ಉಡುಪಿ: ತನ್ನದೇ ಬಸ್ ನ ಅಡಿಗೆ ಬಿದ್ದು ಮಾಂಡವಿ ಬಸ್ ಮಾಲಕ ದಯಾನಂದ ಶೆಟ್ಟಿ ಸಾವು..!
ಉಡುಪಿ ಮಾರ್ಚ್ 14: ತನ್ನದೇ ಬಸ್ ನ ಅಡಿಗೆ ಬಿದ್ದು ಬಸ್ ನ ಮಾಲಕ ಸಾವನಪ್ಪಿದ ಘಟನೆ ಬಡಗಬೆಟ್ಟುವಿನ ಗ್ಯಾರೇಜ್ ಒಂದರಲ್ಲಿ ಬುಧವಾರ ಸಂಭವಿಸಿದೆ.
ಮೃತರನ್ನು ಮಾಂಡವಿ ಖಾಸಗಿ ಬಸ್‌ನ ಮಾಲಕ ದಯಾನಂದ ಶೆಟ್ಟಿ (65) ಮೃತಪಟ್ಟವರು. ಇವರು ತಮ್ಮ ಬಸ್ ಅನ್ನು ಗ್ಯಾರೇಜ್‌ನಲ್ಲಿ ರಿಪೇರಿಗೆ ನೀಡಿದ್ದನ್ನು ನೋಡಲು ಬಂದಿದ್ದರು. ಈ ವೇಳೆ ಬಸ್‌ನ ಎದುರು ನಿಂತಿದ್ದ ವೇಳೆ ಚಾಲಕ ಬಸ್ ಚಲಾಯಿಸಿದ ಪರಿಣಾಮ ಅವರು ಮುಂಭಾಗದ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದರು. ತತ್‌ಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಕಾರ್ಕಳ: ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾದ ಕಾರು ;ಸವಾರ ಕೂದಲೆಳೆಯ ಅಂತರದಲ್ಲಿ ಪಾರು..!
ನಗರದ ಕರಿಯಕಲ್ಲು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-169 ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಕೂದಲೆಳೆಯ ಅಂತರದಲ್ಲಿ ಜೀವಾಪಾಯದಿಂದ ಪಾರಾಗಿದ್ದಾನೆ.
ಬಜಗೋಳಿ ಕಡೆಯಿಂದ ಕಾರೊಂದು ಅತೀ ವೇಗವಾಗಿ ಕಾರ್ಕಳ ಕಡೆಗೆ ಬರುತ್ತಿದ್ದು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಘಟನೆಯ ತೀವ್ರತೆಗೆ ಸವಾರನು ಕಾರಿನ ಗಾಜಿನ ಮೇಲೆ ಹಾರಿಬಿದ್ದು ತಲೆಗೆ ಗಾಯವಾಗಿದೆ.ನಿಯಂತ್ರಣ ತಪ್ಪಿದ ಕಾರಿನ ಚಕ್ರ ರಸ್ತೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣಿನ ಹೂತು ಹೋಗಿರುವುದಿಂದ ಅಲ್ಲಿಯೇ ನಿಂತು ಹೋಗಿದೆ.ಎದುರುಗಡೆಯಲ್ಲಿ ರಸ್ತೆಗೆ ಅಳವಡಿಸಲಾಗಿದ್ದ ನಾಮಫಲಕ ಇದ್ದು ಅದಕ್ಕೆ ಡಿಕ್ಕಿ ಹೊಡೆಯುತ್ತಿದ್ದರೆ ಇನ್ನಷ್ಟು ಅನಾಹುತ ಘಟನೆ ಹೆಚ್ಚುತ್ತಿತ್ತು.
ಕಾರಿನ ಹಿಂಭಾಗದಲ್ಲಿ ಟೂರಿಸ್ಟ್ ವಾಹನದ ಜಾಹೀರಾತು ಕಂಡುಬರುತ್ತಿದೆ.ದ್ವಿಚಕ್ರ ವಾಹನ ಕಾರಿನ ಮುಂಭಾಗದಲ್ಲಿ ಸಿಲುಕಿಕೊಂಡು ಸಂಪೂರ್ಣ ನುಜ್ಜುಗುಜ್ಜಾಗಿದೆ.ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣಾ ಪೊಲೀಸರು ಅಗಮಿಸಿದ್ದಾರೆ.ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.