ವೇಣೂರು: ಪಟಾಕಿ ಗೋಡೌನ್ ನಲ್ಲಿ ಸ್ಪೋಟ ಪ್ರಕರಣ ;ನಾಲ್ಕನೇ ಆರೋಪಿ ಅರೆಸ್ಟ್...!
ಬೆಳ್ತಂಗಡಿ ಫೆಬ್ರವರಿ 06: ವೇಣೂರು ಪಟಾಕಿ ಗೋಡೌನ್ ನಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರು ಉತ್ತರ ದಿವಾನರ ಪಾಳ್ಯ ನಿವಾಸಿಯಾದ ಅನಿಲ್.ಎಂ ಡೇವಿಡ್ (49) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಅನಿಲ್ ಹೆಚ್ಚಿನ ಪಟಾಕಿ ರಾಸಾಯನಿಕ ಸರಬರಾಜು ಮಾಡುತ್ತಿದ್ದನು ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಇದರೊಂದಿಗೆ ಈ ಸ್ಪೋಟ ಪ್ರಕರಣಕ್ಕೆ ಸಂಬಂಧಿಸದಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೇ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಜನವರಿ 28ರ ಸಂಜೆ 5.30 ಸುಮಾರಿಗೆ ಕುಕ್ಕೇಡಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಪೋಟವಾಗಿತ್ತು. ಈ ಸ್ಪೋಟದಲ್ಲಿ ಮೂವರು ಕಾರ್ಮಿಕರು ಸಾವನಪ್ಪಿದ್ದರು.
ಅನೇಕರು ಇಂತಹ ರೆಡಿಮೇಡ್ ಮನೆಗಳ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಕೈಗೆಟಕುವ ದರದಲ್ಲಿ ಚಿಕ್ಕ ರೆಡಿಮೇಡ್ ಮನೆ ದೊರೆಯುತ್ತದೆ. ಕಡಿಮೆ ಮಂದಿ ಇರುವ ಕುಟುಂಬಕ್ಕೆ ಇಂತಹ ಮನೆ ಸಾಕಾಗುತ್ತದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವರು ಇಂತಹ ಮನೆ ಖರೀದಿಇಂದ ಹಣ ವ್ಯರ್ಥ ಎಂದು ಹೇಳಿದ್ದಾರೆ