ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Vande Bharat Express: ವಂದೇ ಭಾರತ್ ಎಕ್ಸ್​ಪ್ರೆಸ್, ಆನ್​ಲೈನ್​ ಟಿಕೆಟ್ ಬುಕಿಂಗ್ ವಿಧಾನ ಇಲ್ಲಿದೆ ನೋಡಿ

Twitter
Facebook
LinkedIn
WhatsApp
ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಮೊದಲ ಬಲಿ – ಸ್ಥಳದಲ್ಲಿಯೇ ಮಹಿಳೆ ಸಾವು

ದೇಶೀಯವಾಗಿ ನಿರ್ಮಾಣಗೊಂಡಿರುವ ವಂದೇ ಭಾರತ್ ಎಕ್ಸ್​ಪ್ರೆಸ್ (Vande Bharat Express) ರೈಲಿಗೆ 2019ರ ಫೆಬ್ರುವರಿ 15ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದರು. ಅನೇಕ ವಿಶೇಷತೆಗಳನ್ನು ಹೊಂದಿರುವ ಈ ರೈಲು ಭಾರತೀಯ ರೈಲ್ವೆ ಇಲಾಖೆಯ (Indian Railway) ಮಹಾತ್ವಾಕಾಂಕ್ಷಿ ಯೋಜನೆಯ ಫಲ. ಈ ಸೆಮಿ ಹೈಸ್ಪೀಡ್ ರೈಲು ಒಂದು ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ಸಾಮರ್ಥ್ಯ ಹೊಂದಿದೆ. ದೆಹಲಿ-ಕತ್ರಾ, ದೆಹಲಿ-ವಾರಾಣಸಿ, ಗಾಂಧಿನಗರ-ಮುಂಬೈ ಮತ್ತಿತರ ಮಾರ್ಗಗಳಲ್ಲಿ ಚಲಿಸುತ್ತಿದ್ದ ಈ ರೈಲು ಇದೀಗ ಬೆಂಗಳೂರಿಗೂ ಬಂದಿದೆ. ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಚಲಿಸುವ ವಂದೇ ಭಾರತ್ ರೈಲಿಗೆ ಶುಕ್ರವಾರ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

ಭಾರತದಲ್ಲೇ ತಯಾರಿಸಿ ಅಥವಾ ಮೇಕ್​ ಇನ್ ಇಂಡಿಯಾ ಯೋಜನೆಯಡಿ ತಯಾರಾದ ಒಟ್ಟು ಹದಿನಾರು ಕೋಚ್​ಗಳನ್ನು ಹೊಂದಿರುವ ಈ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್​ಆರ್)ದಿಂದ ಚೆನ್ನೈಗೆ ಪ್ರಯಾಣಿಸಿದೆ. ಇಂಟಲಿಜೆಂಟ್ ಬ್ರೇಕಿಂಗ್ ಸಿಸ್ಟಮ್, ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್ ಆಧಾರಿತ ಆಡಿಯೋ ವಿಷುಯಲ್ ಪ್ಯಾಸೆಂಜರ್ ಇನ್ಫಾರ್ಮೇಶನ್, ಉಚಿತ ವೈಫೈ, ತಿರುಗುವ ಆಸನಗಳು, ಸಂಪೂರ್ಣ ಹವಾನಿಯಂತ್ರಿತ, 1,128 ಆಸನದ ಸಾಮರ್ಥ್ಯ ಹಾಗೂ ಬಯೋ ವ್ಯಾಕುಮ್ ಟಾಯ್ಲೆಟ್ ಹೊಂದಿರುವ ಈ ವಿಶೇಷ ರೈಲಿನ ಸೇವೆ ಇನ್ನು ಸದಾ ಕರ್ನಾಟಕದ ಜನತೆಗೆ ಲಭ್ಯವಾಗಲಿದೆ. ಹಾಗಿದ್ದರೆ, ಈ ರೈಲಿಗೆ ಆನ್​ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವುದು ಹೇಗೆ? ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

1. ಐಆರ್​ಸಿಟಿ ಇ-ಟಿಕೆಟ್ ಕಾಯ್ದಿರಿಸುವ ವೆಬ್​ಸೈಟ್​ಗೆ (IRCTC web portal) ಅಥವಾ ಮೊಬೈಲ್​ ಆ್ಯಪ್​ಗೆ (Rail Connect app) ಭೇಟಿ ನೀಡಿ. ಲಾಗಿನ್ ಆಯ್ಕೆಯನ್ನು ಬಳಸಿಕೊಂಡು ಲಾಗಿನ್ ಆಗಿ.

2. ಒಂದು ವೇಳೆ ನೀವು ಈಗಾಗಲೇ ಲಾಗಿನ್ ಕ್ರೆಡೆನ್ಶಿಯಲ್​​ಗಳನ್ನು ಹೊಂದಿಲ್ಲವಾದರೆ, ವೆಬ್​ಸೈಟ್​ನ ಮೇಲ್ಭಾಗದಲ್ಲಿರುವ ರಿಜಿಸ್ಟರ್ ಆಯ್ಕೆಯನ್ನು ಬಳಸಿಕೊಂಡು ನೋಂದಣಿ ಮಾಡಿಕೊಳ್ಳಿ. ಯೂಸರ್​ನೇಮ್, ಪಾಸ್ವರ್ಡ್​ ಕ್ರಿಯೇಷನ್ ಹಾಗೂ ಸೆಕ್ಯೂರಿಟಿ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಲಾಗಿನ್ ಕ್ರೆಡೆನ್ಶಿಯಲ್​​ಗಳನ್ನು ಹೊಂದಬಹುದು.

3. ಲಾಗಿನ್ ಆದ ಬಳಿಕ, ಬುಕ್ ಯುವರ್ ಟಿಕೆಟ್ಸ್ ಸೆಕ್ಷನ್​ಗೆ ಕ್ಲಿಕ್ ಮಾಡಿ ನೀವು ಹೊರಡುವ ರೈಲು ನಿಲ್ದಾಣ ಮತ್ತು ತಲುಪಬೇಕಿರುವ ಗಮ್ಯದ ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳಿ.

4. ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ.

5. ನಂತರ ‘ವಂದೇ ಭಾರತ್ ಎಕ್ಸ್​ಪ್ರೆಸ್’ ರೈಲನ್ನು ಆಯ್ಕೆ ಮಾಡಿ.

6. ಎಸಿ ಕೋಚ್ ಅಥವಾ ಎಕ್ಸಿಕ್ಯೂಟಿವ್ ಕೋಚ್ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ.

7. ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡಿ.

8. ನಂತರ ಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.

9. ಹೊಸ ಪುಟದಲ್ಲಿ ನಿಮಗೆ ಬೇಕಾದ ಪಾವತಿ ವಿಧಾನ (ಯುಪಿಐ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇತ್ಯಾದಿ) ಆಯ್ದುಕೊಳ್ಳಿ.

10. ಪಾವತಿ ಮಾಡಲು ಮುಂದುವರಿಯಿರಿ. ಪಾವತಿ ಆದ ಕೂಡಲೇ ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ಪೂರ್ಣಗೊಂಡು ನಿಮ್ಮ ಆಸನದ ಸಂಖ್ಯೆ ಸೇರಿದಂತೆ ಇತರ ವಿವರಗಳುಳ್ಳ ಟಿಕೆಟ್ ಕಾಣಿಸುತ್ತದೆ. ವೆಬ್​ಸೈಟ್​​ ಮೂಲಕ ಕಾಯ್ದಿರಿಸುತ್ತಿರುವುದಾದರೆ ಡೌನ್​ಲೋಡ್ ಮಾಡಿಕೊಳ್ಳಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ