Video Viral : ವೇದಿಕೆಯಲ್ಲಿ ಶಾಸಕಿ ಮೈಮೇಲೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ ಬಿಜೆಪಿ ಸಂಸದ!
ಲಕ್ನೋ (Video Viral): ಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಅವರು ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಶಾಸಕಿಯನ್ನು ಅನುಚಿತವಾಗಿ ಸ್ಪರ್ಷಿಸಿದ್ದಾರೆನ್ನಲಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Video Viral) ಆಗಿದೆ. ಉತ್ತರ ಪ್ರದೇಶದ ಅಲಿಗಢ್‌ನ ಕೋಲ್ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ.
ಕೋಲ್ ಶಾಸಕ ಅನಿಲ್ ಪರಾಶರ್ ಅವರು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶ್ರೀ ರಾಮ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಬಿಜೆಪಿ ಸಂಸದ ಸತೀಶ್ ಗೌತಮ್ ಮಹಿಳಾ ಶಾಸಕಿಯ ಜೊತೆ ಅನುಚಿತವಾಗಿ ವರ್ತಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಸೆರೆಯಾಗಿರುವ ಪ್ರಕಾರ ವೇದಿಕೆಯಲ್ಲಿ ಹತ್ತಕ್ಕೂ ಹೆಚ್ಚು ಜನರು ಅತಿಥಿಗಳು ಕೂತಿದ್ದಾರೆ. ಮಹಿಳಾ ಶಾಸಕಿಯ ಪಕ್ಕ ಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಕೂಡ ಕೂತಿದ್ದು, ಈ ವೇಳೆ ಸಂಸದ ಮಹಿಳಾ ಶಾಸಕಿಯ ಕೈ ಹಿಡಿದು ಸವರಿದ್ದಾರೆ. ನಂತರ ವೇದಿಕೆಯಲ್ಲಿಯೇ ಶಾಸಕಿಯ ಹೆಗಲಿಗೆ ಕೈಹಾಕಿ ತನ್ನತ್ತ ಎಳೆದಿದ್ದಾರೆ. ಈ ವೇಳೆ ಶಾಸಕಿ ಮುಜುಗರದಿಂದ ಕೊಸರಾಡಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಶಾಸಕಿಯನ್ನು ಅನುಚಿತವಾಗಿ ಸ್ಪರ್ಷ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಂಸದನ ಈ ನಡೆಯಿಂದ ಅಸಮಾಧಾನಗೊಂಡ ಶಾಸಕಿ ನಂತರ ಅಲ್ಲಿಂದ ಎದ್ದು ಬೇರೆ ಕಡೆ ಕೂತಿದ್ದಾರೆ ಎಂದು ವರದಿಯಾಗಿದೆ.
ವೇದಿಕೆಯಲ್ಲಿ ಸಾರಿಗೆ ಸಚಿವ ದಯಾಶಂಕರ್ ಸಿಂಗ್, ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ, ಮಾಜಿ ಮೇಯರ್ ಶಕುಂತಲಾ ಭಾರತಿ, ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಪೂನಂ ಬಜಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಜಯ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಗೂ ಪ್ರತಿಪಕ್ಷಗಳು ಬಿಜೆಪಿ ಹಾಗೂ ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
“ಕಾರ್ಯಕ್ರಮದ ಮಧ್ಯದಲ್ಲಿ ಮಹಿಳಾ ಶಾಸಕರಿಗೆ ಕಿರುಕುಳ ನೀಡುತ್ತಾರೆಂದರೆ, ಸಾಮಾನ್ಯ ಮಹಿಳೆಯರು ಮತ್ತು ಹುಡುಗಿಯರು ಸುರಕ್ಷಿತವಾಗಿರುತ್ತಾರೆಯೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.