ಉಲ್ಟಾ ಧ್ವಜಾರೋಹಣ ಪ್ರಕರಣ ; ಪ್ರಭಾರಿ ಮುಖ್ಯ ಶಿಕ್ಷಕ ಅಮಾನತ್ತು
ಬೆಳಗಾವಿ : ಸ್ವಾಂತ್ರ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಕರ್ತವ್ಯ ನಿರ್ಲಕ್ಷಿಸಿ ಬೆಳಗಾವಿ ತಾಲೂಕಿನ ವಿರಪನಕೊಪ್ಪ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಲ್ಟಾ ಧ್ವಜಾರೋಹಣ ನೆರವೇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆ ಮುಖ್ಯ ಶಿಕ್ಷಕರನ್ನು ಅಮಾನತ್ತು ಮಾಡಲಾಗಿದೆ.
ಶಾಲಾ ಉಸ್ತುವಾರಿ ಸಮಿತಿ ಹಾಗೂ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ರಾಷ್ಟ್ರೀಯ ಹಬ್ಬದ ಮಹ್ವತ ಕಾಪಾಡುವಲ್ಲಿ ವಿಲವಾಹಿ ಧ್ವಜಾರೋಹಣದಲ್ಲಿ ಕರ್ತವ್ಯಲೋಪ ಎಸಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಪ್ರಭಾರಿ ಮುಖ್ಯ ಶಿಕ್ಷಕ ಪಿ.ಕೆ.ಹೊಸೂರ ಅವರನ್ನು ಆಂತರಿಕ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ದಾಸಪ್ಪನವರ ಆದೇಶಿಸಿದ್ದಾರೆ.
ಕೊಲ್ಹಾರ ಸಂಪನ್ಮೂಲದ ಕೇಂದ್ರ
ಕೊಲ್ಹಾರ: ಲಕ್ಷಾಂತರ ಸೇನಾನಿಗಳು ಮಾಡಿದ ಅವಿರತ ಹೋರಾಟ, ತ್ಯಾಗ ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರೃ ದೊರಕಿದೆ. ಹೋರಾಟಗಾರರ ತ್ಯಾಗವನ್ನು ಇಂದಿನ ಯುವ ಪೀಳಿಗೆ ಅರ್ಥ ಮಾಡಿಕೊಂಡು ದೇಶವನ್ನು ಸಮೃದ್ಧಿಯಡೆಗೆ ಒಯ್ಯಲು ಶ್ರಮಿಸಬೇಕು ಎಂದು ತಹಸೀಲ್ದಾರ್ ಎಸ್.ಎಸ್. ನಾಯಕಲಮಠ ಹೇಳಿದರು.
ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಲಕ್ಷಾಂತರ ಸ್ವಾತಂತ್ರೃ ಸೇನಾನಿಗಳ ತ್ಯಾಗ ಬಲಿದಾನವನ್ನು ಸದಾಕಾಲ ನೆನೆಯುವುದು ಅವಶ್ಯಕ ಎಂದರು.
ಕೆನೆ ಮೊಸರಿಗೆ ಪ್ರಸಿದ್ಧವಾಗಿರುವ ಕೊಲ್ಹಾರ ಪಟ್ಟಣ ಫಲವತ್ತಾದ ಭೂಮಿಗೂ ಸುಪ್ರಸಿದ್ಧ.
ಕರ್ನಾಟಕದ ಅತ್ಯಂತ ಉದ್ದ ಸೇತುವೆ, ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಮುಳವಾಡ ಕೈಗಾರಿಕಾ ಪ್ರದೇಶ ಹೀಗೆ ಸಂಪನ್ಮೂಲದ ಕೇಂದ್ರವಾಗಿರುವ ಕೊಲ್ಹಾರ ತಾಲೂಕಾ ಕೇಂದ್ರ ನಮ್ಮ ಹೆಮ್ಮೆಯ ಪ್ರತೀಕ ಎಂದರು.
ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸನ್ಮತಿ ತುಪ್ಪದ, ರೇಖಾ ಮನಗೂಳಿ, ದೀಪಾ ಹಳ್ಳಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವೇದಾ ಪತ್ತಾರ, ಲಕ್ಷ್ಮೀ ಬರಗಿ, ಪೂಜಾ ನರಸಲಗಿ, ಸಚಿನ ಸಿನ್ನೂರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ತಾಪಂ ಇಒ ಎಫ್.ಎಚ್. ಪಠಾಣ, ಪಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ, ಕೃಷಿ ಅಧಿಕಾರಿ ಫಾತೀಮಾಬಾನು ಸುತಾರ, ಪಪಂ ಸದಸ್ಯರು ಹಾಗೂ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.