ಭಾನುವಾರ, ಸೆಪ್ಟೆಂಬರ್ 8, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಡುಪಿ: ಮಾಜಿ ರಾಜ್ಯಪಾಲ ಪಿ.ಬಿ ಆಚಾರ್ಯ ನಿಧನ!

Twitter
Facebook
LinkedIn
WhatsApp
ಉಡುಪಿ: ಮಾಜಿ ರಾಜ್ಯಪಾಲ ಪಿ.ಬಿ ಆಚಾರ್ಯ ನಿಧನ!

ಉಡುಪಿ ನವೆಂಬರ್ 10 :ಈಶಾನ್ಯ ರಾಜ್ಯಗಳ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದ ಮಾಜಿ ರಾಜ್ಯಪಾಲ ಪಿ.ಬಿ ಆಚಾರ್ಯ (92) ಇಂದುವಿಧಿವಶರಾಗಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯವರಗಿರುವ ಪಿ.ಬಿ ಆಚಾರ್ಯಯವರು ಮಹಾರಾಷ್ಟ್ರದ ಮುಂಬೈಯಲ್ಲಿ ನಿಧನರಾಗಿದ್ದಾರೆ. ಇವರು ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶದಲ್ಲಿ ರಾಜ್ಯಪಾಲರಾಗಿದ್ದರು.

ಉಡುಪಿಯ ತೆಂಕಪೇಟೆಯ ಆಚಾರ್ಯ ಮಠದಲ್ಲಿ ಜನಿಸಿರುವ ಪಿ.ಬಿ ಆಚಾರ್ಯ ಅವರು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಅವಿರತಶ್ರಮ ಪಟ್ಟಿದ್ದಾರೆ. ಆರ್ ಎಸ್ ಎಸ್ ಕಾರ್ಯಕರ್ತರಾಗಿಯೂ ಈಶಾನ್ಯ ಭಾರತದ ಮೂಲೆ ಮೂಲೆಯಲ್ಲಿ ಕೆಲಸ ಮಾಡಿದ್ದಾರೆ. ಸಾಮಾನ್ಯ ಜನರಿಗೆ ರಾಜಭವನ ಮುಕ್ತವಾಗಿ ತೆರೆದಿಟ್ಟವರಾಗಿದ್ದಾರೆ. ಅಲ್ಲದೆ ಬಡ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಶಿಕ್ಷಣ ಕೊಡಿಸುತ್ತಿದ್ದರು.

ಗಂಗೊಳ್ಳಿ: 16 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಬಿದ್ದ ಮೀನುಗಾರನ ರಕ್ಷಣೆ

ರಬ್ಬಿ ಸಮುದ್ರದ 16 ನಾಟಿಕಲ್ ಮೈಲ್ ದೂರದಲ್ಲಿ ಬಿದ್ದ ಮೀನುಗಾರನೊಬ್ಬನನ್ನು ಮತ್ತೊಂದು ಮೀನುಗಾರಿಕಾ ಬೋಟಿನ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಂಗಳವಾರ ಮುಂಜಾನೆ ಸುಮಾರು 7.30ಕ್ಕೆ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಕೋಡಿ ಎಲ್.ಪಿ ಯ ನೇರ ಸುಮಾರು 16 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವಿ. ಕೆ. ಅಬ್ಬುಲ್ಲಾ ರವರ ಮಾಲೀಕತ್ವದ INTD-KA-03-MM-3008 ಸಾಗರ್” ಹೆಸರಿನ ಜೋಟಿನಲ್ಲಿ ದ್ದ ಮೀನುಗಾರರಿಗೆ ಸಮುದ್ರದಲ್ಲಿ ಬಿದ್ದು ಈಜಾಡುತ್ತಿರುವ ವ್ಯಕ್ತಿಯೊಬ್ಬ ಕಾಣಿಸಿದ್ದಾನೆ. ತಕ್ಷಣ ಆ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಬಳಿಕ ವಿಚಾರಿಸಿದಾಗ “ಮುಂಜಾನೆಯ ಸಮಯ ತಾನು ಇತರ ಮೀನುಗಾರರೊಂದಿಗೆ ಮೀನುಗಾರಿಕೆ ಮಾಡುತ್ತಿರುವಾಗ ರಭಸವಾದ ಗಾಳಿ ಮಳೆಗೆ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯಿಂದ ಆಕಸ್ಮಿಕವಾಗಿ ಬಿದ್ದಿರುವುದಾಗಿ” ತಿಳಿಸಿದ್ದಾನೆ. “ನಂತರ ಗಾಳಿ ಮಳೆಗೆ ದೋಣಿಯಿಂದ ದೂರ ಸಾಗಿದ್ದು ದೋಣಿಯ ಸಂಪರ್ಕಕ್ಕೆ ಸಿಕ್ಕದೇ ಈಜಾಡುತ್ತಿದ್ದೆ” ಎಂದು ಹೇಳಿದ್ದಾನೆ ಎಂದು ಸಾಗರ್ ಬೋಟಿನಲ್ಲಿದ್ದ ಮೀನುಗಾರರು ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯುವಕನ ರಕ್ಷಣೆಯ ಬಳಿಕ ಯುವಕ ಬಿದ್ದ ದೋಣಿಯವರು ಹುಡುಕಿಕೊಂಡು ವಾಪಾಸು ಬಂದಿದ್ದು, ಅವರ ದೋಣಿ ಹತ್ತಿಸಿ ಕಳುಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.  ಇದೀಗ 16 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಯುವಕನ ರಕ್ಷಣೆ ಮಾಡಿದ ಸಾಗರ್ ಬೋಟಿನ ಮೀನುಗಾರರ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ