ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿಪಂಜರ ಪತ್ತೆ ಕೇಸ್ಗೆ ಟ್ವಿಸ್ಟ್ ; ಡೆತ್ನೋಟ್ ನಲ್ಲಿ ಏನಿದೆ?
ಚಿತ್ರದುರ್ಗ: ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿ ಪಂಜರ (Five Skeletal Remains) ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. 4 ವರ್ಷದ ಹಿಂದಿನ ಡೆತ್ನೋಟ್ (Deathnote) ಇದೀಗ ಐವರ ಸಾವಿನ ಸುಳಿವನ್ನು ಕೊಟ್ಟಿದೆ.
ಜೈಲು ಪಾಲಾಗಿದ್ದಕ್ಕೆ ಮನನೊಂದು ಐವರು ಸಾವಿಗೆ ಶರಣಾಗಿರುವುದು ಬಯಲಾಗಿದೆ. ಸಾವಿಗೂ ಮುನ್ನ ಈ ಐವರು ಡೆತ್ನೋಡ್ ಬರೆದಿಟ್ಟಿದ್ದು, ಅದರಲ್ಲಿ ಕಾರಣವನ್ನು ತಿಳಿಸಿದ್ದಾರೆ.
ಡೆತ್ನೋಟ್ನಲ್ಲೇನಿದೆ..?: ಮೃತ ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ವಿರುದ್ಧ ದರೋಡೆ ಪ್ರಕರಣ ದಾಖಲಾಗಿತ್ತು. 2013ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ನರೇಂದ್ರ ರೆಡ್ಡಿ ಎಂಜಿನಿಯರ್ ಆಗಿದ್ದರು. ಇದೇ ವರ್ಷ ಬಿಡದಿ ಬಳಿ ಅವರ ವಾಹನವನ್ನು ತಡೆದು ದರೋಡೆ ಕೇಸ್ ದಾಖಲು ಮಾಡಲಾಗಿತ್ತು. ನರೇಂದ್ರ ಅವರು ತಮ್ಮ ಗೆಳೆಯರ ಜೊತೆ ತೆರಳಿ ದರೋಡೆ ಕೇಸಲ್ಲಿ ಭಾಗಿ ಆಗಿದ್ದರು. ಹೀಗಾಗಿ ದರೋಡೆ ಕೇಸಲ್ಲಿ ಕೆಲದಿನ ಜೈಲುವಾಸವನ್ನೂ ಅನುಭವಿಸಿದ್ದರು. ನರೇಂದ್ರರೆಡ್ಡಿ ವಿರುದ್ಧದ ಕೇಸಿನಿಂದ ಮನನೊಂದಿದ್ದ ಕುಟುಂಬ 2019ರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಶರಣಾಗಿದೆ.
ಸಾಕು ನಾಯಿ ಸಾವು: ಜಗನ್ನಾಥರೆಡ್ಡಿ ಮನೆಯಲ್ಲಿದ್ದ ಒಂದು ಸಾಕುನಾಯಿ ಸಹ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿ ಪಂಜರ ಪತ್ತೆ ಕೇಸ್ ಸಂಬಂಧಿಸಿದಂತೆ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮನೆಯಲ್ಲಿ ಸಾಕಿದ್ದ ನಾಯಿಯೊಂದು ಸಾವಿಗೀಡಾಗಿದ್ದು ಪತ್ತೆಯಾಗಿದೆ.
ರೆಡ್ಡಿ ಸಂಬಂಧಿಕರು ಹೇಳಿದ್ದೇನು..?: ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿ ಪಂಜರ ಪತ್ತೆಯಾದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಮೃತ ಜಗನ್ನಾಥ ರೆಡ್ಡಿ ಸಹೋದರನ ಪತ್ನಿ ಕೊಲ್ಲಿಲಕ್ಷ್ಮಿ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಜಗನ್ನಾಥ ರೆಡ್ಡಿ ಕುಟುಂಬಸ್ಥರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಸಕಾಲಕ್ಕೆ ಮಕ್ಕಳ ಮದುವೆ ಆಗದಿದ್ದಕ್ಕೆ ಮನನೊಂದಿದ್ದರು. ಮನನೊಂದು ಸಾವಾಗಿರುವ ಶಂಕೆ ವ್ಯಕ್ತಪಡಿಸಿದ ಅವರು, ಹಲವು ವರ್ಷಗಳಿಂದ ನಮ್ಮ ಸಂಪರ್ಕದಲ್ಲಿ ಇರಲಿಲ್ಲ ಎಂದರು.
ಇತ್ತ ಮೃತ ಪ್ರೇಮಕ್ಕ ಸಹೋದರಿ ಲಲಿತಾ ಪ್ರತಿಕ್ರಿಯಿಸಿ, 8 ವರ್ಷದಿಂದ ಅವರು ಸಂಪರ್ಕದಲ್ಲಿ ಇಲ್ಲ. 8 ವರ್ಷಗಳಿಂದ ಫೋನ್ ಮಾಡ್ತಿದ್ದೆ ಸಿಗ್ತಿರಲಿಲ್ಲ. ಎಲ್ಲೋ ಅನಾಥಶ್ರಮಕ್ಕೆ ಸೇರಬಹುದು ಅಂತಾ ಸುಮ್ಮನಾದೆ. ನನ್ನ ತಂಗಿ ಯಾರದ್ದೂ ಮದುವೆ ಮಾಡಲಿಲ್ಲ. ನನ್ನ ತಂಗಿ ಮಾಡಿದ ತಪ್ಪಿಗೆ ಯಾರಿಗೂ ಮದುವೆಯಾಗಿಲ್ಲ ಎಮದು ಅವರು ಬೇಸರ ವ್ಯಕ್ತಪಡಿಸಿದರು.