶಿವಮೊಗ್ಗ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಕುಸಿದುಬಿದ್ದು ನಿಧನ..!-Rain Alert: ಜೂನ್ 21ರಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ..!-ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ವಿರಾಟ್ ಕೊಹ್ಲಿ, ಬುಮ್ರಾ

Twitter
Facebook
LinkedIn
WhatsApp
ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ವಿರಾಟ್ ಕೊಹ್ಲಿ, ಬುಮ್ರಾ

ಮುಂಬೈ: ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಕ್ರಿಕೆಟ್ ವಿಶ್ವಕಪ್ ಪಂದ್ಯದ ವೇಳೆ ತಂಡದ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಎನಿಸಿಕೊಂಡಿದ್ದಾರೆ. 48 ವರ್ಷಗಳ ಇತಿಹಾಸದಲ್ಲೇ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತಕ್ಕೆ ಬುಮ್ರಾ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ವಾಂಖೆಡೆ ಮೈದಾನದಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಮೊದಲ ಓವರ್‌ ಬೌಲಿಂಗ್‌ ಮಾಡಿದರು. ಮೊದಲ ಎಸೆತದಲ್ಲೇ ಪಾತುಮ್ ನಿಸ್ಸಾಂಕಾ ಎಲ್‌ಬಿಡಬ್ಲ್ಯು ಆದರು. ಬ್ಯಾಟ್‌ಗೆ ಸಿಗದ ಬಾಲ್‌ ವೇಗವಾಗಿ ಹೋಗಿ ಪ್ಯಾಡ್‌ಗೆ ಬಡಿಯಿತು. ಅಂಪೈರ್ ಅದನ್ನು ಔಟ್ ಎಂದು ತೀರ್ಪು ನೀಡಿದರು. ಡಿಆರ್‌ಎಸ್‌ನಲ್ಲೂ ಅದು ಔಟ್‌ ಎಂದು ದೃಢಪಟ್ಟಿತು. ಭಾರತದ ಯಾವ ಬೌಲರ್‌ ಕೂಡ ಈ ಸಾಧನೆಯನ್ನು ಮಾಡಿಲ್ಲ.

ವಾಂಖೆಡೆ ಮೈದಾನದಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಮೊದಲ ಓವರ್‌ ಬೌಲಿಂಗ್‌ ಮಾಡಿದರು. ಮೊದಲ ಎಸೆತದಲ್ಲೇ ಪಾತುಮ್ ನಿಸ್ಸಾಂಕಾ ಎಲ್‌ಬಿಡಬ್ಲ್ಯು ಆದರು. ಬ್ಯಾಟ್‌ಗೆ ಸಿಗದ ಬಾಲ್‌ ವೇಗವಾಗಿ ಹೋಗಿ ಪ್ಯಾಡ್‌ಗೆ ಬಡಿಯಿತು. ಅಂಪೈರ್ ಅದನ್ನು ಔಟ್ ಎಂದು ತೀರ್ಪು ನೀಡಿದರು. ಡಿಆರ್‌ಎಸ್‌ನಲ್ಲೂ ಅದು ಔಟ್‌ ಎಂದು ದೃಢಪಟ್ಟಿತು. ಭಾರತದ ಯಾವ ಬೌಲರ್‌ ಕೂಡ ಈ ಸಾಧನೆಯನ್ನು ಮಾಡಿಲ್ಲ.

ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಮತ್ತೊಂದು ದಾಖಲೆ ಆಗಿದೆ. ವಿರಾಟ್‌ ಕೊಹ್ಲಿ ಭಾರತ ತಂಡದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರ ಮತ್ತೊಂದು ದಾಖಲೆಯನ್ನು ಮುರಿದು ಇತಿಹಾಸ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್‌ ವರ್ಷದಲ್ಲಿ 8 ಬಾರಿ 1,000 ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಚಿನ್‌ ತೆಂಡೂಲ್ಕರ್‌ 7 ಬಾರಿ ಈ ಸಾಧನೆ ಮಾಡಿದ್ದರು.

ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 8 ವಿಕೆಟ್‌ ನಷ್ಟಕ್ಕೆ 357 ರನ್‌ ಗಳಿಸಿತ್ತು. ಬೃಹತ್‌ ರನ್‌ ಗುರಿ ಬೆನ್ನತ್ತಿದ ಶ್ರೀಲಂಕಾ ಹೀನಾಯ ಸೋಲನುಭವಿಸಿತು. ಕೇವಲ 19.4 ಓವರ್‌ಗಳಲ್ಲೇ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 55 ರನ್‌ ಮಾತ್ರ ಗಳಿಸಿತು. ಭಾರತ 302 ರನ್‌ಗಳ ಭರ್ಜರಿ ಜಯ ಸಾಧಿಸಿತು.

World Cup 2023: ಗಿಲ್‌ ಕೈ ತಪ್ಪಿದ ಶತಕ – ಸಾರಾಗೆ ಬೇಸರ

ಮುಂಬೈ: ಟೀಂ ಇಂಡಿಯಾದ (Team India) ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ (Shubman Gill), ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 8 ರನ್‌ ಅಂತರದಲ್ಲಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ತಮ್ಮ ಚೊಚ್ಚಲ ಶತಕದಿಂದ ವಂಚಿತರಾದರು. ಇದು ಗಿಲ್‌ ಅಭಿಮಾನಿಗಳಲ್ಲೂ ನಿರಾಸೆ ಮೂಡಿಸಿತು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ ಪರ ಶುಭಮನ್‌ ಗಿಲ್‌ ಕೊಹ್ಲಿ ಜೊತೆಗೂಡಿ ಭರ್ಜರಿ ಆಟವಾಡಿದರು. 92 ಎಸೆತಗಳಲ್ಲಿ 11 ಫೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ ಶತಕದತ್ತ ದಾಪುಗಾಲಿಟ್ಟಿದ್ದ ಗಿಲ್‌, ಸ್ಲೋ ಬೌನ್ಸರ್ ಎದುರು ಅಪ್ಪರ್‌ ಕಟ್‌ ಆಡುವ ಪ್ರಯತ್ನದಲ್ಲಿ 92 ರನ್‌ಗೆ ವಿಕೆಟ್‌ ಕೈಚೆಲ್ಲಿದರು.

ಈ ವೇಳೆ ವಾಂಖೆಡೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಶುಭಮನ್ ಗಿಲ್‌ ಅವರ ಪ್ರೇಯಸಿ ಎಂದೇ ಗುರುತಿಸಿಕೊಂಡಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರಿ ಸಾರಾ ತೆಂಡೂಲ್ಕರ್‌ (Sara Tendulkar) ಬೇಸರಗೊಂಡರು. ಆದಾಗ್ಯೂ ಟೀಂ ಇಂಡಿಯಾದ ಪ್ರಿನ್ಸ್‌ ಖ್ಯಾತಿಯ ಆಟಗಾರನಿಗೆ ಸ್ಟ್ಯಾಂಡಿಂಗ್ ಓವೇಷನ್‌ ಕೊಟ್ಟರು.

ಈ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಈಗಾಗಲೇ ಗಿಲ್‌ ಮತ್ತು ಸಾರಾ ನಡುವಣ ಪ್ರೇಮ ಪುರಾಣ ಸುದ್ದಿ ಜಾಲತಾಣದಲ್ಲಿ ಆಗಾಗ್ಗೆ ಸದ್ದು ಮಾಡುತ್ತಿದ್ದು, ಇವರಿಬ್ಬರ ಪ್ರೇಮ ಪುರಾಣಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇಬ್ಬರೂ ಕದ್ದು ಮುಚ್ಚಿ ಡೇಟಿಂಗ್‌ ಮಾಡುತ್ತಿರುವುದು ಹಲವು ಬಾರಿ ಬೆಳಕಿಗೆ ಬಂದಿದೆ. ಆದ್ರೆ, ಎಲ್ಲಿಯೂ ಕೂಡ ಇಬ್ಬರಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ