ವಾಟ್ಸಪ್, ಫೇಸ್ಬುಕ್ ನಲ್ಲಿ ಅನುಮತಿ ಇಲ್ಲದ ಪ್ರಚಾರ. ಅಡ್ಮಿನ್ ಗಳ ಮೇಲೆ ಕಾನೂನು ಕ್ರಮ, ಅಭ್ಯರ್ಥಿಗಳಿಗೆ ತೊಂದರೆಯಾಗುವ ನೀತಿ ಸಂಹಿತೆ ಈ ಬಾರಿ ಜಾರಿ!
Twitter
Facebook
LinkedIn
WhatsApp
ನವದೆಹಲಿ; ಲೋಕಸಭಾ ಚುನಾವಣೆಯ ಕಾವು ಈಗ ಏರುತಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಈ ನಡುವೆ ಈ ಬಾರಿ ಸಾಮಾಜಿಕ ಜಾಲತಾಣದ ಮೇಲೆ ಬಹುದೊಡ್ಡ ನಿಗಾ ವನ್ನು ಚುನಾವಣೆ ಆಯೋಗ ಇರಿಸಿದೆ.
ಚುನಾವಣಾ ಆಯೋಗದ ಅನುಮತಿ ಇಲ್ಲದ ಪ್ರಚಾರಕ್ಕೆ ಅಡ್ಮಿನ್ ಗಳನ್ನು ಹೊಣೆ ಮಾಡಿ ಕಾನೂನು ಕ್ರಮ ಕೈಗೊಳ್ಳುವ ಅಂಶ ನೀತಿ ಸ೦ಹಿತೆಯಲ್ಲಿದೆ.
ಅಲ್ಲದೆ ಅಭ್ಯರ್ಥಿಗಳ ಫೋಟೋವನ್ನು ಅನುಮತಿ ಇಲ್ಲದೆ ಬಳಸಿದರೆ ಅಭ್ಯರ್ಥಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದು ಅಲ್ಲದೆ ಇದು ಅನರ್ಹತೆಗೆ ದಾರಿಯಾಗಬಹುದು ಎಂದು ನೀತಿ ಸಂಹಿತೆ ಸ್ಪಷ್ಟವಾಗಿ ಹೇಳುತ್ತಿದೆ.
ಈ ಕಾರಣದಿಂದ ಪ್ರತಿಯೊಂದು ವಾಟ್ಸಾಪ್ ಹಾಗೂ ಫೇಸ್ಬುಕ್ ಗಳನ್ನು ಚುನಾವಣಾ ಆಯೋಗ ತನ್ನ ಪ್ರತ್ಯೇಕ ಸೆಲ್ಲಿನ ಮೂಲಕ ನಿಗಾದಲ್ಲಿ ಇರಿಸಿದೆ ಎಂದು ತಿಳಿದುಬಂದಿದೆ.