ಸೋಮವಾರ, ಮೇ 20, 2024
ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ಮತ; ವೈರಲ್ ವಿಡಿಯೋ ಇಲ್ಲಿದೆ-ಅಭಿಷೇಕ್ ಶರ್ಮರಿಂದ ಕೊಹ್ಲಿ ದಾಖಲೆ ಉಡಿಸ್; ಹೈದರಾಬಾದಿಗೆ ಭರ್ಜರಿ ಗೆಲುವು..!-ಗಗನೇಕ್ಕೇರುತ್ತಿದೆ ಚಿಕನ್ ದರ; ಮೊಟ್ಟೆ ಬೆಲೆಯೂ ಏರಿಕೆ.!-ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಂಟ್ವಾಳ: ಹೊಕ್ಕಾಡಿಗೋಳಿಯಲ್ಲಿ ಒಂದೇ ದಿನ ಎರಡು ಕಂಬಳ; ಇಲ್ಲಿದೆ ಫಲಿತಾಂಶದ ವಿವರ

Twitter
Facebook
LinkedIn
WhatsApp
ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ಒಂದೇ ದಿನ ಎರಡು ಕಂಬಳ; ಇಲ್ಲಿದೆ ಫಲಿತಾಂಶದ ವಿವರ

ಬಂಟ್ವಾಳ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ಅಕ್ಕಪಕ್ಕದಲ್ಲೇ ಎರಡು ಕಂಬಳಗಳು ಯಶಸ್ವಿಯಾಗಿ ನಡೆದವು. ಸ್ಥಳೀಯರು, ಗಣ್ಯರು ಎರಡೂ ಕಂಬಳದಲ್ಲಿ ಪಾಲ್ಗೊಂಡಿದ್ದು, ಕಂಬಳ ಕೋಣದ ಯಜಮಾನರು, ತೀರ್ಪುಗಾರರು ತಮ್ಮ ಇಚ್ಛೆಯ ಕಂಬಳದಲ್ಲಿ ಪಾಲ್ಗೊಂಡಿದ್ದರು. ಕೋಣಗಳು, ಕಂಬಳಾಭಿಮಾನಿಗಳು ಎರಡು ಕಂಬಳದಲ್ಲಿ ಹಂಚಿ ಹೋದ ಪರಿಣಾಮ ಭಾಗವಹಿಸಿದ ಕೋಣಗಳ ಸಂಖ್ಯೆ, ಜನರ ಸಂಖ್ಯೆ ಇತರ ಕಂಬಳ ಗಳಿಗಿಂತ ಕಡಿಮೆಯಾಗಿತ್ತು.

ಹೊಕ್ಕಾಡಿಗೋಳಿಯಲ್ಲೇ ಶ್ರೀ ಮಹಿಷಮರ್ದಿನಿ ಕಂಬಳ ಸಮಿತಿಯ ವತಿಯಿಂದ ರಶ್ಮಿತ್‌ ಶೆಟ್ಟಿ ಕೈತ್ರೋಡಿ ಅಧ್ಯಕ್ಷತೆಯಲ್ಲಿ ಒಂದು ಕಂಬಳ ನಡೆದರೆ,ಮತ್ತೊಂದು ಕಂಬಳ ಅಲ್ಲೇ ಪಕ್ಕದ ಕೊಡಂಗೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಬೆಂಬಲದೊಂದಿಗೆ ಶ್ರೀ ವೀರ-ವಿಕ್ರಮ ಕಂಬಳ ಸಮಿತಿ ವತಿಯಿಂದ ಸಂದೀಪ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇದೇ ಮೊದಲ ಬಾರಿಗೆ ಒಂದೇ ಊರಿನಲ್ಲಿ ಏಕಕಾಲಕ್ಕೆ ಎರಡು ಕಂಬಳಗಳು ನಡೆದಿದೆ. ಎರಡೂ ಕಂಬಳಗಳ ಜೋಡುಕರೆಗಳಿಗೆ ವೀರ-ವಿಕ್ರಮ ಎಂದೇ ಹೆಸರಿಡಲಾಗಿತ್ತು.

ಹೊಕ್ಕಾಡಿಗೋಳಿ ಮಹಿಷಮರ್ದಿನಿ ಕಂಬಳದಲ್ಲಿ ಕೂಟದಲ್ಲಿ ಒಟ್ಟು 115 ಕೋಣಗಳ ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ ಎರಡು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಎರಡು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ ಏಳು ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 15 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 11 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 30 ಜೊತೆ ಮತ್ತು ನೇಗಿಲು ಸಬ್ ಜೂನಿಯರ್ ವಿಭಾಗದಲ್ಲಿ 48 ಕೋಣಗಳಿದ್ದವು.

ಹೊಕ್ಕಾಡಿಗೋಳಿ ಕೊಡಂಗೆ ಕಂಬಳದಲ್ಲಿ 99 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ ಒಂದು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಮೂರು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ ಆರು ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 11 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 12 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 36 ಜೊತೆ ಮತ್ತು ನೇಗಿಲು ಸಬ್ ಜೂನಿಯರ್ ವಿಭಾಗದಲ್ಲಿ 30 ಕೋಣಗಳು ಭಾಗವಹಿಸಿದ್ದವು.

ಕೊಡಂಗೆ “ವೀರ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಕನೆಹಲಗೆ
ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
ಹಲಗೆ ಮೆಟ್ಟಿದವರು: ಬೈಂದೂರು ಬಾಸ್ಕರ ದೇವಾಡಿಗ


ಅಡ್ಡ ಹಲಗೆ
ಪ್ರಥಮ: ಹೊಸ್ಮಾರ್ ಸೂರ್ಯಶ್ರೀ ಜ್ಯೋತಿ ಸುರೇಶ್ ಕುಮಾರ್ ಶೆಟ್ಟಿ
ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ದ್ವಿತೀಯ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮೆಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ


ಹಗ್ಗ ಹಿರಿಯ
ಪ್ರಥಮ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ “ಎ”
ಓಡಿಸಿದವರು: ಪಣಪೀಲ ಪ್ರವೀಣ್ ಕೋಟ್ಯಾನ್
ದ್ವಿತೀಯ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ “ಬಿ”
ಓಡಿಸಿದವರು: ಬಾರಾಡಿ ನತೀಶ್


ಹಗ್ಗ ಕಿರಿಯ
ಪ್ರಥಮ: ಕಾರ್ಕಳ ನೆಕ್ಲಾಜೆ ಗುತ್ತು ಪ್ರಜ್ವಲ್ ಪ್ರಖ್ಯಾತ್ ಕೋಟ್ಯಾನ್
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಮೂಡಬಿದ್ರಿ ಹೊಸಬೆಟ್ಟು ಏರಿಮಾರು ಬರ್ಕೆ ಚೇತನ್ ಚಂದ್ರಹಾಸ ಸಾಧು ಸನಿಲ್
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್

ನೇಗಿಲು ಹಿರಿಯ
ಪ್ರಥಮ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ “ಬಿ”
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ


ನೇಗಿಲು ಕಿರಿಯ
ಪ್ರಥಮ: ಮುನಿಯಾಲ್ ಉದಯ ಕುಮಾರ್ ಶೆಟ್ಟಿ “ಎ”
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ: ಮುನಿಯಾಲ್ ಉದಯ ಕುಮಾರ್ ಶೆಟ್ಟಿ “ಬಿ”
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್


ನೇಗಿಲು ಸಬ್ ಜೂನಿಯರ್
ಪ್ರಥಮ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ
ಓಡಿಸಿದವರು: ಕೋರಿಂಜೆ ಅರುಣ್ ಕುಮಾರ್
ದ್ವಿತೀಯ: ಕಕ್ಕೆಪದವು ಕಿಂಜಾಲು ಶಾಂಭವಿ ಸಂಜೀವ ಶೆಟ್ಟಿ
ಓಡಿಸಿದವರು: ಕಕ್ಕೆಪದವು ಕಿಂಜಾಲು ಪ್ರದೀಪ್ ಶೆಟ್ಟಿ

“ವೀರ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಕನೆಹಲಗೆ 
ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ
ಪ್ರಥಮ: ನಾರಾವಿ ಯುವರಾಜ್ ಜೈನ್
ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ನೇರಳ ಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ
ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್

ಹಗ್ಗ ಹಿರಿಯ
ಪ್ರಥಮ: ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ “ಎ”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಬಿ”
ಓಡಿಸಿದವರು: ನಕ್ರೆ ಪವನ್ ಮಡಿವಾಳ

ಹಗ್ಗ ಕಿರಿಯ
ಪ್ರಥಮ: ಶಿಬರೂರು ಮುಟ್ಟಿಕಲ್ಲು ಕೀರ್ತನ್ ರಾಜೇಶ್ ಪಾಣಾರ
ಓಡಿಸಿದವರು: ಕಡಂದಲೆ ಮುಡಾಯಿಬೆಟ್ಟು ರೋಹಿತ್ ಪಾಣಾರ್
ದ್ವಿತೀಯ: ಕಕ್ಕೆಪದವು ಕಕ್ಯ ಇಂದಿರಾ ಮಹಾಬಲ ರೈ
ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ

ನೇಗಿಲು ಹಿರಿಯ
ಪ್ರಥಮ: ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಮಾಣಿ ಗುತ್ತು ಪ್ರಸನ್ನ ರಘುರಾಮ್ ನಾಯ್ಕ
ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ

ನೇಗಿಲು ಕಿರಿಯ
ಪ್ರಥಮ: ಹೆಬ್ರಿ ಮಾಡಿಗೆ ಮನೆ ದಿಲೀಪ್ ಶಿವರಾಮ ಹೆಗ್ಡೆ
ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ
ದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ದಿನೀಶ್ ಭಂಡಾರಿ
ಓಡಿಸಿದವರು: ಮಾಳ ಆಧೀಶ್ ಪೂಜಾರ

ನೇಗಿಲು ಸಬ್ ಜೂನಿಯರ್
ಪ್ರಥಮ: ಕನಡ್ತ್ಯಾರು ಕೃಷ್ಣ ಶೆಟ್ಟಿ
ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ
ದ್ವಿತೀಯ: ಪಡು ಸಾಂತೂರು ಕಲ್ಯಾಣಿ ನಿವಾಸ ರಾಮ ದೇಜು ಪೂಜಾರಿ
ಓಡಿಸಿದವರು: ಪಡು ಸಾಂತೂರು ಸುಕೇಶ್ ಪೂಜಾರಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ