ಉಡುಪಿ – ಉದ್ಯಾವರ ಸೇತುವೆ ಬಳಿ ಸ್ಕೂಟರ್ ಚಪ್ಪಲಿ ಬಿಟ್ಟು ನಾಪತ್ತೆಯಾದ ಯುವಕ; ಪೊಲೀಸರಿಂದ ಶೋಧ..!
ಕಾಪು ಡಿಸೆಂಬರ್ 13 : ಯುವಕನೊಬ್ಬ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಸೇತುವೆಯಲ್ಲಿ ಸ್ಕೂಟರ್ ಚಪ್ಪಲಿ ಬಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾದ ಯುವಕ ಉಡುಪಿಯ ಖಾಸಗಿ ಇಲೆಕ್ಟ್ರಾನಿಕ್ ಸಂಸ್ಥೆಯೊಂದರ ಉದ್ಯೋಗಿಯೆಂದು ತಿಳಿದುಬಂದಿದೆ. ಈತ ಸೇತುವೆಯ ಮೇಲೆ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.
ಮಂಗಳೂರು : ಬಡವರ ಪಾಲಿನ ದೇವರು ಡಾ.ಬಿ ಕೆ ವಿಶ್ವನಾಥ್ ನಿಧನ..!
ಮಂಗಳೂರು : ಬಡವರ ಪಾಲಿನ ದೇವರೆಂದೇ ಖ್ಯಾತರಾಗಿದ್ದ ಮಂಗಳೂರಿನ ಹಿರಿಯ ವೈದ್ಯ ಡಾ, ಬಿ ಕೆ , ವಿಶ್ವನಾಥ್ ಅವರು ನಿಧನರಾಗಿದ್ದಾರೆ.
82 ವರ್ಷದ ಡಾ. ವಿಶ್ವನಾಥ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಮಂಗಳೂರು ನಗರದ ಕೊಟ್ಟರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಡಾ. ಬಿ ಕೆ ವಿಶ್ವನಾಥ್ ರವರು ಬಡವರ ಪಾಲಿನ ದೇವರಂದೇ ಪ್ರಸಿದ್ಧರಾಗಿದ್ದರು. ಅತೀ ಕಡಿಮೆ ಹಣ ಪಡೆದು ಸೇವೆ ಮಾಡುತ್ತಿದ್ದ ಅವರು ಅನೇಕ ಸಂದರ್ಭಗಳಲ್ಲಿ ಹಣವನ್ನೇ ಪಡೆಯದೆ ಚಿಕಿತ್ಸೆ ನೀಡುತ್ತಿದ್ದರು. ಡಾ. ಬಿ ಕೆ ವಿಶ್ವನಾಥ್ ಹೆಂಡತಿ, ಮಗಳು , ಅಳಿಯ ಮತ್ತು ನಾಲ್ವರು ಮೊಮ್ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ, ಡಾ, ಬಿಕೆ ವಿಶ್ವನಾಥ್ ನಿಧನಕ್ಕೆ ವೈದ್ಯ ಲೋಕ, ಸಮಾಜದ ಗಣ್ಯರು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.