ಭಾನುವಾರ, ಜೂನ್ 16, 2024
ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!-HSRP ನಂಬರ್ ಪ್ಲೇಟ್ ಅಳವಡಿಸುವ ಬಗ್ಗೆ ಮಹತ್ವದ ಅಪ್ಡೇಟ್; ಇಲ್ಲಿದೆ ಮಾಹಿತಿ-ಇಂದು ಯುಎಸ್ಎ ಮತ್ತು ಭಾರತ ತಂಡ ಮುಖಾಮುಖಿ; ಯಾರಿಗೆ ಗೆಲುವು..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆ.!-ಉಳ್ಳಾಲ ಬೀಚ್‍ಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಸಮುದ್ರ ಪಾಲು; ಮೂವರ ರಕ್ಷಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೊಹ್ಲಿಯನ್ನು ಹೊಗಳಿ ಆರ್ಸಿಬಿ ಪರ ಟ್ವೀಟ್ ಮಾಡಿದ ವಿಜಯ ಮಲ್ಯ..!

Twitter
Facebook
LinkedIn
WhatsApp
ಕೊಹ್ಲಿಯನ್ನು ಹೊಗಳಿ ಆರ್ಸಿಬಿ ಪರ ಟ್ವೀಟ್ ಮಾಡಿದ ವಿಜಯ ಮಲ್ಯ..!

ಅಹಮದಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Banglore) ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ ಐಪಿಎಲ್​ 2024ರ (IPL 2024) ಎಲಿಮಿನೇಟರ್ ಪಂದ್ಯವಾಡಲು ಸಜ್ಜಾಗಿರುವ ಆರ್​ಸಿಬಿಗೆ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಅವರು ತಂಡದ ಸ್ಟಾರ್​ ಬ್ಯಾಟರ್ ವಿರಾಟ್​ ಕೊಹ್ಲಿಯನ್ನು ಹೊಗಳುವುದಕ್ಕೆ ಮರೆಯಲಿಲ್ಲ. ಮೇ 22 ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಐಪಿಎಲ್ 2024 ರ ಎಲಿಮಿನೇಟರ್​ನಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಅದಕ್ಕಿಂತ ಮೊದಲು ಮಲ್ಯ ಕಡೆಯಿಂದ ಶುಭಾಶಯಗಳು ಬಂದಿವೆ.

ಆರ್​ಸಿಬಿ ಈ ವರ್ಷ ಸಾಕಷ್ಟು ವಿಭಿನ್ನ ಹಾದಿಯನ್ನು ಹೊಂದಿತ್ತು. ಏಕೆಂದರೆ ಅವರು ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ಹೀನಾಯ ಸ್ಥಿತಿಗೆ ತಲುಪಿತ್ತು. ನಂತರ ಪ್ಲೇಆಫ್​ಗೆ ಅರ್ಹತೆ ಪಡೆಯಲು ತಮ್ಮ ಕೊನೆಯ 6 ಪಂದ್ಯಗಳನ್ನು ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ಆರ್​ಸಿಬಿ ಪರ 14 ಪಂದ್ಯಗಳಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಮತ್ತು 155 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ

2008ರ ಅಂಡರ್-19 ವಿಶ್ವಕಪ್​ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ನಂತರ ಆರ್​​ಸಿಬಿ 2008 ರ ಐಪಿಎಲ್​ಗಾಗಿ ವಿರಾಟ್ ಕೊಹ್ಲಿಯನ್ನು 30,000 ಡಾಲರ್ಗೆ ಖರೀದಿಸಿತ್ತು. ಐಪಿಎಲ್ 2008 ರಲ್ಲಿ ಫ್ರಾಂಚೈಸಿಯು ಹರಾಜಿಗೆ ಮುಂಚಿತವಾಗಿ ಅಂಡರ್ 19 ಆಟಗಾರರನ್ನು ಖರೀದಿಸುವ ಆಯ್ಕೆಯನ್ನು ಹೊಂದಿತ್ತು. ಡೆಲ್ಲಿ ಡೇರ್ ಡೆವಿಲ್ಸ್ (ಈಗ ಕ್ಯಾಪಿಟಲ್ಸ್) ಕೊಹ್ಲಿಯನ್ನು ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶವನ್ನು ಹೊಂದಿತ್ತು. ಡೆಲ್ಲಿ ತನ್ನ ಬೌಲಿಂಗ್ ಘಟಕವನ್ನು ವೃದ್ಧಿಸಲು ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿತು. ಆರ್​ಸಿಬಿ ಕೊಹ್ಲಿಯನ್ನು ಖರೀದಿಸಿತು.

 

2009, 2011 ಮತ್ತು 2016ರಲ್ಲಿ ಆರ್​​ಸಿಬಿ ತಂಡ ತಂಡ ಫೈನಲ್ ತಲುಪಿತ್ತು. ಆದಾಗ್ಯೂ, ಏರಿಳಿತಗಳ ಹೊರತಾಗಿಯೂ, ವಿರಾಟ್ ಕೊಹ್ಲಿ ಆರ್​ಸಿಬಿ ಫ್ರಾಂಚೈಸಿಗೆ ನಿಷ್ಠರಾಗಿ ಉಳಿದಿದ್ದಾರೆ. 2008 ರಲ್ಲಿ, ಆರ್ಸಿಬಿ ವಿಜಯ್ ಮಲ್ಯ ಅವರ ಸಹ ಮಾಲೀಕತ್ವ ಹೊಂದಿತ್ತು. ಗಮನಾರ್ಹ ತಿರುವಿನ ನಂತರ ತಂಡವು ಪ್ಲೇಆಫ್ ತಲುಪುವ ಮೊದಲು, ಮಲ್ಯ ತಂಡಕ್ಕೆ ಮತ್ತು ವಿರಾಟ್​ಗೆ ಶುಭಾಶಯಗಳನ್ನು ಕಳುಹಿಸಿದರು.

ನಾನು ಆರ್​ಸಿಬಿ ಫ್ರಾಂಚೈಸಿಗೆ ಬಿಡ್ ಮಾಡಿದಾಗ ನನ್ನ ಆಂತರಿಕ ಮನಸು ಉತ್ತಮ ಆಯ್ಕೆಗಳನ್ನು ಮಾಡಿದ್ದೇನೆ ಎಂದು ಹೇಳಿತ್ತು. ಐಪಿಎಲ್ ಟ್ರೋಫಿಗೆ ಗೆಲ್ಲಲು ಆರ್​ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಆಂತರಿಕ ಮನಸ್ಸು ಹೇಳುತ್ತದೆ. ಮುಂದೆಯೂ ಶುಭವಾಗಲಿ ಎಂದು ಅವರು ಹೇಳಿದ್ದಾರೆ.

ನಮಗೆ ಮಾಹಿತಿ ನೀಡಿದರು. ನಾವು ಬಂದಾಗ ಗ್ಯಾಸ್ ವಾಸನೆ ಬರುತ್ತಿತ್ತು. ಮನೆಯ ಹಿಂದಿನ ಕಿಟಕಿ ತೆರೆದು ನೋಡಿದಾಗಲೂ ಸ್ಮೆಲ್ ಬರ್ತಿತ್ತು. ಫೈರ್ ಡಿಪಾರ್ಟ್ಮೆಂಟ್, ಎಫ್ಎಸ್ಐಲ್ ಬಂದು ಡೋರ್ ಒಪನ್ ಮಾಡಿದೆವು. ಮನೆಯಲ್ಲಿ ಮೂರು ಸಿಲಿಂಡರ್ ಇದೆ. ಗ್ಯಾಸ್‌ ಬಳಸಿ ಐರನ್ ಮಾಡ್ತಿದ್ದರು. ಮೇಲ್ನೋಟಕ್ಕೆ ಒಂದು ಸಿಲಿಂಡರ್ ಮಾತ್ರ ಲೀಕ್ ಆಗಿದೆ. ಉಳಿದ ಎರಡು ಸಿಲಿಂಡರ್ ಖಾಲಿ ಇತ್ತು” ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ