ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಸ್ತೆ ಬದಿಯಲ್ಲಿ ಇಬ್ಬರನ್ನು ಅಟ್ಟಾಡಿಸಿಕೊಂಡು ಬಂದ ಕಾಡಾನೆ; ದಾಳಿಯಿಂದ ಜಸ್ಟ್ ಮಿಸ್- ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
ರಸ್ತೆ ಬದಿಯಲ್ಲಿ ಇಬ್ಬರನ್ನು ಅಟ್ಟಾಡಿಸಿಕೊಂಡು ಬಂದ ಕಾಡಾನೆ; ದಾಳಿಯಿಂದ ಜಸ್ಟ್ ಮಿಸ್- ಇಲ್ಲಿದೆ ವಿಡಿಯೋ!!!

ಸೋಷಿಯಲ್‌ ಮೀಡಿಯಾದಲ್ಲಿ ಆನೆ ಇಬ್ಬರು ವ್ಯಕ್ತಿಗಳನ್ನು ಅಟ್ಟಿಸಿಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ, ಆ ವೀಡಿಯೋ ನೋಡುವಾಗ ಮೈಜುಮ್ ಅನಿಸುತ್ತೆ, ಇನ್ನೇನು ಆ ವ್ಯಕ್ತಿಯ ಪ್ರಾಣ ಹೋಯ್ತು ಅಂದುಕೊಳ್ಳುತ್ತೇವೆ, ಸಾವಿನಿಂದ ಜಸ್ಟ್ ಮಿಸ್‌ ಅಷ್ಟೇ…

ಈ ವೀಡಿಯೋ ನೋಡಿದವರು ಆ ವ್ಯಕ್ತಿಗಳ ವರ್ತನೆಗೆ ಬೈಯ್ಯುತ್ತಿದ್ದಾರೆ, ಅಷ್ಟಕ್ಕೂ ಕಾಡು ಪ್ರಾಣಿಗಳ ಬೌಂಡರಿಯೊಳಗೆ ನಾವು ಮನುಷ್ಯರು ಹೋಗುವಾಗ ಅವಳಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ಪರಿಜ್ಞಾನವಿರಬೇಕು, ಅಲ್ಲಿ ಕುಚೇಷ್ಠೆ ಮಾಡಿದರೆ ಕಾಡುಪ್ರಾಣಿಗಳ ದಾಳಿಗೆ ಬಲಿಯಾಗಬಹುದು.

ಈ ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳನ್ನು ಆನೆ ಅಟ್ಟಿಸಿಕೊಂಡು ಬರುತ್ತಿದೆ, ಅವರು ಪ್ರಾಣ ಉಳಿಸಿಕೊಳ್ಳಲು ಎದ್ನೋ ಬಿದ್ನೋ ಅಂತ ಓಡುತ್ತಿದ್ದಾರೆ, ಅವರ ಜೊತೆ ಕೆಂಪು ಕಾರು ಕೂಡ ನಿಧಾನಕ್ಕೆ ಬರುತ್ತಿದೆ, ಆನೆ ಅಟ್ಟಿಸಿಕೊಂಡು ಅವರ ಹಿಂದೆಯೇ ಇದೆ.

ನೋಡಿದರೆ ಅದೊಂದು ರಸ್ತೆ, ರಸ್ತೆಯಲ್ಲಿ ಮನುಷ್ಯರು ಓಡಾಡಬಾರದಾ ಎಂದು ಅನಿಸಬಹುದು, ಆದರೆ ಅದು ರಸ್ತೆ ನಿಜ, ಆ ರಸ್ತೆಯನ್ನು ಕಾಡಿನೊಳಗೆ ಓಡಾಟಕ್ಕೆ ಮಾಡಲಾಗಿದೆ. ಅಂಥ ರಸ್ತೆಯಲ್ಲಿ ಹೋಗುವಾಗ ತಮ್ಮ ಪಾಡಿಗೆ ಹೋಗಬೇಕು, ಗಾಡಿಯಿಂದ ಇಳಿಯುವುದು ಅಥವಾ ಕುಚೇಷ್ಠೆ ಮಾಡುವುದು ಮಾಡುವುದಕ್ಕೆ ಹೋಗಬಾರದು.

ವಯನಾಡ್ 

ರಸ್ತೆ ಇದು ವಯನಾಡ್‌ಗೆ ಹೋಗುವಾಗ ಸಿಗುವ ರಸ್ತೆ, ಇಲ್ಲಿ ಕಾಡೆಮ್ಮೆ , ಕಾಡಾನೆ, ಜಿಂಕೆಗಳು ಎಲ್ಲಾ ಕಂಡು ಬರುತ್ತದೆ, ಈ ರಸ್ತೆಯಲ್ಲಿ ಹೋಗುವಾಗ ಗಾಡಿಯಿಂದ ಇಳಿಯಲೇಬಾರದು. ಇವರು ಬಹುಶಃ ಮೂತ್ರವಿಸರ್ಜನೆಗೆ ಇಳಿದಿರಬಹುದು ಅಥವಾ ಕಾಡು ನೋಡೋಣ ಎಂದು ಇಳಿದಿರಬಹುದು, ಆದರೆ ನಂತರ ಅವರು ಊಹಿಸಿರದ ಘಟನೆ ನಡೆದೇ ಬಿಟ್ಟಿತ್ತು, ಜಗವೊಂದು ಇವರನ್ನು ಅಟ್ಟಿಸಿಕೊಂಡು ಬಂತು, ಆ ದೃಶ್ಯವನ್ನು ಎದುರಿನಲ್ಲಿ ಬರುತ್ತಿರುವವರು ಸೆರೆ ಹಿಡಿದಿದ್ದಾರೆ, ಇದೀಗ ಅದೇ ವೀಡಿಯೋ ವೈರಲ್ ಆಗಿದೆ.

ಜಸ್ಟ್‌ ಮಿಸ್‌ 

ಆನೆ ಅಟ್ಟಿಸಿಕೊಂಡು ಬರುವಾಗ ಒಬ್ಬರು ಬಿದ್ದು ಹೋಗುತ್ತಾರೆ, ಆನೆ ಅವರನ್ನು ತುಳಿಯಲು ನೋಡುತ್ತದೆ ಆದರೆ ತೆವಳಿಕೊಂಡು ಅತ್ತ ಸರಿಯುತ್ತಾರೆ, ಅಷ್ಟರಲ್ಲಿ ಮತ್ತೊಂದು ಜೀಪ್ ಪಾಸ್ ಆಯ್ತು, ಆನೆ ಗಮನ ಅತ್ತ ಹೋಗಿದ್ದಕ್ಕೆ ಇಬ್ಬರ ಜೀವ ಉಳಿಯಿತು.

 ಕಾಡು ಪ್ರಾಣಿಗಳಿರುವ ಜಾಗಕ್ಕೆ ನಾವು ಹೋದಾಗ ಅವುಗಳಿಗೆ ತೊಂದರೆ ಮಾಡದಂತೆ ಜಾಗ್ರತೆವಹಿಸೋಣ…

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ