ಉಡುಪಿ : ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ನಿಕಿತಾ ಸಾವು ; ಸಾವಿಗೆ ವೈದ್ಯರೆ ಕಾರಣ ಎಂದು ಆರೋಪಿಸಿದ ಕುಟುಂಬಸ್ಥರು!
ಉಡುಪಿ:ವೈದ್ಯರ ನಿರ್ಲಕ್ಷದಿಂದ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಆರೋಪ ಉಡುಪಿಯಿಂದ ಕೇಳಿ ಬಂದಿದೆ.
ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಕೆಮ್ಮುಂಡೇಲು ನಿವಾಸಿ ನಿಕಿತಾ(20) ಮೃತ ವಿದ್ಯಾರ್ಥಿನಿ.
ಜನಾರ್ದನ-ಶೋಭಾ ದಂಪತಿಯ ಏಕೈಕ ಮಗಳಾದ ನಿಕಿತಾಗೆ ಹೊಟ್ಟೆ ನೋವು ಎಂಬ ಕಾರಣಕ್ಕೆ ಕಳೆದ ಬುಧವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸ್ಕ್ಯಾನಿಂಗ್ ಮೊದಲು ಸ್ಕ್ಯಾನಿಂಗ್ ಮಾಡಿದ್ದಾರೆ.ವೈದ್ಯರು ಮರುದಿನ ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಮೂರನೆ ದಿನ ಎಂಡೋಸ್ಕೋಪಿ ಮಾಡುವುದಾಗಿ ಹೇಳಿದ್ದಾರೆ.ಆದರೆ ವೈದ್ಯರಿಗೆ ಅವಳಿಗೆ ಏನಾಗಿದೆ ಎಂದೇ ಗೊತ್ತಾಗಿಲ್ಲ.ಮತ್ತೆ ಅವರು ಅಫೆಂಡಿಕ್ಸ್ ಅಂತ ಆಫರೇಷನ್ ಮಾಡಿದ್ದಾರೆ.
ಶಸ್ತ್ರಚಿಕಿತ್ಸೆ ನಡೆದ ಬಳಿಕ ಲಂಗ್ಸ್ನಲ್ಲಿ ನೀರು ತುಂಬಿದ ಪರಿಣಾಮ ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು ಕಂಡು ಪೋಷಕರು ಆತಂಕಗೊಂಡಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.
ಯಾವುದೇ ಗಂಭೀರ ಸಮಸ್ಯೆ ಇಲ್ಲ ನಾವೇ ಚಿಕಿತ್ಸೆ ನೀಡುತ್ತೇವೆ ಎಂದು ವೈದ್ಯರು ಹೇಳಿದ್ದಾರೆ.ಇದ್ದಕ್ಕಿದ್ದಂತೆ ಶ್ವಾಸದಲ್ಲಿ ಏರುಪೇರು ಕಂಡು ಬಂದು ಭಾನುವಾರ ಮುಂಜಾನೆ ಯುವತಿ ಸಾವನ್ನಪ್ಪಿದ್ದಾಳೆ.ಸಾವಿಗೆ ಹೃದಯಘಾತ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ಮಣಿಪಾಲಗೆ ಶಿಫ್ಟ್ ಮಾಡಲು ಒಪ್ಪದ ಕಾರಣ ಸಾವು ಸಂಭವಿಸಿದೆ ಎಂದು ಪೋಷಕರು ಆರೋಪಿಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನಿಕಿತಾಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಲಾಗುತ್ತಿದೆ.
ನಿಕಿತಾ ಸಾವಿಗೆ ಖಾಸಗಿ ಆಸ್ಪತ್ರೆಯೇ ಕಾರಣ ಎಂದು ನಿಖಿತಾ ಚಿಕ್ಕಮ್ಮ ಆರೋಪಿಸಿದ್ದಾರೆ.
ಮಂಗಳೂರಿನ ಕೆಪಿಟಿಯಲ್ಲಿ ನಿಕಿತಾ ಡಿಪ್ಲೋಮೋ ಮಾಡುತ್ತಿದ್ದರು. ಸಾವಿನ ನೋವಿನಲ್ಲಿ ಮರಣೋತ್ತರ ಪರೀಕ್ಷೆಗೂ ಕುಟುಂಬ ಒಪ್ಪಿಲ್ಲ. ಮರಣೋತ್ತರ ಪರೀಕ್ಷೆ ಆಗಿಲ್ಲದೆ ಪೊಲೀಸ್ ದೂರು ಕೂಡ ದಾಖಲಾಗಿಲ್ಲ ಎನ್ನಲಾಗಿದೆ.