ಉಜಿರೆ: ಬಸ್ ಗಾಗಿ ಕಾಯುತ್ತಿದ್ದವರ ಮೇಲೆ ಹರಿದ ಲಾರಿ ; ಇಬ್ಬರು ಸ್ಥಳದಲ್ಲೇ ಸಾವು..!
Twitter
Facebook
LinkedIn
WhatsApp
ಬೆಳ್ತಂಗಡಿ ಫೆಬ್ರವರಿ 04: ಬಸ್ ಗೆ ಕಾಯುತ್ತಿದ್ದ ಇಬ್ಬರ ಮೇಲೆ ಲಾರಿಯೊಂದು ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಉಜಿರೆ ಸಮೀಪದ ಗಾಂಧಿ ನಗರ ಬಳಿ ನಡೆದಿದೆ.
ಉಜಿರೆ ಸಮೀಪದ ಗಾಂಧಿ ನಗರ ತಿರುವು ಬಳಿ ಬಸ್ ಗಾಗಿ ಪುರುಷ ಹಾಗೂ ಮಹಿಳೆ ರಸ್ತೆ ಬದಿ ನಿಂತಿದ್ದ ವೇಳೆ ಉಜಿರೆ ಕಡೆಯಿಂದ ತಿರುವಿನಲ್ಲಿ ಅತೀ ವೇಗವಾಗಿ ಬಂದ ಲಾರಿ ಇಬ್ಬರಿಗೆ ಡಿಕ್ಕಿ ಹೊಡೆದದ್ದಲ್ಲದೆ ವಿದ್ಯುತ್ ಕಂಬ ಸಮೀಪದ ಕಟ್ಟಡಕ್ಕೆ ಹಾನಿಯುಂಟಾಗಿದೆ.
ಮೃತಪಟ್ಟ ಪುರುಷ ವ್ಯಕ್ತಿಯನ್ನು ಉಜಿರೆ ನಿವಾಸಿ ಕಿಟ್ಟು ಎನ್ನಲಾಗಿದ್ದು, ಉಳಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ.