ಉಳ್ಳಾಲ :ಸಿಕ್ಸರ್ ಹೊಡೆದ ಪೆಟ್ಟಿಗೆ ಕ್ರಿಕೆಟ್ ಆಟಗಾರರನ್ನು ಅಟ್ಟಾಡಿಸಿಕೊಂಡು ಬಂದ ಜೇನುನೊಣಗಳ ಹಿಂಡು..!
Twitter
Facebook
LinkedIn
WhatsApp
ಕ್ರಿಕೆಟ್ ಆಟಗಾರರ ಮೇಲೆ ಜೇನುನೊಣಗಳ ಹಿಂಡು ದಾಳಿ ಮಾಡಿದೆ. ದಕ್ಷಿಣ ಕನ್ನಡ ಜಲ್ಲೆಯ ಉಳ್ಳಾಲ ತಾಲೂಕಿನ ಒಂಬತ್ತುಕೆರೆ ಮೃದಾನದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಆಯೋಜನೆ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಲವು ತಂಡಗಳು ಭಾಗವಹಿಸಿದ್ದವು.
ಪಂದ್ಯಾಟದ ನಡುವೆ ಆಟಗಾರನೊಬ್ಬ ಸಿಕ್ಸರ್ ಹೊಡೆದುಬಿಟ್ಟ. ಬಾಲು ಸೀದಾ ಹೋಗಿ ಮೈದಾನದಿಂದ ಹೊರಗೆ ತೆಂಗಿನ ಮರಕ್ಕೆ ಬಿತ್ತು. ಆದರೆ ಆ ತಂಗಿನ ಮರದಲ್ಲಿ ಜೇನುಗೂಡು ಕಟ್ಟಿತ್ತು. ಸೀದಾ ಆ ಜೇನುಗೂಡಿಗೆ ಚೆಂಡು ಬಡಿದಿದೆ.
ಅಷ್ಟೇ… ಡಿಸ್ಟರ್ಬ್ ಆದ ಜೇನುನೊಣಗಳಿಗೆ ಅದು ಹೇಗೆ ತಿಳಿಯಿತೋ ಮೈದಾನದೊಳಕ್ಕೆ ದಾಳಿಯಿಟ್ಟಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಆಟಗಾರರು ದಿಕ್ಕಾಪಾಲಾಗಿ ಓಡಿದ್ದಾರೆ. ಕೊನೆಗೆ ಜೇನುನೊಣಗಳ ದಾಳಿಗೆ ಕ್ರಿಕೆಟ್ ಪಂದ್ಯಾಟವೇ ರದ್ದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.