ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪೋಟೊ ಶೂಟ್ ವಿಚಾರಕ್ಕೆ ಗಲಾಟೆ ; ಯುವಕನ ಬರ್ಬರ ಕೊಲೆ...!

Twitter
Facebook
LinkedIn
WhatsApp
ಪೋಟೊ ಶೂಟ್ ವಿಚಾರಕ್ಕೆ ಗಲಾಟೆ ; ಯುವಕನ ಬರ್ಬರ ಕೊಲೆ...!

ದೊಡ್ಡಬಳ್ಳಾಪುರ: ಪೋಟೊ ಶೂಟ್ ವಿಚಾರಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದ ಕೂಗೇನಹಳ್ಳಿ ಬಳಿಯ ಡಾರ್ಕ್ ನೈಟ್ ಡಾಬಾದಲ್ಲಿ ನಡೆದಿದೆ. ಯುವಕರ ನಡುವೆ ಪೋಟೊ ತೆಗೆಯುವ ವಿಚಾರದಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಸೂರ್ಯ (22) ಮೃತ ಯುವಕ. ದೊಡ್ಡಬಳ್ಳಾಪುರದ ಕೂಗೇನಹಳ್ಳಿ ಬಳಿಯ ಡಾರ್ಕ್ ನೈಟ್ ಡಾಬಾದಲ್ಲಿ ಸ್ನೇಹಿತರ ಜತೆ ಸೂರ್ಯ ಫೋಟೋ ತೆಗೆಯುತ್ತಿದ್ದ. ಈ ವೇಳೆ ನಮ್ಮದೂ ಫೋಟೊ ತೆಗೆಯಿರಿ ಎಂದು ಕೆಲವರು ಗಲಭೆ ಮಾಡಿದ್ದಾರೆ. ಆಗ ಒಂದು ಫೊಟೊ ತೆಗೆದರೂ ಮತ್ತೆ ಗಲಾಟೆ ಮುಂದುವರಿದಿದೆ. ಮಾತಿಗೆ ಮಾತು ಬೆಳೆದು ಸೂರ್ಯ ಎದೆ ಭಾಗಕ್ಕೆ ಯುವಕನೊಬ್ಬ ಚಾಕು ಇರಿದಿದ್ದರಿಂದ, ತೀವ್ರ ರಕ್ತಸ್ರಾವವಾಗಿತ್ತು.

ಗಾಯಾಳು ಯುವಕನನ್ನು ದೊಡ್ಡಬಳ್ಳಾಪುರದ‌ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ, ಅತಿಯಾದ ರಕ್ತ ಸ್ರಾವದಿಂದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಂಗಳೂರು: ದಾರಿ ಬಿಡಿ ಎಂದು ಹಾರ್ನ್​ ಮಾಡಿದಕ್ಕೆ ವಿದ್ಯಾರ್ಥಿಗೆ ಥಳಿತ; ಆರೋಪಿಗಳು ಅರೆಸ್ಟ್​

ಬೆಂಗಳೂರು ನ.13: ದಾರಿ ಬಿಡಿ ಎಂದು ಹಾರ್ನ್​​​ ಮಾಡಿದ್ದಕ್ಕೆ ದುಷ್ಕರ್ಮಿಗಳು ಯುವಕನಿಗೆ ಥಳಿಸಿರುವ (Thrash) ಘಟನೆ ಭೂಪಸಂದ್ರ ರಸ್ತೆಯಲ್ಲಿ ನಡೆದಿದೆ. ಸಂಜಯನಗರದ ಎಂಎಲ್‌ಎ ಲೇಔಟ್‌ ನಿವಾಸಿ ಪ್ರಜ್ವಲ್ ಎಸ್‌ ಹಲ್ಲೆಗೊಳಗಾದ ಯುವಕ. ಭೂಪಸಂದ್ರ ನಿವಾಸಿಗಳಾದ ಅಸಾದುಲ್ಲಾ ಖಾನ್ ಮತ್ತು ಮಸೈಬುಲ್ಲಾ ಖಾನ್ ಹಲ್ಲೆ ಮಾಡಿದ ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.

ಸಂಜಯನಗರದ ಎಂಎಲ್‌ಎ ಲೇಔಟ್‌ ಪ್ರಜ್ವಲ್​ ಎಸ್​ (19) ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಾರೆ. ಪ್ರಜ್ವಲ್​ ಶುಕ್ರವಾರ ಸೆಮಿಸ್ಟರ್​ ಪರೀಕ್ಷೆ ಬರೆಯಲು ಬೆಳಿಗ್ಗೆ 11.30 ಸುಮಾರಿಗೆ ಹುಂಡೈ ಐ10 ಕಾರಿನಲ್ಲಿ ಕಾಲೇಜಿಗೆ ತೆರಳುತ್ತಿದ್ದರು. ಕಲ್ಪನಾ ಚಾವ್ಲಾ ರಸ್ತೆಗೆ ಹೋಗುವ ಭೂಪಸಂದ್ರ ಮುಖ್ಯ ರಸ್ತೆಯಲ್ಲಿ ಬೈಕ್​ ಅಡ್ಡ ನಿಲ್ಲಿಸಿ ಅಸಾದುಲ್ಲಾ ಖಾನ್ ಹಾಗೂ ಮಸೈಬುಲ್ಲಾ ಸಿಗರೇಟ್​ ಸೇದುತ್ತ ನಿಂತಿದ್ದರು.

ರಸ್ತೆಯ ಎಡಭಾಗದಲ್ಲಿ ಬಿಎಂಟಿಸಿ ಬಸ್‌ಗಳು ಮತ್ತು ಇತರ ಭಾರೀ ವಾಹನಗಳು ಚಲಿಸುತ್ತಿದ್ದವು. ಆದ್ದರಿಂದ ಪ್ರಜ್ವಲ್​ ಬಲಗಡೆಯಿಂದ ತಿರುವು ತೆಗೆದುಕೊಳ್ಳಲು ಯತ್ನಿಸಿದರು. ಆದರೆ ಈ ಇಬ್ಬರು ರಸ್ತೆಯನ್ನು ಬ್ಲಾಕ್​ ಮಾಡಿದ್ದನು ಗಮನಿಸಿದ ಪ್ರಜ್ವಲ್​ ಹಾರ್ನ್ ಮಾಡಿದರು. ಆದರೆ ಆರೋಪಿಗಳು “ಕೆಲವೇ ಕ್ಷಣಗಳ ಹಿಂದೆ ಸಿಗರೇಟನ್ನು ಹಚ್ಚಿಕೊಂಡಿದ್ದೇವೆ, ಅದು ಮುಗಿಯುವವರೆಗೆ ನಿಲ್ಲು” ಎಂದಿದ್ದಾರೆ. ಆದರೆ ಪ್ರಜ್ವಲ್​ ಮತ್ತೆ ಹಾರ್ನ್ ಮಾಡಿದ್ದು, ದಾರಿ ಬಿಡುವಂತೆ ಹೇಳಿದರು.

ಆಗ ಇಬ್ಬರು ದುಷ್ಕರ್ಮಿಗಳು ಪ್ರಜ್ವಲ್ ಕಡೆಗೆ ಬಂದು, ಕಾರಿನ ಗಾಜು ಒಡೆದಿದ್ದಾರೆ. ಪ್ರಜ್ವಲ್ ಮುಖಕ್ಕೆ ಗುದ್ದಿ ಕಾರಿನಿಂದ ಹೊರಗೆ ಎಳೆದಿದ್ದಾರೆ. ಬಳಿಕ ಪ್ರಜ್ವಲ್ ಅವರನ್ನು ರಸ್ತೆಗೆ ತಳ್ಳಿ ಪಕ್ಕೆಲುಬುಗಳಿಗೆ ಒದ್ದಿದ್ದಾರೆ. ನಂತರ ನಾವು ಸಿಗರೇಟ್​ ಸೇದಿ ದಾರಿ ಬಿಡುವವರೆಗು ಕಾಯಬೇಕು ಎಂದು ಆರೋಪಿಗಳು ಪ್ರಜ್ವಲ್​ಗೆ ಹೇಳಿದ್ದಾರೆ. ಪ್ರಜ್ವಲ್ ಅವರ ಮೂಗಿಗೆ ಗಾಯಗಳಾಗಿದ್ದು, ಮೂರು ಹಲ್ಲುಗಳು ಸಡಿಲಗೊಂಡಿವೆ. ಇಬ್ಬರೂ ಕಾರಿನ ಇತರ ಗ್ಲಾಸ್‌ಗಳಿಗೂ ಹಾನಿ ಮಾಡಿದ್ದಾರೆ.

ಸ್ಥಳೀಯರು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೊಯ್ಸಳ ವಾಹನವು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳು ಮತ್ತು ಅವರ ಆರು ಜನ ಸ್ನೇಹಿತರು ಸ್ಥಳದಿಂದ ಪರಾರಿಯಾದರು. ಕೊನೆಗೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರದಂದು ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಸೈದುಲು ಅದಾವತ್ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ