ಬುಧವಾರ, ಮಾರ್ಚ್ 12, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಉತ್ತರಾಖಂಡ ಸುರಂಗ ಕುಸಿತ ; 41 ಕಾರ್ಮಿಕರನ್ನು ರಕ್ಷಿಸಿದ ಮುನ್ನಾ ಖುರೇಷಿ ಈಗ ರಿಯಲ್  ಹೀರೋ!

Twitter
Facebook
LinkedIn
WhatsApp
ಉತ್ತರಾಖಂಡ ಸುರಂಗ ಕುಸಿತ ; 41 ಕಾರ್ಮಿಕರನ್ನು ರಕ್ಷಿಸಿದ ಮುನ್ನಾ ಖುರೇಷಿ ಈಗ ರಿಯಲ್  ಹೀರೋ!

ಸಿಲ್ಕ್‌ಯಾರಾ (ಉತ್ತರಾಖಂಡ): ಭಾರತದಲ್ಲಿ ನಿಷೇಧಿತವಾಗಿರುವ ರ‍್ಯಾಟ್ ಹೋಲ್ ಮೈನಿಂಗ್ (ಇಲಿ ಬಿಲದ ಗಣಿಗಾರಿಕೆ) ಇದೀಗ 41 ಸುರಂಗ ಕಾರ್ಮಿಕರ ಜೀವ ಉಳಿಸಿದೆ. ಈ ಕಾರ್ಯಾಚರಣೆ ನಡೆಸಿದ ಸಾಹಸಿಗರ ಪೈಕಿ ಮುನ್ನಾ ಖುರೇಶಿ ಇದೀಗ ಹೀರೋ ಆಗಿ ಹೊರಹೊಮ್ಮಿದ್ದಾರೆ. ಏಕೆಂದರೆ ಮುನ್ನಾ ಖುರೇಶಿ ಅವರೇ ಮೊಟ್ಟ ಮೊದಲ ಬಾರಿಗೆ ರ‍್ಯಾಟ್ ಹೋಲ್ ಮೈನಿಂಗ್ ಮೂಲಕ ಉತ್ತರಾಖಂಡದ ಸಿಲ್ಕ್‌ಯಾರಾ ಸುರಂಗದ ಒಳಗೆ ಸಿಲುಕಿದ್ದ ಕಾರ್ಮಿಕರನ್ನು ತಲುಪಿದ್ದರು.

ಹಾಗೆ ನೋಡಿದ್ರೆ ಇದು ಬರೋಬ್ಬರಿ 17 ದಿನದ ಕಾರ್ಯಾಚರಣೆ. ಅತ್ಯಾಧುನಿಕ ವಿದೇಶಿ ಯಂತ್ರಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದ್ದರೂ ಕೂಡಾ, ಕೊನೆಗೆ ಕಾರ್ಮಿಕರನ್ನು ಬದುಕಿಸಿದ್ದು ದೇಶೀಯ ತಂತ್ರಜ್ಞಾನವೇ! 41 ಕಾರ್ಮಿಕರ ಜೀವ ಉಳಿಸಿದ ರ‍್ಯಾಟ್ ಹೋಲ್ ಮೈನಿಂಗ್ ಪರಿಣಿತರು, ಇದೀಗ ಪ್ರಧಾನಿ ಮೋದಿ ಆದಿಯಾಗಿ ಇಡೀ ದೇಶದ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಉತ್ತರಾಖಂಡದಲ್ಲಿ ಸುರಂಗ ಕುಸಿತ ಸಂಭವಿಸಿ ಕಾರ್ಮಿಕರು ಸಿಲುಕಿದ್ದ ವೇಳೆ ದೇಶ, ವಿದೇಶಗಳ ನೂರಾರು ತಂತ್ರಜ್ಞರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವು ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವೇ ಘಟನಾ ಸ್ಥಳದಲ್ಲಿ ಸೇರಿತ್ತು. ಇಡೀ ದೇಶವೇ 41 ಕಾರ್ಮಿಕರ ಸುರಕ್ಷಿತ ವಾಪಸಾತಿಗಾಗಿ ಪ್ರಾರ್ಥಿಸಿತ್ತು. ಅಂತಿಮವಾಗಿ ಈ ಕಾರ್ಯಾಚರಣೆಯಲ್ಲಿ ರ‍್ಯಾಟ್ ಹೋಲ್ ಮೈನಿಂಗ್ ಪರಿಣಿತರು ಯಶಸ್ಸು ಸಾಧಿಸಿದ್ದರು. ಈ ಪೈಕಿ ಮೊಟ್ಟ ಮೊದಲ ಬಾರಿಗೆ ಕಾರ್ಮಿಕರ ಬಳಿ ತಲುಪಲು ಯಶಸ್ವಿಯಾದ ಮುನ್ನಾ ಖುರೇಶಿ ಇದೀಗ ಇಡೀ ಕಾರ್ಯಾಚರಣೆಯ ಕೇಂದ್ರ ಬಿಂದು.

ಯಾರಿದು ಮುನ್ನಾ ಖುರೇಶಿ?

29 ವರ್ಷ ವಯಸ್ಸಿನ ಮುನ್ನಾ ಖುರೇಶಿ, ದಿಲ್ಲಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೊಂದು ಎಂಜಿನಿಯರಿಂಗ್ ಕಂಪನಿಯಾಗಿದ್ದು, ನೀರು ಹಾಗೂ ಕೊಳಚೆ ನೀರಿನ ಪೈಪ್‌ಗಳ ಸುಗಮ ಕಾರ್ಯ ನಿರ್ವಹಣೆಯ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತದೆ. ಈ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುನ್ನಾ ಖುರೇಶಿ ಸೇರಿದಂತೆ 12ಕ್ಕೂ ಹೆಚ್ಚು ಮಂದಿಯನ್ನು ಉತ್ತರಾಖಂಡಕ್ಕೆ ಕರೆಸಿಕೊಳ್ಳಲಾಗಿತ್ತು. 12 ಮೀಟರ್‌ ಸುರಂಗ ಕೊರೆಯೋದು ಇವರ ಗುರಿಯಾಗಿತ್ತು.

ಹಾಗೆ ನೋಡಿದರೆ ರ‍್ಯಾಟ್ ಹೋಲ್ ಮೈನಿಂಗ್ ಒಂದೇ ತಜ್ಞರ ಮುಂದಿದ್ದ ಏಕೈಕ ಆಯ್ಕೆಯಾಗಿತ್ತು. ಏಕೆಂದರೆ ಅಮೆರಿಕ ನಿರ್ಮಿತ ಸುರಂಗ ಕೊರೆಯುವ ಯಂತ್ರ ವಿಫಲವಾಗಿತ್ತು. ಹೀಗಾಗಿ, ರ‍್ಯಾಟ್ ಹೋಲ್ ಮೈನಿಂಗ್ ಮಾಡುವವರ ಮೊರೆ ಹೋಗಲಾಗಿತ್ತು.

ಏನಿದು ರ‍್ಯಾಟ್ ಹೋಲ್ ಮೈನಿಂಗ್?

ಭೂಮಿಯ ಒಳಗೆ ಇರುವ ಕಲ್ಲಿದ್ದಲನ್ನು ತೆಗೆಯಲು ರ‍್ಯಾಟ್ ಹೋಲ್ ಮೈನಿಂಗ್ ಮಾಡಲಾಗುತ್ತದೆ. ಇದು ನಿಜಕ್ಕೂ ಅಪಾಯಕಾರಿ ಪ್ರಕ್ರಿಯೆ. ಒಬ್ಬನೇ ವ್ಯಕ್ತಿ ತೂರುವಷ್ಟು ಅಗಲದ ಸುರಂಗವನ್ನು ಲಂಬ ಕೋನದಲ್ಲಿ ಕೊರೆದು ಅದರೊಳಗೆ ಕಾರ್ಮಿಕರು ತೂರಿ ಕಲ್ಲಿದ್ದಲನ್ನು ತೆಗೆಯುತ್ತಾರೆ. ಈ ವೇಳೆ ಆಮ್ಲಜನಕ ಕೊರತೆಯಿಂದ ಕಾರ್ಮಿಕರು ಸಾಯಬಹುದು. ಇನ್ನು ಈ ರೀತಿಯ ಸುರಂಗಗಳ ಒಳಗೆ ನೀರು ತುಂಬಿ ಭೂಮಿ ಸಡಿಲ ಆಗುವ ಭೀತಿಯೂ ಇದೆ. ಇದೇ ಕಾರಣಕ್ಕೆ 2014ರಲ್ಲೇ ಅವೈಜ್ಞಾನಿಕವಾದ ಈ ಮಾದರಿಯ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ.

ರ‍್ಯಾಟ್ ಹೋಲ್ ಮೈನಿಂಗ್ ಪರಿಣಿತನಾದ ಮುನ್ನಾ ಖುರೇಶಿ, ಕಳೆದ ಮಂಗಳವಾರ ನವೆಂಬರ್ 28 ರಂದು ಉತ್ತರಾಖಂಡದ ಕಾರ್ಮಿಕರನ್ನು ರಕ್ಷಿಸಲು ರ‍್ಯಾಟ್ ಹೋಲ್ ಮೈನಿಂಗ್ ನಡೆಸಿದ್ದರು. ಸುರಂಗ ಕೊರೆದು ಕಲ್ಲುಗಳನ್ನು ತೆರವು ಮಾಡಿ ಸುರಂಗದ ಒಳಗೆ ಸಿಲುಕಿದ್ದ ಎಲ್ಲಾ 41 ಕಾರ್ಮಿಕರನ್ನು ರಕ್ಷಿಸಿದರು. ಸುರಂಗದ ಒಳಗೆ ಇಳಿದ ಮುನ್ನಾ ಖುರೇಶಿ ಕಾರ್ಮಿಕರನ್ನು ತಲುಪಿದ ಕೂಡಲೇ ಎಲ್ಲರೂ ಅವರನ್ನು ತಬ್ಬಿಕೊಂಡು ಸಂಭ್ರಮಿಸಿದರು ಎಂದು ಮುನ್ನಾ ಖುರೇಶಿ ವಿವರಿಸುತ್ತಾರೆ.

ಮುನ್ನಾ ಖುರೇಶಿ ಬಳಿಕ ಇನ್ನಿತರ ರ‍್ಯಾಟ್ ಹೋಲ್ ಮೈನರ್‌ಗಳಾದ ಮೋನು ಕುಮಾರ್, ವಕೀಲ್ ಖಾನ್, ಫಿರೋಜ್, ಪರ್ಸಾದಿ ಲೋಧಿ ಹಾಗೂ ವಿಪಿನ್ ರಾಜೌಟ್‌ ಅವರೂ ಸುರಂಗದ ಒಳಗೆ ಇಳಿದರು. ಎಲ್ಲರೂ ಸೇರಿ ಸುರಂಗದ ಒಳಗೆ ಸಿಲುಕಿದ್ದ ಕಾರ್ಮಿಕರನ್ನು ಕೆಲವೇ ಹೊತ್ತಿನಲ್ಲಿ ಸುರಂಗದಿಂದ ಹೊರಗೆ ತಂದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist