ವೇಣೂರು: ಗೋಳಿಯಂಗಡಿಯಲ್ಲಿನ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ ; ಮೂವರು ಕಾರ್ಮಿಕರು ಸಾವನ್ನಪ್ಪಿರುವ ಶಂಕೆ..!
ವೇಣೂರು ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಬಳಿಯ ಕುಕ್ಕೇಡಿ ಗ್ರಾಮ ವ್ಯಾಪ್ತಿಯಲ್ಲಿ ಪಟಾಕಿ ತಯಾರಿಸುತ್ತಿದ್ದ ಘಟಕದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಮೂವರು ದುರಂತ ಸಾವಿಗೀಡಾಗಿದ್ದಾರೆ.
ಸಂಜೆ 5.30ರ ವೇಳೆಗೆ ಸುಡುಮದ್ದು ಶೇಖರಣೆ ಮಾಡಿದ್ದ ಜಾಗದಲ್ಲಿ ಬ್ಲಾಸ್ಟ್ ಆಗಿದ್ದು ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಬೆಳ್ತಂಗಡಿ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ. ಬಶೀರ್ ಎಂಬವರಿಗೆ ಸೇರಿದ ಸಾಲಿಡ್ ಫೈರ್ ವರ್ಕ್ ಎಂಬ ಫ್ಯಾಕ್ಟರಿಯಲ್ಲಿ ಸ್ಪೋಟ ಉಂಟಾಗಿದೆ.
ಮೃತರು ಉತ್ತರ ಭಾರತ ಮೂಲದ ಕಾರ್ಮಿಕರು ಎನ್ನಲಾಗಿದೆ. ಸ್ಥಳಕ್ಕೆ ವೇಣೂರು ಪೊಲೀಸರು ಆಗಮಿಸಿದ್ದು ಕಾರ್ಯಾಚರಣೆ ನಡೆಸಿದ್ದಾರೆ. ಬಶೀರ್ ಸ್ಥಳೀಯವಾಗಿ ಪಂಚಾಯತ್ ಪರವಾನಗಿ ಪಡೆದು ಸುಡುಮದ್ದು ತಯಾರಿ ಕೆಲಸ ಮಾಡುತ್ತಿದ್ದರು. ಜಾತ್ರೆ, ಉತ್ಸವಕ್ಕೆ ಸುಡುಮದ್ದುಗಳನ್ನು ಪೂರೈಕೆ ಮಾಡುತ್ತಿದ್ದರು. ಸ್ಪೋಟಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲ. ಸ್ಪೋಟದ ತೀವ್ರತೆಗೆ ಇಬ್ಬರ ಕೈಕಾಲು, ದೇಹ ಛಿದ್ರಗೊಂಡಿದೆ. ಹೊರಗಡೆ ಮಾಂಸದ ಮುದ್ದೆ ಬಿದ್ದುಕೊಂಡಿರುವ ದೃಶ್ಯ ಸೆರೆಯಾಗಿದ್ದು ಸ್ಫೋಟದ ತೀವ್ರತೆಗೆ ಸಾಕ್ಷಿಯಾಗಿದೆ.