ಉಳ್ಳಾಲ : ಕಬಡ್ಡಿ ಪಂದ್ಯಾಟದ ವೇಳೆ ಕುಸಿದು ಬಿದ್ದ ಪ್ರೇಕ್ಷಕರ ಗ್ಯಾಲರಿ..!
ಮಂಗಳೂರು ಡಿಸೆಂಬರ್ 25: ಮಂಗಳೂರಿನಲ್ಲಿ ಕಬಡ್ಡಿ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿದು ಬಿದ್ದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಫ್ರೆಂಡ್ಸ್ ಉಳ್ಳಾಲ ಆಯೋಜಿಸಿರುವ ಕಬ್ಬಡಿ ಪಂದ್ಯಾಟದ ಸೆಮಿಫೈನಲ್ ಪಂದ್ಯದ ವೇಳೆ ನೂರಾರು ಪ್ರೇಕ್ಷಕರು ಆಗಮಿಸಿದ್ದರು. ಈ ವೇಳೆ ಅವರು ಕುಳಿತಿದ್ದ ಗ್ಯಾಲರಿ ಕುಸಿದು ಬಿದ್ದಿದೆ.
ಅದೃಷ್ಟವಶಾತ್ ಯಾವುದೇ ರೀತಿ ಅಪಾಯ ಸಂಭವಿಸಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.
4ನೇ ಮಹಡಿಯ ಕೋಣೆಯೊಳಗೆ ಬಾಕಿಯಾದ ಮಗು ರಕ್ಷಣೆ ಮಾಡಿದ ಅಗ್ನಿಶಾಮಕದಳ
ಮಂಗಳೂರು, ಡಿಸೆಂಬರ್ 26: ನಗರದ ಕೊಡಿಯಾಲ್ ಗುತ್ತಿನ ಫ್ಲ್ಯಾಟ್‌ವೊಂದರ ಕೋಣೆಯೊಳಗೆ ಬಾಕಿಯಾದ ಮಗುವನ್ನು ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ರಕ್ಷಣೆ ಮಾಡಿದ್ದಾರೆ.
ನಾಲ್ಕನೇ ಮಹಡಿಯ ಫ್ಲ್ಯಾಟ್‌ನ ಕೋಣೆಯೊಳಗೆ ಇದ್ದ ಸುಮಾರು 3 ವರ್ಷದ ಮಗು ಆಟವಾಡುತ್ತಾ ಬಾಗಿಲಿನ ಚಿಲಕವನ್ನು ಹಾಕಿದೆ. ಅದನ್ನು ತೆಗೆಯಲು ಸಾಧ್ಯವಾಗಲಿಲ್ಲ. ಮಗು ಕೋಣೆಯೊಳಗೆ ಬಾಕಿಯಾಗಿ ಮನೆಯವರು ಗಾಬರಿಯಾಗಿದ್ದರು.
ಬಳಿಕ ಪಾಂಡೇಶ್ವರ ಠಾಣೆಯ ಅಗ್ನಿಶಾಮಕ ಅಧಿಕಾರಿ ರಾಜಾ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದರು. ಹಗ್ಗದ ಸಹಾಯದಿಂದ 4ನೇ ಮಹಡಿಯ ಮೇಲಿನಿಂದ ಮಗುವಿದ್ದ ಕೋಣೆಯ ಒಳಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ.