ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉರ್ಫಿ ಜಾವೇದ್ ತನ್ನ ಬಟ್ಟೆಗಾಗಿ ಅರೆಸ್ಟ್? ಪೊಲೀಸ್ ಅಧಿಕಾರಿಗಳು ನಟಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವ ವಿಡಿಯೋ ವೈರಲ್!

Twitter
Facebook
LinkedIn
WhatsApp
ಉರ್ಫಿ ಜಾವೇದ್ ತನ್ನ ಬಟ್ಟೆಗಾಗಿ ಅರೆಸ್ಟ್? ಪೊಲೀಸ್ ಅಧಿಕಾರಿಗಳು ನಟಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವ ವಿಡಿಯೋ ವೈರಲ್!

ಮುಂಬೈ: ಅರೆಬರೆ ಬಟ್ಟೆ ಮತ್ತು ವಿಚಿತ್ರ ಫ್ಯಾಶನ್​ನಿಂದಲೇ ಸೋಶಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ನಟಿ ಹಾಗೂ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಉರ್ಫಿ ಜಾವೇದ್​ ಬಂಧನವಾಗಿದೆ? ಶುಕ್ರವಾರ ಬೆಳಗ್ಗೆ ಮುಂಬೈ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋವನ್ನು ವೈರಲ್​​​ ಭಯಾನಿ ಹೆಸರಿನ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಲಾಗಿದೆ. ಕಾಫಿ ಶಾಪ್​ನಿಂದ ಹೊರಗಡೆ ಬರುವ ಉರ್ಫಿಯನ್ನು ಪೊಲೀಸರು ಎಂದು ಹೇಳಲಾದ ಗುಂಪೊಂದು ತಮ್ಮ ವಶಕ್ಕೆ ಪಡೆಯುತ್ತದೆ. ಗುಂಪಿನಲ್ಲಿದ್ದ ಮಹಿಳಾ ಪೊಲೀಸ್​ ಸಿಬ್ಬಂದಿ ಒಬ್ಬರು ತಮ್ಮೊಂದಿಗೆ ಠಾಣೆಗೆ ಬರುವಂತೆ ಉರ್ಫಿಗೆ ಹೇಳುತ್ತಾರೆ. ನನ್ನನ್ನು ನಿಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಕಾರಣವೇನು ಎಂದು ಉರ್ಫಿ ಮರು ಪ್ರಶ್ನೆ ಮಾಡಿದಾಗ, ಇಷ್ಟು ಚಿಕ್ಕ ಬಟ್ಟೆ ಹಾಕಿಕೊಂಡು ಯಾರು ಓಡಾಡುತ್ತಾರೆ? ಎಂದು ಮಹಿಳಾ ಪೊಲೀಸ್​ ಪ್ರತಿಕ್ರಿಯಿಸುತ್ತಾರೆ.

ಇನ್ನು ಈ ವಿಡಿಯೋದ ಖಚಿತತೆ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ನೆಟ್ಟಿಗರು ಸಹ ವಿಡಿಯೋ ನೋಡಿ ಗೊಂದಲಕ್ಕೀಡಾಗಿದ್ದಾರೆ. ಉರ್ಫಿಯನ್ನು ನಿಜವಾಗಿಗೂ ಬಂಧನ ಮಾಡಿದ್ದಾರಾ? ಅಥವಾ ಇದೊಂದು ಡ್ರಾಮಾನಾ? ಎಂದು ಪ್ರಶ್ನೆ ಮಾಡಿದ್ದಾರೆ. ಬಹುಶಃ ಇದು ಕೂಡ ತಮಾಷೆ ಇರಬಹುದೆಂದು ಹೇಳಿದ್ದಾರೆ.

ಇದೆಲ್ಲದರ ನಡುವೆ ಇತ್ತೀಚೆಗೆ ಉರ್ಫಿ ಅವರು ತನ್ನ ಫ್ಯಾಷನ್ ಆಯ್ಕೆಗಳಿಂದಲೇ ತೊಂದರೆಗೆ ಸಿಲುಕಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಉರ್ಫಿ ಅವರ ಬೋಲ್ಡ್​ ಉಡುಗೆಗಳ ವಿರುದ್ಧ ಕಳೆದ ತಿಂಗಳು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ETimes ವರದಿ ಮಾಡಿದೆ.

ಅಂದಹಾಗೆ ಉರ್ಫಿ ಜಾವೇದ್ ಅವರು ತಮ್ಮ ಫ್ಯಾಷನ್ ಅಥವಾ ಉಡುಪಿನ ಆಯ್ಕೆಗಳ ಕಾರಣದಿಂದಾಗಿ ಆಗಾಗ ಟ್ರೋಲ್ ಮತ್ತು ನಿಂದನೆಗೆ ಗುರಿಯಾಗುತ್ತಿರುತ್ತಾರೆ. ಆದರೂ ಉರ್ಫಿ, ಯಾರಿಗೂ ಕ್ಯಾರೆ ಎನ್ನುವುದಿಲ್ಲ. ಇದಕ್ಕೂ ಮೊದಲು ಸಂದರ್ಶನವೊಂದರಲ್ಲಿ ಉರ್ಫಿ, ತನ್ನ ವಿರುದ್ಧ ದೂರು ಸಲ್ಲಿಸುವವರ ವಿರುದ್ಧ ವಾಗ್ದಾಳಿ ನಡೆಸಿದ್ದರು ಮತ್ತು ತನಗೆ ಅಸುರಕ್ಷಿತ ಭಾವನೆ ಕಾಡುತ್ತಿದೆ ಎಂದಿದ್ದರು. ಇದೇ ವೇಳೆ ತನ್ನ ಬಟ್ಟೆಗಳ ಆಯ್ಕೆಯನ್ನು ಸಮರ್ಥಿಸಿಕೊಡಿದ್ದ ಉರ್ಫಿ, ಎಲ್ಲರ ಗಮನ ಸೆಳೆಯಲು ಈ ರೀತಿ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಉದ್ಯಮ (ಮನರಂಜನೆ)ವೇ ಜನಪ್ರಿಯತೆ ಆಧಾರದ ಮೇಲೆ ನಿಂತಿದೆ. ಹೀಗಾಗಿ ಎಲ್ಲರ ಗಮನ ಸೆಳೆಯುವುದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ ಉರ್ಫಿ, ಈ ರೀತಿಯ ಬಟ್ಟೆಗಳನ್ನು ನಾನೊಬ್ಬಳೆ ಧರಿಸುತ್ತಿಲ್ಲ. ಜಾಲತಾಣದಲ್ಲಿ ಬಿಕಿನಿ ಚಿತ್ರಗಳನ್ನು ಹಂಚಿಕೊಳ್ಳುವ ಹಲವಾರು ಹುಡುಗಿಯರಿದ್ದಾರೆ ಎಂದು ಸಮರ್ಥಿಸಿಕೊಂಡರು.

ಉರ್ಫಿ ಬಗ್ಗೆ ಹೇಳುವುದಾದರೆ, ಬಿಗ್​ ಬಾಸ್​ ಒಟಿಟಿ ಶೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಿರುವ ಉರ್ಫಿ ಜಾವೇದ್, ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಎತ್ತಿದ ಕೈ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಅವರ ಹಾಟ್​ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವಿಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ