ಭಾನುವಾರ, ಸೆಪ್ಟೆಂಬರ್ 15, 2024
20 ವರ್ಷಗಳ ಬಳಿಕ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ-ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Vinesh Phogat: ವಿನೇಶ್ ಫೋಗಟ್ ಐತಿಹಾಸಿಕ ಸಾಧನೆ; ಫೈನಲ್ಸ್ ಪ್ರವೇಶಿಸಿದ ಮಹಿಳಾ ಕುಸ್ತಿಪಟು

Twitter
Facebook
LinkedIn
WhatsApp
Vinesh Phogat's historic achievement; A female wrestler who entered the finals

Vinesh Phogat: ಭಾರತದ ಕುಸ್ತಿಪಟು ವಿನೇಶ್ ಫೋಗಟ್‌ (Vinesh Phogat) ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ ಕ್ಯೂಬಾದ ಯುಸ್‌ನೈಲೆಸ್‌ ಗುಜ್ಮನ್‌ ಎದುರು 5-0 ಅಂತರದಿಂದ ಗೆದ್ದು ಫೈನಲ್​ಗೆ ಪ್ರವೇಶ ಮಾಡಿದ್ದಾರೆ. 

ಇದರೊಂದಿಗೆ ಪ್ಯಾರೀಸ್ ಒಲಿಂಪಿಕ್ಸ್​​ನಲ್ಲಿ ಫೈನಲ್​ ಪ್ರವೇಶಿಸಿದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದು, ಭಾರತಕ್ಕೆ ಕುಸ್ತಿ ವಿಭಾಗದಲ್ಲಿ ಒಂದು ಪದಕ ಖಾತ್ರಿಯಾದಂತಾಗಿದೆ. ಕಳೆದೆರಡು ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದ್ದ ವಿನೇಶ್ ಫೋಗಟ್ ಈ ಬಾರಿ ಪ್ಯಾರೀಸ್​​ ಒಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿಕೊಂಡಿದ್ದಾರೆ.

ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಕುಸ್ತಿಪಟುವಾಗಿದ್ದ ಜಪಾನಿನ ಯ್ಯೂ ಸುಸುಕಿ ವಿರುದ್ದ 3-2 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದ ಫೋಗಟ್, ಕ್ವಾರ್ಟರ್‌ ಫೈನಲ್‌ನಲ್ಲಿ ಉಕ್ರೇನ್‌ನ ಮೂರು ಬಾರಿ ಕಾಮನ್‌ವೆಲ್ತ್ ಗೇಮ್ಸ್‌ ಚಿನ್ನದ ಪದಕ ವಿಜೇತೆ ಒಕ್ಸಾನಾ ಲಿವೀಚ್‌ ಎದುರು 7-5 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮೀಸ್‌ಗೆ ಲಗ್ಗೆಯಿಟ್ಟಿದ್ದರು. 

ಆಗಸ್ಟ್​ 06 ರಾತ್ರಿ ನಡೆದ ಮಹಿಳೆಯರ 50 ಕೆಜಿ ಕುಸ್ತಿ ಸೆಮಿಫೈನಲ್​ ಪಂದ್ಯದಲ್ಲಿ ಯುಸ್ನಿಲಿಸ್ ಗುಜ್ಮಾನ್ ಅವರನ್ನು 5-0 ಅಂತರದಿಂದ ಮಣಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ವಿನೇಶ್ ಫೋಗಟ್ ಒಲಿಂಪಿಕ್ ಇತಿಹಾಸದಲ್ಲಿ ಫೈನಲ್‌ ಪ್ರವೇಶಿಸಿ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಫೈನಲ್​ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆದ್ದರೂ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಲಿದ್ದಾರೆ. 50 ಕೆಜಿ ವಿಭಾಗದಲ್ಲಿ ವಿನೇಶ್ ಒಲಿಂಪಿಕ್ಸ್​ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್​ನಲ್ಲಿ 48 ಕೆಜಿ, ಟೋಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಇದು ವಿನೇಶ್​ ಅವರ ಮೂರನೇ ಒಲಿಂಪಿಕ್ಸ್​ ಟೂರ್ನಿಯಾಗಿದೆ.

ಹಾಕಿಯಲ್ಲಿ ಟೀಂ ಇಂಡಿಯಾದ ಚಿನ್ನದ ಪದಕದ ಕನಸು ಭಗ್ನ:

44 ವರ್ಷಗಳ ಬಳಿಕ ಒಲಿಂಪಿಕ್ಸ್‌ (Olympics) ಹಾಕಿಯಲ್ಲಿ (Hockey) ಫೈನಲ್‌ ಪ್ರವೇಶದ ಕನಸು ಕಂಡಿದ್ದ ಟೀಂ ಇಂಡಿಯಾದ (Team India) ಕನಸು ಭಗ್ನಗೊಂಡಿದೆ. ಸೆಮಿಫೈನಲ್‌ನಲ್ಲಿ ಜರ್ಮನಿ (Germany) ವಿರುದ್ಧ 3-2 ಗೋಲುಗಳಿಂದ ಸೋತ ಕಂಚಿನ ಪದಕಕ್ಕೆ ಹೋರಾಡಬೇಕಿದೆ.

ಆರಂಭದ 7ನೇ ನಿಮಿಷದಲ್ಲಿ ಭಾರತ ಮೊದಲ ಗೋಲು ಬಾರಿಸಿತು. ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮೊದಲ ಗೋಲು ಬಾರಿಸಿದರು. ಆದರೆ 18 ಮತ್ತು 27ನೇ ನಿಮಿಷದಲ್ಲಿ ಜರ್ಮನಿ 2 ಗೋಲು ಬಾರಿಸಿ ಮೊದಲಾರ್ಧದಲ್ಲಿ 2-1 ಮುನ್ನಡೆ ಪಡೆಯಿತು.

ದ್ವಿತೀಯಾರ್ಧದಲ್ಲಿ ಪ್ರಬಲವಾಗಿ ಹೋರಾಡಿದ ಭಾರತ 36ನೇ ನಿಮಿಷದಲ್ಲಿ ಗೋಲ್‌ ಹೊಡೆಯುವ ಮೂಲಕ ಸಮಬಲ ಸಾಧಿಸಿತು. ಆದರೆ 54ನೇ ನಿಮಿಷದಲ್ಲಿ ಜರ್ಮನಿಯ ಮಿಲ್ಟ್‌ಕಾವು ಗೋಲು ಹೊಡೆದು ಮುನ್ನಡೆ ತಂದುಕೊಟ್ಟರು.

ಕೊನೆಯ 2 ನಿಮಿಷ ಇದ್ದಾಗ ಗೋಲ್‌ಕೀಪರ್‌ ಶ್ರೀಜೇಶ್‌ ಅವರನ್ನು ಹೊರಗಡೆ ಇಟ್ಟು ಹೆಚ್ಚುವರಿ ಆಟಗಾರ ಶಮ್ಶೇರ್‌ ಸಿಂಗ್‌ ಸಿಂಗ್‌ ಅವರನ್ನು ಆಡಿಸಲಾಯಿತು. ಇನ್ನೇನು ಪಂದ್ಯ ಮುಗಿಯುವಷ್ಟರಲ್ಲಿ ಭಾರತ ಗೋಲ್‌ ಹೊಡೆಯುವ ಅವಕಾಶ ಸಿಕ್ಕಿತ್ತು. ಆದರೆ ಚೆಂಡು ಗೋಲು ಪೆಟ್ಟಿಗೆಯ ಮೇಲಕ್ಕೆ ಹೋಗುವ ಮೂಲಕ ಫೈನಲ್‌ ಪ್ರವೇಶಿಸುವ ಕನಸು ಛಿದ್ರಗೊಂಡಿತು. ಆರಂಭದಲ್ಲಿ ಭಾರತಕ್ಕೆ ಹಲವು ಪೆನಾಲ್ಟಿ ಅವಕಾಶ ಸಿಕ್ಕಿತ್ತು. ಆದರೆ ಭಾರತ ಗೋಲು ಹೊಡೆಯುವಲ್ಲಿ ವಿಫಲವಾಗಿತ್ತು.

ಕಂಚಿಗಾಗಿ ಹೋರಾಟ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಬ್ರಿಟನ್‌ ವಿರುದ್ಧ ಗೆದ್ದು ಕಂಚು ಗೆದ್ದುಕೊಂಡಿತ್ತು. ಗುರುವಾರ ಸ್ಪೇನ್‌ ವಿರುದ್ಧ ಕಂಚಿನ ಪದಕಕ್ಕೆ ಸೆಣಸಾಡಲಿದೆ. ಈ ಹಿಂದೆ 1980 ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿ ಭಾರತ ತಂಡ ಚಿನ್ನವನ್ನು ಗೆದ್ದುಕೊಂಡಿತ್ತು.

ಜಾವೆಲಿನ್​ನಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಚಿನ್ನ ಹುಡುಗ ನೀರಜ್ ಚೋಪ್ರಾ

ಭಾರತದ ಚಿನ್ನ ಹುಡುಗ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಪುರುಷರ ಜಾವೆಲಿನ್​​​​​​​​​​ನಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.  89.34 ಮೀಟರ್‌ ದೂರ ಎಸೆಯುವ ಮೂಲಕ ಬಂಗಾರದ ಭರವಸೆ ಮೂಡಿಸಿದ್ದಾರೆ. 89.34 ಮೀಟರ್‌ ದೂರ ಎಸೆತ ಇದು ಜಾಗತಿಕ ಚಾಂಪಿಯನ್‌ಶಿಪ್‌ನಲ್ಲಿ ಚೋಪ್ರಾ ಅವರ ಅತ್ಯುತ್ತಮ ಎಸೆತ ಎಂದು ಹೇಳಲಾಗಿದೆ. 

ಈ ಹಿಂದೆ ಅವರು 89.94 ಮೀ ಎಸೆತ ಮೂಲಕ ಇತಿಹಾಸ ಸೃಷ್ಟಿಸಿದರು. ಚೋಪ್ರಾ ಅವರು ವೈಯಕ್ತಿಕ ಒಲಿಂಪಿಕ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಜಾವೆಲಿನ್​​ನಲ್ಲೂ ಹಾಗೂ ಒಲಿಂಪಿಕ್ ಹೊಸ ಅಧ್ಯಾಯವನ್ನು ಸೃಷ್ಟಿಸಿದರು. ಇನ್ನು ಅಂತಿಮ ಪಂದ್ಯ ಆಗಸ್ಟ್ 8 ರಂದು ನಡೆಯುವ ಸಾಧ್ಯತೆ ಇದೆ.

ಈ ವರ್ಷ ಕೇವಲ ಮೂರು ಈವೆಂಟ್‌ಗಳಲ್ಲಿ ಭಾಗವಹಿಸಿದ್ದರೂ, ವಿಶ್ವ ಚಾಂಪಿಯನ್​ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈಗಾಗಲೇ ನೀರಜ್ ಚೋಪ್ರಾ ಅವರು ವಿಶ್ವ ಮಟ್ಟದಲ್ಲಿ ಭಾರಿ ಪೈಪೋಟಿಯನ್ನು ನೀಡುತ್ತಾರೆ. 88.36 ಮೀಟರ್ ಎಸೆದ ಚೋಪ್ರಾ ಮೇನಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನವನ್ನು ಗಳಿಸಿದರು. ಇದು ಕೂಡ ಅವರ ಉತ್ತಮ ಸಾಧನೆ ಆಗಿತ್ತು. .

ನಂತರ ಆಡ್ಕ್ಟರ್ ಸಮಸ್ಯೆಯಿಂದ ಮೇ 28 ರಂದು ಆಸ್ಟ್ರಾವಾ ಗೋಲ್ಡನ್ ಸ್ಪೈಕ್ ಈವೆಂಟ್‌ನಿಂದ ಹಿಂದೆ ಸರಿದರು. ಜೂನ್ 18 ರಂದು ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ 85.97 ಮೀಟರ್‌ಗಳ ಎಸೆಯುವ ಮೂಲಕ ಮತ್ತೊಂದು ಮಹತ್ವದ ಸಾಧನೆಯನ್ನು ಮಾಡಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ, ಚೋಪ್ರಾ ಅವರು 15 ಸ್ಪರ್ಧೆಗಳಲ್ಲಿ ಎರಡು ಬಾರಿ 85 ಮೀಟರ್‌ಗಿಂತ ಕಡಿಮೆ ಎಸೆತ ಎಂದು ಹೇಳಬಹುದು. ಚೋಪ್ರಾ ಅವರ ಪ್ರಮುಖ ಸ್ಪರ್ಧಿಗಳೆಂದರೆ ಜರ್ಮನಿಯ ಜೂಲಿಯನ್ ವೆಬರ್, ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಮತ್ತು ಜೆಕ್ ಎಸೆತಗಾರ ಜಾಕುಬ್ ವಡ್ಲೆಜ್. ವಡ್ಲೆಜ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದರು ಮತ್ತು ದೋಹಾ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ ಸೋತರು.

ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ. ಇದೀಗ ಎರಿಕ್ ಲೆಮ್ಮಿಂಗ್, ಜೊನ್ನಿ ಮೈರಾ, ಜಾನ್ ಝೆಲೆಜ್ನಿ ಮತ್ತು ಆಂಡ್ರಿಯಾಸ್ ಥೋರ್ಕಿಲ್ಡ್‌ಸೆನ್ ಸಾಲಿಗೆ ನೀರಜ್ ಚೋಪ್ರಾ ಸೇರಿದ್ದಾರೆ. ಇದು ಭಾರತ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ