ಸದ್ದಿಲ್ಲದೆ ಜನಸಾಮಾನ್ಯರ ಸಮಸ್ಯೆಗಳಿಗೆ ಸದನದಲ್ಲಿ ಧ್ವನಿಯಾದ ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್.
ಯಾವುದೇ ಸುದ್ದಿ ಇಲ್ಲದೆ ಯಾವುದೇ ಸದ್ದಿಲ್ಲದೆ, ಪ್ರಚಾರ ಬಯಸದೆ, ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಧ್ವನಿಯ ರೂಪದಲ್ಲಿ ಎತ್ತಿದ ಕೀರ್ತಿ ಹಾಲಿ ಎಂಎಲ್ಸಿ ಹರೀಶ್ ಕುಮಾರ್ ರವರಿಗೆ ಸಲ್ಲಬೇಕಾಗುತ್ತದೆ.
ಪ್ರಚಾರವನ್ನು ಬಯಸುವ ವಿಷಯಗಳನ್ನು ಎತ್ತಿಕೊಳ್ಳದೆ, ಕೇವಲ ಜನಸಾಮಾನ್ಯರ ಸಮಸ್ಯೆಗಳನ್ನು ಮಾತ್ರಾ ವಿಧಾನ ಪರಿಷತ್ತಿನಲ್ಲಿ ಹಲವಾರು ಬಾರಿ ಎತ್ತಿದ ಕೀರ್ತಿ ಹರೀಶ್ ಕುಮಾರ್ ರವರಿಗೆ ಸಲ್ಲುತ್ತದೆ.
ಅವರು ಕಲಾಪ ನಡೆಯುವ ಸಂದರ್ಭದಲ್ಲಿ ಪ್ರಚಾರಗಿಟ್ಟಿಸಿಕೊಳ್ಳುವ ವಿಷಯಗಳನ್ನು ವಿಧಾನ ಪರಿಷತ್ತಿನಲ್ಲಿ ಎತ್ತಿಕೊಳ್ಳಲಿಲ್ಲ. ಆದರೆ ಅವರು ಮಾಡಿರುವ ಬಹುದೊಡ್ಡ ಕೆಲಸ ಜನಸಾಮಾನ್ಯರು, ಕಾರ್ಯಕರ್ತರು ಅವರ ಬಳಿ ಸಮಸ್ಯೆಗಳನ್ನು ಹೇಳಿಕೊಂಡಾಗ, ಅದಕ್ಕೆ ಕಾನೂನಿನ ತೊಡಕುಗಳು ಉಂಟಾಗಿದೆ ಎಂದು ಅವರಿಗೆ ಮನವರಿಕೆ ಆದಾಗ ಅದನ್ನು ಅಭ್ಯಾಸ ಮಾಡಿ, ತಜ್ಞರೊಂದಿಗೆ ಯಾವುದೇ ಅಹಂ ಇಲ್ಲದೆ ಸಮಾಲೋಚನೆ ನಡೆಸಿ ಪರಿಷತ್ತಿನಲ್ಲಿ ಸಮರ್ಥವಾಗಿ ಮಂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಇದನ್ನು ಕಂಡ ವಿಧಾನ ಪರಿಷತ್ತು ಸದಸ್ಯ ರೊಬ್ಬರು ‘ನಿಮಗೆ ಈ ರೀತಿಯ ತಳಮಟ್ಟದ ಸಮಸ್ಯೆಗಳು ಹೇಗೆ ಗೊತ್ತಾಗುತ್ತದೆ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ನೇಮಕ, ಎಂಡೋ ಸಂತ್ರಸ್ತರ ಸೌಲಭ್ಯ, ಗ್ರಾಮೀಣ ಸಾರಿಗೆಗಳ ಕುರಿತಾದ ಸಮಸ್ಯೆಗಳು, 11ಎ ಫಾರಂ ಕುರಿತಾದ ರೆವಿನ್ಯೂ ಸಮಸ್ಯೆಗಳು, ಪಶುವಹಾರದ ಕಚ್ಚಾ ವಸ್ತುಗಳ ಮೇಲೆ ಬೆಲೆ ಏರಿಕೆ. ಈ ರೀತಿಯಾಗಿ ತೀರಾ ಜನಸಾಮಾನ್ಯರ ಸಮಸ್ಯೆಗಳಿಗೆ ವಿಧಾನ ಪರಿಷತ್ತಿನಲ್ಲಿ ಧ್ವನಿಯಾದ ಏಕೈಕ ಸದಸ್ಯ ಹರೀಶ್ ಕುಮಾರ್ ಎಂದರೆ ಉತ್ಪೇಕ್ಷೆ ಯಾಗಲಾರದು. ಯಾಕೆಂದರೆ ಅವರು ಎತ್ತಿರುವ ವಿಷಯಗಳು ತಳಮಟ್ಟದ ಜನರ ಸಮಸ್ಯೆಗಳು ಎಂಬುದನ್ನು ನಾವು ಗಮನಿಸಬೇಕಾಗಿದೆ.
ನಿನ್ನೆ ದಿವಸ ಹಿಂದುಳಿದ ವರ್ಗಗಳ ಸಂಘ ಗಳಿಗೆ ಕಳೆದ 25 ವರ್ಷಗಳಲ್ಲಿ ಅರ್ಜಿ ಸಲ್ಲಿಸಿದ್ದರೂ ಜಾಗ ಸಿಗದೇ ಇರುವ ಅಂಶವನ್ನು ಹಾಗೂ ಅಧಿಕಾರಿಗಳು ಸರ್ಕಾರೇತರ ಸಂಸ್ಥೆಗಳನ್ನು ಖಾಸಗಿ ಸಂಸ್ಥೆಗಳು ಎಂದು ನಮೂದಿಸಿ ತಿರಸ್ಕರಿಸುವ ಬಹುಮುಖ್ಯವಾದ ಅಂಶವನ್ನು ಸದನದಲ್ಲಿ ಎತ್ತಿ, ಕಾನೂನಿನಲ್ಲಿ ಹೊಸ ಬದಲಾವಣೆಗೆ ಆ ಮೂಲಕ ನಾಂದಿ ಹಾಡಿರುವುದು ಹರೀಶ್ ಕುಮಾರ್ ರವರ ಜನಪರ ಕಾಳಜಿಗೆ ಬಹುದೊಡ್ಡ ಕನ್ನಡಿಯಾಗಿದೆ. ಮಡಿಕೇರಿ ಬಿಲ್ಲವ ಸಂಘ, ಕಾವೂರು ಬಿಲ್ಲವ ಸಂಘ, ಕುಲಾಲ, ವಿಶ್ವಕರ್ಮ ಸಂಘಗಳು ಸಂಘದ ಜಾಗಕ್ಕಾಗಿ 25 ವರ್ಷಗಳಿಂದ ಸತತವಾಗಿ ಅರ್ಜಿ ಸಲ್ಲಿಸುತ್ತಿರುವ ವಿಷಯಗಳನ್ನು ಅವರು ಎತ್ತಿರುವುದು ಅವರ ಜನಪರ ನಿಲುವಿಗೆ ಸಾಕ್ಷಿಯಾಗಿದೆ. ಇದು ಒಂದು ಉದಾಹರಣೆ ಅಷ್ಟೇ.
ತನ್ನ ಬಗ್ಗೆ ಟೀಕೆ ಮಾಡಿದವರಿಗೆ ಯಾವುದೇ ಉತ್ತರ ನೀಡದೆ, ಜನಸಾಮಾನ್ಯರು ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ಅದನ್ನು ಜವಾಬ್ದಾರಿಯುತ ಶಾಸನಸಭೆಯ ಸದಸ್ಯನಾಗಿ ಅವರ ಸಮಸ್ಯೆಗೆ ದ್ವನಿಯಾಗಿರುವುದು ಅದು ಹರೀಶ್ ಕುಮಾರ್ ರವರ ಹೆಗ್ಗಳಿಕೆ ಎಂಬುದನ್ನು ಅವರಲ್ಲಿ ಬಂದು ಸಮಸ್ಯೆ ಹೇಳಿದವರ ಅಭಿಪ್ರಾಯ.
ಒಬ್ಬ ಜನಸಾಮಾನ್ಯನು ಬಂದು ತನ್ನ ಸಮಸ್ಯೆಯನ್ನು ಹೇಳಿಕೊಳ್ಳುವ ಸಾಧ್ಯತೆ ಹಾಗೂ ಅದಕ್ಕೆ ಪ್ರತಿ ಮಾತನಾಡದೆ, ಬುದ್ಧಿವಂತಿಕೆಯಿ0ದ ಉತ್ತರ ನೀಡದೆ ನಿಜವಾದ ಸದನದ ಸದಸ್ಯನ ಜವಾಬ್ದಾರಿಯನ್ನು ಚಾಚು ತಪ್ಪದೆ ಮಾಡಿದ ನಿಜವಾದ ಜನಪ್ರತಿನಿಧಿ ಹರೀಶ್ ಕುಮಾರ್.
ಪ್ರಚಾರಗಳಿಗೆ ಹಾ ತೊರೆಯದೆ, ಕೆಲವು ಪಟ್ಟ ಭದ್ರ ಹಿತಾಸಕ್ತಿಗಳ ವ್ಯವಸ್ಥಿತ ಟೀಕೆ ಬಗ್ಗೆ ತಡೆಕೆಡಿಸಿಕೊಳ್ಳದೆ, ಜನಸಾಮಾನ್ಯರಿಗೂ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಸಾಧ್ಯವಾಗಿರುವುದು ಹರೀಶ್ ಕುಮಾರ್ ಮುಂದೆ ಎಂಬುದು ಅಷ್ಟೇ ಸತ್ಯ!
ಹರೀಶ್ ಕುಮಾರ್ ಅಗ್ಗದ ಜನಪ್ರಿಯತೆಗೆ ಸರ್ಕಸ್ ಮಾಡದೆ ಇರಬಹುದು. ಆದರೆ ಅವರ ಬಳಿ ಸಮಸ್ಯೆಯನ್ನು ಹೇಳಿಕೊಂಡಾಗ, ಕಾನೂನು ತೊಡಕುಗಳನ್ನು ನಿವೇದಿಸಿಕೊಂಡಾಗ ಅದನ್ನು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಗಳ ರೂಪದಲ್ಲಿ ಜನರ ಧ್ವನಿಯಾಗಿ ಹೊರಹೊಮ್ಮಿಸಿದ್ದಾರೆ.
ಕರ್ನಾಟಕದ ಘನತೆಯ ಸದನ ಹರೀಶ್ ಕುಮಾರ್ ರವರಂತಹ ಜವಾಬ್ದಾರಿಯುತ ವಿಧಾನ ಪರಿಷತ್ತು ಸದಸ್ಯರನ್ನು ಪಡೆದುಕೊಂಡಿದೆ ಎಂಬ ವಿಷಯ ಸುದ್ದಿ ಇಲ್ಲದೆ, ಸದ್ದಿಲ್ಲದೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ವಿಧಾನ ಪರಿಷತ್ತಿನ ಕಲಾಪಗಳ ದಾಖಲೆ ಅದನ್ನು ಹೇಳುತ್ತಿದೆ.