ಸೋಮವಾರ, ಮೇ 20, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ – ಪ್ರಯಾಣಿಕರು ಅಪಾಯದಿಂದ ಪಾರು

Twitter
Facebook
LinkedIn
WhatsApp
40

ಭೋಪಾಲ್: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ‌ (Vande Bharat Train) ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರ ಮುಂಜಾನೆ ಮಧ್ಯಪ್ರದೇಶದ (Madhya Pradesh) ಕುರ್ವೈ ಕೆಥೋರಾ ರೈಲು ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ರೈಲು ಭೋಪಾಲ್‍ನಿಂದ ದೆಹಲಿಗೆ (Delhi) ತೆರಳುತ್ತಿತ್ತು. ಈ ವೇಳೆ ರೈಲಿನ ಕೋಚ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿದೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೆಲವು ಪ್ರಯಾಣಿಕರು ಸಹ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. 

ಈ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೇ ಅಧಿಕಾರಿಗಳು ಬ್ಯಾಟರಿ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಅಲ್ಲದೇ ಇಂತಹ ಪ್ರಕರಣ ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್‍ನಲ್ಲಿ ಮಧ್ಯಪ್ರದೇಶದ ರಾಣಿ ಕಮಲಪತಿ ರೈಲು ನಿಲ್ದಾಣದಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಉದ್ಘಾಟಿಸಿದ್ದರು.

3 ದಿನದ ಹಸುಗೂಸಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ: ಶಿವಮೊಗ್ಗದಿಂದ ಬೆಂಗಳೂರಿಗೆ ಶಿಫ್ಟ್

ಬೆಂಗಳೂರು: ತೆರೆದ ಹೃದಯ ಶಸ್ತ್ರಚಿಕಿತ್ಸೆ (Open Heart Surgery) ಹಿನ್ನೆಲೆ 3 ದಿನದ ಹಸುಗೂಸನ್ನು (Baby) ಶಿವಮೊಗ್ಗದ (Shivamogga) ಸರ್ಜಿ ಆಸ್ಪತ್ರೆಯಿಂದ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಶಿಫ್ಟ್​ ಮಾಡಲಾಗಿದೆ. ಶಿವಮೊಗ್ಗದಿಂದ ರಾತ್ರಿ 10.10ಕ್ಕೆ ಜೀರೋ ಟ್ರಾಫಿಕ್​​​​ನಲ್ಲಿ ಹೊರಟ ಆ್ಯಂಬುಲೆನ್ಸ್ ರಾತ್ರಿ 1.30ಕ್ಕೆ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಆಗಮಿಸಿದೆ. ನಾರಾಯಣ ಹೃದಯಾಲಯದಲ್ಲಿ ವೈದ್ಯರು ನವಜಾತ ಶಿಶುವಿಗೆ ಓಪನ್ ಹಾರ್ಟ್ ಸರ್ಜರಿ ನಡೆಸಲಿದ್ದಾರೆ. ಇನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ಹಿನ್ನೆಲೆ ಸರಿಯಾದ ಸಮಯಕ್ಕೆ ಸುರಕ್ಷಿತವಾಗಿ ಮಗುವನ್ನು ಕರೆತಂದ ಆ್ಯಂಬುಲೆನ್ಸ್ ಚಾಲಕ ಜಗದೀಶ್​​, ಸ್ಟಾಫ್ ನರ್ಸ್​ಗಳಾದ ಹನುಮಂತ ಹಾಗೂ ವಿನಯ್ ಅವರಿಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮಗುವನ್ನು ಸರಿಯಾದ ಸಮಯಕ್ಕೆ ಕರೆತಂದಿದ್ದು ಹೆಮ್ಮೆ ಅನ್ನಿಸುತ್ತೆ. ನಾವು ಶಿವಮೊಗ್ಗ ಬಿಟ್ಟಾಗ ರಾತ್ರಿ 10 ಗಂಟೆ 8 ನಿಮಿಷ ಆಗಿತ್ತು. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈಗ ಮಗುವನ್ನು ನಾರಾಯಣ ಹೃದಯಾಲಯಕ್ಕೆ ತಲುಪಿಸಿದ್ದೇವೆ. ಜೀರೋ ಟ್ರಾಫಿಕ್​ ವ್ಯವಸ್ಥೆ ಮಾಡಿ ಪೊಲೀಸರು ಸಹಾಯ ಮಾಡಿದರು. ಸರ್ವಿಸ್ ರಸ್ತೆಯಲ್ಲಿ ದೊಡ್ಡವಾಹನಗಳನ್ನೆಲ್ಲಾ ಡೈವರ್ಟ್ ಮಾಡಿದರು ಎಂದು ನಾರಾಯಣ ಹೃದಯಾಲಯ ಬಳಿ ಌಂಬುಲೆನ್ಸ್ ಚಾಲಕ ಜಗದೀಶ್ ಹೇಳಿದ್ದಾರೆ.

ಸರಿಯಾದ ಸಮಯಕ್ಕೆ ಮಗುವನ್ನು ತಲುಪಿಸುವುದು ಸವಾಲಾಗಿತ್ತು. ಪೊಲೀಸರು ಸಹಕಾರದಿಂದ ಮಗುವನ್ನು ಆಸ್ಪತ್ರೆಗೆ ತಲುಪಿಸಿದ್ದೇವೆ. ಮಗು ಗುಣಮುಖವಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಸ್ಟಾಫ್ ನರ್ಸ್​ಗಳಾದ ಹನುಮಂತ ಹಾಗೂ ವಿನಯ್ ಹೇಳಿದ್ದಾರೆ.

ನನಗೆ ಇದ್ದ ಕೆಲಸ ಮಗುವನ್ನು ಸೇಫ್ ಆಗಿ ನೋಡಿಕೊಳ್ಳಬೇಕು. ಸ್ಯಾಚುರೇಷನ್ ಮೇಂಟೆನ್ ಆಗುವ ತರ ನೋಡಿಕೊಳ್ಳಬೇಕು. ರಸ್ತೆ ಮೂಲಕ ಬಂದರೇ ಗೈಡೆನ್ಸ್​ಗೆ ಡಾಕ್ಟರ್ ಕೂಡ ಇರಲ್ಲ. ಕೆಲವೊಮ್ಮೆ ಸ್ಯಾಚುರೇಶನ್ ಲೆವಲ್ ಕಡಿಮೆ ಆಗುತ್ತಿತ್ತು. 78, 79 ವರೆಗೂ ಬರ್ತಿತ್ತು. ಸಾಮಾನ್ಯವಾಗಿ 90 ಇರಬೇಕು. ಇದೀಗ ಮಗು ಸೇಫ್ ಆಗಿ ಆಸ್ಪತ್ರೆಗೆ ಬಂದಿದೆ ಎಂದು ಸ್ಟಾಫ್ ನರ್ಸ್ ವಿನಯ್ ಹೇಳಿದರು.

ಸ್ಯಾಚುರೇಶನ್ ತುಂಬಾನೆ ಕಡಿಮೆ ಇತ್ತು. ಮೊದಲ ದಿನದಿಂದಲೂ‌ ಕಡಿಮೆ ಇತ್ತು. ಅಲ್ಲಿಂದ ಮಗುವನ್ನ ಕೈಯಲ್ಲೇ ಹಿಡಿದುಕೊಂಡು ಬಂದೆ ಎಂದು ಸ್ಟಾಫ್ ನರ್ಸ್ ಹನುಮಂತ ಎಂದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ