ಉಡುಪಿ: ಸಮುದ್ರ ತೀರದಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿದ ಯುವಕರು ; ಇಬ್ಬರ ರಕ್ಷಣೆ!
Twitter
Facebook
LinkedIn
WhatsApp
ಉಡುಪಿ: ಸಮುದ್ರ ತೀರದಲ್ಲಿ ನೀರಿಗೆ ಇಳಿದು ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಮೀನುಗಾರಿಕಾ ದೋಣಿಯ ಸಿಬಂದಿ ರಕ್ಷಿಸಿದ ಘಟನೆ ಉಡುಪಿಯ ಮಲ್ಪೆ ಸಮೀಪದ ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌ನಲ್ಲಿ ನಡೆದಿದೆ.
ಬೆಂಗಳೂರು ಮೂಲದವರೆನ್ನಲಾದ ಇಬ್ಬರು ಯುವಕರು ಮತ್ತು ಮೂವರು ಯುವತಿಯರು ಸೇರಿದಂತೆ ಒಟ್ಟು 5 ಮಂದಿ ಮಧ್ಯಾಹ್ನ ವೇಳೆ ನೀರಿಗೆ ಇಳಿದಿದ್ದಾರೆ. ಇಬ್ಬರು ಯುವಕರು ನೀರಿನಲ್ಲಿ ಈಜಲು ಮುಂದಾಗಿದ್ದರು. ಈಜುತ್ತಾ ಮುಂದೆ ಹೋದ ಅವರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅವರ ಬೊಬ್ಬೆ ಕೇಳಿ ಸ್ಥಳೀಯ ಸೀಬರ್ಡ್ ಮತ್ತು ಡೆಲ್ಟಾ ಬೋಟ್ ಹಾಗೂ ವಾಟರ್ ಸ್ಪೋರ್ಟ್ಸ್ ಬೋಟುಗಳ ಸಿಬಂದಿ ವಿವೇಕ್ ಪುತ್ರನ್, ರಮೇಶ್ ಬಂಗೇರ, ಕೃಷ್ಣ ಅವರು ತತ್‌ಕ್ಷಣ ಧಾವಿಸಿ ಬಂದರು ಬೋಟಿನ ಸಹಾಯದಿಂದ ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ