ಮಂಗಳವಾರ, ಡಿಸೆಂಬರ್ 5, 2023
ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಇಂದು ಮಿಜೋರಾಂ ನೂತನ ಸಿಎಂ ಸ್ಥಾನಕ್ಕೆ ಸಜ್ಜು..!-ಚೆನ್ನೈನಲ್ಲಿ ಭಾರಿ ಮಳೆ ; 5 ಮಂದಿ ಸಾವು - ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!-ಮಣಿಪುರದಲ್ಲಿ ಮತ್ತೆ ಹಿಂಸಾಚಾರ ; 13 ಜನ ಸಾವು!-ಉದ್ಯಮಿಗೆ ವಂಚನೆ ಆರೋಪ ಪ್ರಕರಣ ; ಚೈತ್ರಾ ಸಹಿತ ಇಬ್ಬರಿಗೆ ಜಾಮೀನು ಮಂಜೂರು..!-ಲೋಕಸಭಾ ಚುನಾವಣೆ 2024: ಕಾಂಗ್ರೆಸ್ ನಿಂದ ಹರೀಶ್ ಕುಮಾರ್ ಅಥವಾ ರಮನಾಥ ರೈ ನಳಿನ್ ವಿರುದ್ಧ ಅಭ್ಯರ್ಥಿ ?-ಅರಬ್ಬಿ ಸಮುದ್ರಕ್ಕೆ ಇಳಿದಿದ್ದ 27 ಮೀನುಗಾರರಿದ್ದ ಬೋಟ್​ ನಾಪತ್ತೆ-Gold Rate : ದುಬಾರಿಯತ್ತ ಬಂಗಾರದ ಬೆಲೆ ; ಇಂದಿನ ಚಿನ್ನದ ದರ ಹೇಗಿದೆ?-8 ಬಾರಿ ಮೈಸೂರು ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವು; ಕಾಡಾನೆ ಸೆರೆ ಹಿಡಿಯುವ ವೇಳೆ ದುರ್ಘಟನೆ..!-ದಿವ್ಯಾಂಗರು, ಅಂಗವಿಕಲರ ಕಲ್ಯಾಣದ ಮಹತ್ವದ ವಿಷಯದ ಕುರಿತಂತೆ ಸರ್ಕಾರದ ಗಮನ ಸೆಳೆದ ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್-ಪ್ರತಾಪ್ ಸಿಂಹರವರು ಸತತ ಎರಡು ಬಾರಿ ಗೆದ್ದಂತಹ ಮೈಸೂರು ಲೋಕಸಭಾ ಕ್ಷೇತ್ರ ಈ ಬಾರಿ ಜೆಡಿಎಸ್ ತೆಕ್ಕೆಗೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!

Twitter
Facebook
LinkedIn
WhatsApp
ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನಲ್ಲಿ(Asian Games 2023) ಅಗೋಘ ಪ್ರದರ್ಶನ ತೋರುತ್ತಿರುವ ಭಾರತೀಯ ಕ್ರೀಡಾಪಟುಗಳು ಪದಕ ಬೇಟೆಯನ್ನು ಮುಂದುವರಿಸಿದ್ದಾರೆ. ಇದೇ ವೇಳೆ ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ವಿತ್ಯಾ ರಾಮರಾಜ್(Vithya Ramraj) ಅವರು ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾ(PT Usha) ಅವರ 39 ವರ್ಷಗಳ ರಾಷ್ಟ್ರೀಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಫೈನಲ್ ಪ್ರವೇಶ ಪಡೆದಿರುವ ಅವರು ಪದಕವೊಂದರ ಮೇಲೆ ಚಿತ್ತ ನೆಟ್ಟಿದ್ದಾರೆ.

ಸೋಮವಾರ ನಡೆದ ಮಹಿಳೆಯರ 400 ಮೀ ಹರ್ಡಲ್ಸ್‌ನಲ್ಲಿ, 25 ವರ್ಷದ ವಿತ್ಯಾ ತನ್ನ ಹೀಟ್‌ನಲ್ಲಿ ಮೊದಲ ಸ್ಥಾನ ಮತ್ತು ಒಟ್ಟಾರೆಯಾಗಿ 55.42 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಎರಡನೇ ಸ್ಥಾನಗಳಿಸಿ ಫೈನಲ್‌ ಪ್ರವೇಶಿಸಿದ್ದಾರೆ. ಮಂಗಳವಾರ ಫೈನಲ್​ ನಡೆಯಲಿದೆ. ಉಳಿದಂತೆ ಜೆಸ್ಸಿ ಸಂದೇಶ್, ಮೊಹಮ್ಮದ್ ಅಫ್ಸಲ್ ಪುಲಿಕ್ಕಲಕತ್, ಮತ್ತು ಕೃಷ್ಣನ್ ಕುಮಾರ್ ಸೇರಿ ಹಲವು ಅಥ್ಲೀಟ್‌ಗಳು ತಮ್ಮ ಈವೆಂಟ್‌ಗಳಲ್ಲಿ ಗೆದ್ದು ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ.

ಅಕ್ಟೋಬರ್ 1 ರಂದು ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಮುರಳಿ ಶ್ರೀಶಂಕರ್ ಬೆಳ್ಳಿ ಪದಕ ಗೆದ್ದಿದ್ದರು. ಶ್ರೀಶಂಕರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಲು 8.22 ಮೀ ದೂರ ಜಿಗಿದ್ದಿದ್ದರು. ಚೀನಾದ ವಾಂಗ್ ಜಿಯಾನನ್ ಚಿನ್ನ ಗೆದ್ದರು.

ಸೋಮವಾರ ಮೂರು ಪದಕ ಗೆದ್ದ ಭಾರತ

9ನೇ ದಿನವಾದ ಸೋಮವಾರ ಭಾರತ ಸದ್ಯ ಮೂರು ಪದಕ ತನ್ನದಾಗಿಸಿಕೊಂಡಿದೆ. ಮಹಿಳೆಯರ ಡಬಲ್ಸ್ ಟಿಟಿ(table tennis) ವಿಭಾಗದಲ್ಲಿ ಭಾರತದ ಐಹಿಕಾ ಮುಖರ್ಜಿ(Ayhika Mukheerjee) ಮತ್ತು ಸುತೀರ್ಥ ಮುಖರ್ಜಿ(Suthira Mukherjee) ಕಂಚಿನ ಪದಕಕ್ಕೆ ತೃಪ್ತಿಪಟ್ಟಿಟ್ಟರು. ಸೆಮಿಫೈನಲ್​ ಪಂದ್ಯದಲ್ಲಿ ಭಾರತೀಯ ಜೋಡಿ ಉತ್ತರ ಕೊರಿಯಾದ ಸುಗ್ಯೊಂಗ್ ಪಾಕ್ ಮತ್ತು ಸುಯೊಂಗ್ ಚಾ ವಿರುದ್ಧ 11-7, 8-11, 11-7, 8-11, 9-11, 11-5, 2-11 ಅಂತರದಲ್ಲಿ ಸೋಲು ಕಂಡು ಮೂರನೇ ಸ್ಥಾನ ಪಡೆದರು.

ಸ್ಕೇಟಿಂಗ್​ನಲ್ಲಿ 2 ಪದಕ

ಇಂದು ಬೆಳಗ್ಗೆ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಮತ್ತು ಪುರುಷರ ತಂಡವು ಕಂಚಿನ ಪದಕದೊಂದಿಗೆ ಖಾತೆ ತೆರೆದಿತ್ತು. ಸಂಜನಾ ಬತುಲಾ, ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಾಧು ಮತ್ತು ಆರತಿ ಕಸ್ತೂರಿ ರಾಜ್ ಅವರನ್ನೊಳಗೊಂಡ ಭಾರತದ ಮಹಿಳಾ ರೋಲರ್ ಸ್ಕೇಟಿಂಗ್ ತಂಡವು 3000 ಮೀಟರ್ ಸ್ಪೀಡ್ ಸ್ಕೇಟಿಂಗ್ ರಿಲೇಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

ಮಹಿಳಾ ತಂಡ ಕ್ವಾರ್ಟೆಟ್ 4 ನಿಮಿಷ ಮತ್ತು 34.861 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿತು. 4 ನಿಮಿಷ 19.447 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಚೈನೀಸ್ ತೈಪೆ ಚಿನ್ನದ ಪದಕ ಗೆದ್ದರೆ, ದಕ್ಷಿಣ ಕೊರಿಯಾ 4 ನಿಮಿಷ 21.146 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದುಕೊಂಡಿತು.

ಪುರುಷರ ಸ್ಪೀಡ್ ಸ್ಕೇಟಿಂಗ್ 3000ಮೀ. ರಿಲೇಯಲ್ಲಿ ಕಂಚಿಗೆ ತೃಪ್ತಿಪಟ್ಟಿದೆ. ಆರ್ಯನ್ ಪಾಲ್, ಆನಂದ್ ಕುಮಾರ್, ಸಿದ್ಧಾಂತ್ ಮತ್ತು ವಿಕ್ರಮ್ ಅವರನ್ನೊಳಗೊಂಡ ತಂಡ 4:10.128 ಸೆಕೆಂಡುಗಳಲ್ಲಿ ಓಟವನ್ನು ಮುಗಿಸಿ ಮೂರನೇ ಸ್ಥಾನಿಯಾಯಿತು. ಸೋಮವಾರ ಭಾರತಕ್ಕೆ ಒಲಿದ ಎರಡನೇ ಪದಕ ಇದಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ