ತುಂಬು ಗರ್ಭಿಣಿ ಮೇಲೆ ಹಲ್ಲೆ, ಹೊಟ್ಟೆಯೊಳಗೇ ಮಗು ಸಾವು!
Twitter
Facebook
LinkedIn
WhatsApp
ಕ್ಷುಲ್ಲಕ ಕಾರಣಕ್ಕೆ ತುಂಬು ಗರ್ಭಿಣಿ ಮೇಲೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ನಡೆದಿದ್ದು ಬೆಂಗಳೂರಿನ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೊಟ್ಟೆಗೆ ಪೆಟ್ಟು ಬಿದ್ದ ಪರಿಣಾಮ ಮಗು ದುರ್ಮರಣಕ್ಕೀಡಾಗಿದೆ.
ಜಯಶೀಲಾ ಎಂಬ ಗರ್ಭಿಣಿಗೆ ಒದ್ದು ಹಲ್ಲೆ ಮಾಡಿರುವ ಆರೋಪಿಗಳು. ಪದ್ಮಮ್ಮ, ಕಾವ್ಯ ಎಂಬುವವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ
ಜಯಶೀಲಾ ಹೋಟೆಲ್ ಗೆ ಬಂದಾಗ ಗಲಾಟೆಯಾಗಿದೆ. ಆಗ ಗಲಾಟೆ ಬೇಡವೆಂದು ರಾಜಿ ಮಾಡಿಕೊಂಡಿದ್ದಾರೆ. ಗೋವಿಂದರಾಜನಗರ ಪೊಲಿಸ್ ಆದ್ರೆ ರಾಜಿ ಬಳಿಕ ಮತ್ತೆ ಸಿಕ್ಕಾಗ ಗರ್ಭಿಣಿ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳು. ಈ ವೇಳೆ ತುಂಬು ಗರ್ಭಿಣಿ ಎಂಬುದುನ್ನು ನೋಡದೇ ಜಯಶೀಲಾ ಎಂಬಾಕೆಗೆ ಒದ್ದು ಹಲ್ಲೆ ಮಾಡಿದ್ದಾರೆ. ಈ ವೇಳೆ ಹೊಟ್ಟೆಗೆ ಗಂಭೀರ ಪೆಟ್ಟು ಬಿದ್ದು ಮಗು ಮೃತಪಟ್ಟಿದೆ.
ಘಟನೆ ಸಂಬಂಧ ಇದೀಗ ಜಯಶೀಲಾ ಎಂಬುವವರಿಂದ ಠಾಣೆಗೆ ದೂರು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ವಿಚಾರಣೆಗೆ ಮುಂದಾಗಿರುವ ಪೊಲೀಸರು.