Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!
Vidya Balan :ಬಾಲಿವುಡ್ನ ಖ್ಯಾತ ನಟಿ ವಿದ್ಯಾ ಬಾಲನ್ ಅವರು ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ. ಅವರ ಹೆಸರಿನಲ್ಲಿ ದೊಡ್ಡ ಮೋಸ ನಡೆದಿದೆ. ಅನೇಕ ದಿನಗಳಿಂದ ನಡೆಯುತ್ತಿದ್ದ ವಂಚನೆಯ ಬಗ್ಗೆ ನಟಿಗೆ ತಡವಾಗಿ ಗೊತ್ತಾಗಿದೆ. ಹಾಗಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲವು ಕಿಡಿಗೇಡಿಗಳು ವಿದ್ಯಾ ಬಾಲನ್ ಹೆಸರಿನಲ್ಲಿ ನಕಲಿ ಸೋಶಿಯಲ್ ಮೀಡಿಯಾ ಖಾತೆಗಳನ್ನು ತರೆದು ಹಣ ವಸೂಲಿ ಮಾಡುವ ದಂಧೆ ನಡೆಸಿದ್ದಾರೆ. ಕಿಡಿಗೇಡಿಗಳ ಕೃತ್ಯ ಈಗ ಬೆಳಕಿಗೆ ಬಂದಿದ್ದು, ವಿದ್ಯಾ ಬಾಲನ್ ಅವರು ಕಾನೂನಿನ ಮೊರೆ ಹೋಗಿದ್ದಾರೆ.
ಚಿತ್ರರಂಗ ಎಂಬುದು ಮಾಯಾ ಲೋಕ. ಇಲ್ಲಿ ಕೆಲಸ ಮಾಡಬೇಕು, ಅವಕಾಶ ಪಡೆದುಕೊಳ್ಳಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ಈ ಆಸೆಯನ್ನೇ ಟಾರ್ಗೆಟ್ ಮಾಡಿಕೊಂಡು ಕೆಲವರ ವಂಚನೆ ನಡೆಸುತ್ತಾರೆ. ಅದಕ್ಕೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹೆಸರು ಬಳಸುತ್ತಾರೆ. ಈ ಹಿಂದೆ ಸಲ್ಮಾನ್ ಖಾನ್ ಅವರ ಹೆಸರು ದುರ್ಬಳಕೆ ಆಗಿತ್ತು. ಈಗ ವಿದ್ಯಾ ಬಾಲನ್ ಅವರ ಹೆಸರು ಬಳಸಿಕೊಂಡು ಜನರಿಗೆ ವಂಚನೆ ಮಾಡಿದ್ದು ತಿಳಿದುಬಂದಿದೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.
ವಿದ್ಯಾ ಬಾಲನ್ ಅವರು ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದ ಕಿಡಿಗೇಡಿಗಳು ಜನರಿಂದ ಹಣ ವಸೂಲಿ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ವಿದ್ಯಾ ಬಾಲನ್ ಅವರ ಹೆಸರಿಗೆ ಕಳಂಕ ಬರುತ್ತಿದೆ. ಈ ರೀತಿಯ ಕೃತ್ಯ ನಡೆದಿದೆ ಎಂಬುದು ತಮ್ಮ ಗಮನಕ್ಕೆ ಬಂದ ಕೂಡಲೇ ಅವರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
Bollywood actress Vidya Balan lodged an FIR against an unknown person for creating a fake Instagram account in her name and asking for money from people. An unknown person who created an identical Instagram ID asked people for money by assuring them of jobs. Khar Police has…
— ANI (@ANI) February 21, 2024
ಜನರನ್ನು ವಂಚಿಸುವ ಉದ್ದೇಶದಿಂದ ಕಿಡಿಗೇಡಿಗಳು ವಿದ್ಯಾ ಬಾಲನ್ ಅವರ ಹೆಸರಿನಲ್ಲಿ ಈ-ಮೇಲ್ ಖಾತೆಯನ್ನೂ ತೆರೆದಿದ್ದಾರೆ. ಆ ಮೂಲಕ ಅನೇಕರಿಗೆ ಸಂದೇಶ ಕಳಿಸಿದ್ದಾರೆ. ಚಿತ್ರರಂಗದಲ್ಲಿ ಇರುವ ಸೆಲೆಬ್ರಿಟಿಗಳನ್ನೂ ವಂಚಿಸಲು ಪ್ರಯತ್ನಿಸಲಾಗಿದೆ. ವಿದ್ಯಾ ಬಾಲನ್ ಹೆಸರಿನಲ್ಲಿ ಮೋಸ ನಡೆಯುತ್ತಿದೆ ಎಂಬುದು ಇತ್ತೀಚೆಗೆ ಕಾಸ್ಟ್ಯೂಮ್ ಡಿಸೈನರ್ ಒಬ್ಬರಿಗೆ ತಿಳಿದು ಬಂದಿದೆ. ಅದನ್ನು ಅವರು ನಟಿಗೆ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ವಿದ್ಯಾ ಬಾಲನ್ ಅವರು ದೂರು ದಾಖಲಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ವಿದ್ಯಾ ಬಾಲನ್ ಅವರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ತಮಗೆ ಸೂಕ್ತವಾದ ಸಿನಿಮಾಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಿದ್ದಾರೆ. ‘ಭೂಲ್ ಭುಲಯ್ಯ 3’ ಸಿನಿಮಾಗೆ ಅವರು ಸಹಿ ಮಾಡಿದ್ದಾರೆ. 2007ರಲ್ಲಿ ಬಂದ ಸೂಪರ್ ಹಿಟ್ ‘ಭೂಲ್ ಭುಲಯ್ಯ’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದ ಅವರು ಅದರ ಸೀಕ್ವೆಲ್ನಲ್ಲಿ ಮಿಸ್ ಆಗಿದ್ದರು. ಈಗ ‘ಭೂಲ್ ಭುಲಯ್ಯ 3’ ಸಿನಿಮಾದ ಪಾತ್ರವರ್ಗಕ್ಕೆ ಸೇರ್ಪಡೆ ಆಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.