ವಿಜಯಪುರ : ರಸ್ತೆ ಅಪಘಾತದಲ್ಲಿ ನವದಂಪತಿ ಮೃತ್ಯು!
Twitter
Facebook
LinkedIn
WhatsApp
ವಿಜಯಪುರ: ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ (Accident) ನವ ವಿವಾಹಿತರು (Married Couple) ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ನಗರದ ಹೊರವಲಯದ ಸೊಲ್ಲಾಪುರ ಬೈಪಾಸ್ (Solapur Bypass) ಬಳಿ ತಡರಾತ್ರಿ ನಡೆದಿದೆ.
ಹೊನಮಲ್ಲ ತೆರದಾಳ (31), ಅವರ ಪತ್ನಿ ಗಾಯತ್ರಿ (24) ಸ್ಥಳದಲ್ಲೇ ಮೃತದುರ್ದೈವಿಗಳು. ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ನಡೆದ ದುರ್ಘಟನೆ ಸಂಭವಿಸಿದೆ. ಮೃತ ಹೊನಮಲ್ಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ತಿಂಗಳು ಮೇ 22 ರಂದು ಹೊನಮಲ್ಲ ಹಾಗೂ ಗಾಯತ್ರಿಯ ವಿವಾಹವಾಗಿತ್ತು.
ಮದುವೆಯಾಗಿ 24 ದಿನಗಳಲ್ಲೇ ನವ ಜೋಡಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.