ಉಡುಪಿ : ನಮಾಜ್ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವು; ಇಲ್ಲಿದೆ ಘಟನೆಯ ವಿಡಿಯೊ
Twitter
Facebook
LinkedIn
WhatsApp
ಉಡುಪಿ: ನಮಾಜ್ ಮಾಡುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉಡುಪಿ ನಗರದ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ ನಡೆದಿದೆ.
ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ ಮುಸ್ತಾಕ್ (55) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ನಮಾಜ್ ವೇಳೆ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇವರು ಎಂದಿನಂತೆ ಮಸೀದಿಗೆ ತೆರಳಿದ್ದಾರೆ. ಅಲ್ಲಿ ಎಲ್ಲರೊಂದಿಗೆ ಸಾಲಿನಲ್ಲಿ ಕುಳಿತುಕೊಂಡು ಮೊದಲು ನಮಾಜ್ ಮಾಡಿದ್ದಾರೆ.
ಬಳಿಕ ಖುತ್ಬಾ ಕೇಳಲು ಕುಳಿತಿರುವಾಗ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದೆ. ಹೃದಯಾಘಾತವಾಗುವಾಗ ಮೊದಲು ನಿಧಾನಕ್ಕೆ ನೆಲಕ್ಕೆ ಬೀಳುತ್ತಿದ್ದಾರೆ. ಆಗ ಸುತ್ತ ಇದ್ದ ಜನರು ದೇವರಿಗೆ ನಮಸ್ಕಾರ ಮಾಡುತ್ತಿದ್ದಾನೆ ಎಂದು ತಿಳಿದು ಹಾಗೇ ಕುಳಿತ್ತಿದ್ದಾರೆ. ಹಾಗೇ ಪಕ್ಕಕ್ಕೆ ವಾಲುತ್ತಿರುವುದನ್ನು ನೋಡಿ ಮತ್ತೊಬ್ಬ ವ್ಯಕ್ತಿ ಕೈ ಹಿಡಿದು ಎಚ್ಚರಿಸಿದ್ದಾರೆ. ಸಂಪೂರ್ಣವಾಗಿ ನೆಲಕ್ಕೆ ಕುಸಿದು ಬೀಳುತ್ತಿದ್ದಂತೆ ಹಿಂದೆಯಿದ್ದ ವ್ಯಕ್ತಿ ಬಂದು ಮೇಲೆತ್ತಲು ಹೋದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ.