ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Triumph Speed 400: ಹೊಸದಾಗಿ ಯುವಕರಿಗೆ ಆಕರ್ಷಿಸುವ ಈ ಬೈಕ್ ಶೀಘ್ರವೇ ವಿತರಣೆಗೆ ಆರಂಭ!

Twitter
Facebook
LinkedIn
WhatsApp
Triumph Speed 400

ಬಜಾಜ್ ಮತ್ತು ಟ್ರಯಂಫ್‌ ಜಾಗತಿಕ ಪಾಲುದಾರಿಕೆಯಲ್ಲಿ ಟ್ರಯಂಫ್ ಸ್ಫೀಡ್ 400 ಮೋಟರ್‌ಸೈಕಲ್ ಸಿದ್ಧವಾಗುತ್ತಿದೆ. ಬೈಕ್ ಉತ್ಸಾಹಿಗಳಲ್ಲಿ ಈಗಾಗಲೇ ನಿರೀಕ್ಷೆ ಮೂಡಿಸಿದ್ದ ಟ್ರಯಂಫ್‌ ಸ್ಪೀಡ್ 400 ಇತ್ತೀಚೆಗೆ ಭಾರತದಲ್ಲಿ ಅದ್ಧೂರಿಯಾಗಿ ಅನಾವರಣಗೊಂಡಿತ್ತು. 2.33 ಲಕ್ಷ ರೂಪಾಯಿ ಎಕ್ಸ್‌ಶೋರೂಮ್ ಬೆಲೆಯಲ್ಲಿ ಬಿಡುಗಡೆಯಾಗಿದ್ದ ಈ ಬೈಕ್‌ನ ಬುಕ್ಕಿಂಗ್ ಕೂಡಾ ಶುರುವಾಗಿದೆ. ಹೀಗೆ ತಮ್ಮ ಹೊಸ ಬೈಕ್ ಬುಕ್ ಮಾಡಿಕೊಂಡವರಿಗೆ ಈಗ ಖುಷಿಯ ಸುದ್ದಿಯೊಂದು ಬಂದಿದೆ. ಅದೇನೆಂದರೆ ಟ್ರಯಂಫ್ ಸ್ಪೀಡ್ 400 ಬೈಕ್‌ಗಳ ಮೊದಲ ಬ್ಯಾಚ್ ಬಜಾಜ್‌ ಪ್ಲ್ಯಾಂಟ್‌ನಿಂದ ಹೊರಬಂದಿದೆ.

ಟ್ರಯಂಫ್ ಸ್ಪೀಡ್ 400 ; ಹೊಸದಾಗಿ ಯುವಕರಿಗೆ ಆಕರ್ಷಿಸುವ ಈ ಬೈಕ್ ಶೀಘ್ರವೇ ವಿತರಣೆಗೆ ಆರಂಭ!
ಶೀಘ್ರ ವಿತರಣಾ ಕಾರ್ಯ

ಮಹಾರಾಷ್ಟ್ರದ ಪುಣೆಯ ಚಕನ್‌ನಲ್ಲಿರುವ ಬಜಾಜ್‌ನ ಹೊಸ ಪ್ಲಾಂಟ್‌ನಲ್ಲಿ ಟ್ರಯಂಫ್ ಅವಳಿ ಬೈಕ್‌ಗಳಾದ ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400X ಉತ್ಪಾದನೆಯಾಗುತ್ತದೆ. ಇದೀಗ ಚಕನ್‌ನ ಉತ್ಪಾದನಾ ಘಟಕದಿಂದ ಟ್ರಯಂಫ್ ಸ್ಪೀಡ್ 400 ಬೈಕ್‌ಗಳ ಮೊದಲ ಬ್ಯಾಚ್ ಭಾರತದಾದ್ಯಂತ ಇರುವ ಅಧಿಕೃತ ಡೀಲರ್‌ಶಿಪ್‌ಗಳಿಗೆ ರವಾನೆಯಾಗಿದೆ. ಹೀಗಾಗಿ, ಶೀಘ್ರದಲ್ಲಿ ಈ ಬೈಕ್‌ನ ವಿತರಣಾ ಕಾರ್ಯವೂ ಶುರುವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಬಹುಶಃ ಈ ತಿಂಗಳಾಂತ್ಯ ಅಥವಾ ಮುಂದಿನ ತಿಂಗಳ ಆರಂಭದಿಂದ ಕಂಪನಿಯು ಹೊಸ ಬೈಕುಗಳನ್ನು ವಿತರಿಸಲಿದೆ.

ತನ್ನ ಹೊಸ ಬೈಕ್‌ಗಳು ಉತ್ಪಾದನಾ ಘಟಕದಿಂದ ರವಾನೆಯಾಗುವ ವಿಷಯವನ್ನು ಟ್ರಯಂಫ್ ಇಂಡಿಯಾ ತನ್ನ ಅಧಿಕೃತ ಟ್ವಿಟ್ಟರ್, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. 31 ಸೆಕೆಂಡಿನ ಈ ವಿಡಿಯೋ ಕ್ಲಿಪ್‌ನಲ್ಲಿ ಬೈಕ್‌ನ ಜೋಡಣಾ ಕಾರ್ಯ ಹಾಗೂ ಉತ್ಪಾದನಾ ಘಟಕದಲ್ಲಿ ಸಿದ್ಧವಾಗಿರುವ ಬೈಕ್‌ಗಳ ದೃಶ್ಯವನ್ನು ನೋಡಬಹುದು.

ಟ್ರಯಂಫ್ ಸ್ಪೀಡ್ 400 ; ಹೊಸದಾಗಿ ಯುವಕರಿಗೆ ಆಕರ್ಷಿಸುವ ಈ ಬೈಕ್ ಶೀಘ್ರವೇ ವಿತರಣೆಗೆ ಆರಂಭ!
10,000 ಗ್ರಾಹಕರಿಗೆ ರಿಯಾಯ್ತಿ ದರ

ಮೋಟರ್‌ಸೈಕಲ್‌ಗಳು ಡೀಲರ್‌ಶಿಪ್‌ಗಳನ್ನು ತಲುಪಿದ ಬಳಿಕ ಕಂಪನಿ ಅದನ್ನು ಬುಕ್ ಮಾಡಿದ ಗ್ರಾಹಕರಿಗೆ ತಿಳಿಸುತ್ತದೆ. ಅದೂ ಅಲ್ಲದೆ, ಬುಕ್ ಮಾಡಿದ ತನ್ನ ಮೊದಲ 10,000 ಗ್ರಾಹಕರಿಗೆ ಎಕ್ಸ್‌ಶೋರೂಮ್ 2.23 ಲಕ್ಷ ರೂಪಾಯಿಯಲ್ಲಿ ಬೆಲೆಯಲ್ಲಿ ನೀಡುವ ಕೊಡುಗೆಯನ್ನೂ ಕಂಪನಿ ಘೋಷಿಸಿತ್ತು. ಹೀಗಾಗಿ, ಬಿಡುಗಡೆಯಂದು ಘೋಷಿಸಿದಂತೆ ಆರಂಭದಲ್ಲಿ ಬುಕ್ ಮಾಡಿದ ಗ್ರಾಹಕರು ಎಕ್ಸ್‌ಶೋರೂಮ್ ಬೆಲೆಯಲ್ಲಿ ರೂಪಾಯಿ 10,000ದಷ್ಟು ವಿಶೇಷ ರಿಯಾಯ್ತಿಯನ್ನೂ ಪಡೆಯಲಿದ್ದಾರೆ. ಈ ಬೈಕ್ ಬಿಡುಗಡೆಯಾದ ಬಳಿಕ ಇದಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಈ ಮೋಟರ್‌ಸೈಕಲ್‌ಗಾಗಿ 10,000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಟ್ರಯಂಫ್ ಸ್ಪೀಡ್ 400 ಬೈಕ್ 398.15 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 40 ಎಚ್‌ಪಿ ಗರಿಷ್ಟ ಶಕ್ತಿ ಮತ್ತು 37.5 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅಸಿಸ್ಟ್‌ ಮತ್ತು ಸ್ಲಿಪ್ಪರ್ ಕ್ಲಚ್‌ ಜೊತೆಗೆ ಆರು ಸ್ಪೀಡ್ ಗೇರ್‌ ಬಾಕ್ಸ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ. ಈ ರೋಡ್‌ಸ್ಟರ್‌ನ ಸಸ್ಪೆನ್ಷನ್‌ ಕರ್ತವ್ಯವನ್ನು ಮುಂಭಾಗದಲ್ಲಿ 43mm ಯುಎಸ್‌ಡಿ ಫೋರ್ಕುಗಳು ಮತ್ತು ಹಿಂಭಾಗದಲ್ಲಿ ಅಡ್ಜಸ್ಟೇಬಲ್ ಮೊನೊಶಾರ್ಕ್‌ ಯುನಿಟ್‌ಗಳು ನಿಭಾಯಿಸುತ್ತವೆ. ಎಲ್‌ಇಡಿ ಲೈಟಿಂಗ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅಲಾಯ್ ಚಕ್ರಗಳು ಸೇರಿ ಈ ಬೈಕ್ ಹಲವು ವೈಶಿಷ್ಟ್ಯಗಳನ್ನೂ ಹೊಂದಿದೆ.

ಮೊದಲೇ ಹೇಳಿದಂತೆ ಟ್ರಯಂಫ್‌ ಬೈಕ್‌ಗಳಿಗೆ ಬೇಡಿಕೆ ಚೆನ್ನಾಗಿದೆ. ಹೀಗಾಗಿ, ಟ್ರಯಂಫ್ ತನ್ನ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400X ಬೈಕ್‌ನ ಬುಕ್ಕಿಂಗ್ ಮೊತ್ತವನ್ನೂ ಇತ್ತೀಚೆಗೆ ಪರಿಷ್ಕರಿಸಿದೆ. ಈ ಹಿಂದೆ 2,000 ರೂಪಾಯಿ ಇದ್ದ ಈ ಬುಕ್ಕಿಂಗ್ ಮೊತ್ತ ಈಗ 10,000 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಮೂಲಕ 8000 ರೂಪಾಯಿಯನ್ನು ಹೆಚ್ಚುವರಿಯಾಗಿ ಗ್ರಾಹಕರು ಪಾವತಿಸಬೇಕಾಗುತ್ತದೆ. ಪ್ರಸ್ತುತ ಟ್ರಯಂಫ್ ಸ್ಪೀಡ್ 400 ಬೈಕ್ 2.33 ಲಕ್ಷ ರೂಪಾಯಿ ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. ಸ್ಕ್ರ್ಯಾಂಬ್ಲರ್ 400X ಬೈಕ್ ಬೆಲೆಯನ್ನು ಸದ್ಯಕ್ಕೆ ಘೋಷಿಸಿಲ್ಲ. ಇದರ ಬೆಲೆ 2023ರ ಅಕ್ಟೋಬರ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಟ್ರಯಂಫ್ ಸ್ಪೀಡ್ 400 ಭಾರತದಲ್ಲಿ ಕೆಟಿಎಂ 390 ಡ್ಯೂಕ್, ಹಾರ್ಲೆ-ಡೇವಿಡ್ಸನ್ X440 ಮತ್ತು BMW G 310R ಜೊತೆಗೆ ಸ್ಪರ್ಧಿಸುತ್ತಿದೆ.

ಟ್ರಯಂಫ್ ಸ್ಪೀಡ್ 400 ; ಹೊಸದಾಗಿ ಯುವಕರಿಗೆ ಆಕರ್ಷಿಸುವ ಈ ಬೈಕ್ ಶೀಘ್ರವೇ ವಿತರಣೆಗೆ ಆರಂಭ!
ಪುಷ್ಪಾ 2 ಚಿತ್ರಕ್ಕೆ ರಶ್ಮಿಕಾ ನಾಯಕಿ, ಶ್ರೀಲೀಲಾ ಡಾನ್ಸರ್: ಏನಿದು ಹೊಸ ಸುದ್ದಿ?

ಪುಷ್ಪ ಸಿನಿಮಾ ಹಿಟ್ ಆಗಲು ‘ಹುಂ ಅಂಟವಾ ಮಾವ’ ಐಟಂ ಸಾಂಗ್ (Item Song) ಕೂಡ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸಮಂತಾ ಈ ಹಾಡಿಗೆ ಮೈಚಳಿ ಬಿಟ್ಟು ಕುಣಿದಿದ್ದರು. ಪಡ್ಡೆಗಳ ಹೃದಯದಲ್ಲಿ ಚಿಟ್ಟೆ ಹಾರಿಸಿದ್ದರು. ಈ ಹಾಡು ಹಿಟ್ ಆಗಿದ್ದರಿಂದ, ಚಿತ್ರದ ಗೆಲುವಿಗೂ ಅದು ಸಹಕಾರಿ ಆಯಿತು. ಪುಷ್ಪ 2ನಲ್ಲೂ ಅಂಥದ್ದೊಂದು ಫಾರ್ಮುಲಾವನ್ನು ಮತ್ತೆ ವರ್ಕ್ ಮಾಡುತ್ತಿದ್ದಾರೆ ನಿರ್ದೇಶಕರು. ಪುಷ್ಪ 2ನಲ್ಲೂ ಒಂದು ಐಟಂ ಸಾಂಗ್ ಇರಲಿದ್ದು, ಅದಕ್ಕೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಊವರ್ಶಿ ಬದಲು ಕನ್ನಡದ ನಟಿ ಶ್ರೀಲೀಲಾ (Sreeleela)  ಡಾನ್ಸ್ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಸದ್ಯ ತೆಲುಗು ಚಿತ್ರೋದ್ಯಮದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಸ್ಪರ್ಧೆಗೆ ಬಿದ್ದಿದ್ದಾರೆ. ರಶ್ಮಿಕಾಗೆ ಸಿಗಬೇಕಿದ್ದ ಹಲವು ಅವಕಾಶಗಳನ್ನು ಶ್ರೀಲೀಲಾ ಕಿತ್ತುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದರೆ, ಶ್ರೀಲೀಲಾ ಕೇವಲ ಐಟಂ ಹಾಡಿಗೆ ಸೊಂಟ ಬಳುಕಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಅಧಿಕೃತವಾಗಿ ಹೊರ ಬೀಳದೇ ಇದ್ದರೂ, ಸುದ್ದಿಯಂತೂ ಸಖತ್ ಸೇಲ್ ಆಗುತ್ತಿದೆ.

ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 ಸಿನಿಮಾದ ಶೂಟಿಂಗ್ ಕುಂಟುತ್ತಾ ಸಾಗಿದೆ. ಸದ್ಯ ಚಿತ್ರದ ಕ್ಲೈಮ್ಯಾಕ್ಸ್ (Climax) ದೃಶ್ಯದ ಚಿತ್ರೀಕರಣವನ್ನು ಮಾಡಲು ನಿರ್ದೇಶಕ ಸುಕುಮಾರನ್ (Sukumaran) ಪ್ಲ್ಯಾನ್ ಮಾಡಿದ್ದು, ಅದೊಂದು ರೋಮಾಂಚನಕಾರಿ ನೀಡುವಂತಹ ಸನ್ನಿವೇಶವಾಗಿದೆ ಎಂದು ಹೇಳಲಾಗುತ್ತಿದೆ. ಈ ದೃಶ್ಯವನ್ನು ತಿರುಪತಿ ಜಿಲ್ಲೆಯ ಪೂರ್ವ ಘಟ್ಟದಲ್ಲಿರುವ ಸ್ವರ್ಣಮುಖಿ (Swarnamukhi) ನದಿಯ ತೀರದಲ್ಲಿ ಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಅಲ್ಲು ಅರ್ಜುನ್ ಜೊತೆ ಫಾಸಿಲ್ ಕೂಡ ಭಾಗಿಯಾಗಲಿದ್ದಾರಂತೆ. ಈ ದೃಶ್ಯಕ್ಕೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಕ್ತ ಚಂದನವನ್ನು ಕಳ್ಳ ಮಾರ್ಗದಲ್ಲಿ ಸಾಗಿಸುವ ಪುಷ್ಪರಾಜನ ವಿರುದ್ಧ ಭನ್ವಿರ್ ಸಿಂಗ್ ಮಾಡುವ ದಾಳಿಯೇ ಕ್ಲೈಮ್ಯಾಕ್ಸ್ ದೃಶ್ಯ ಎಂದು ಹೇಳಲಾಗುತ್ತಿದೆ. 

ಈ ನಡುವೆ ‘ಪುಷ್ಪ 2’ (Pushpa 2) ಸಿನಿಮಾದ ಆಡಿಯೋ (Audio) ಹಕ್ಕು (Right) ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಈವರೆಗೂ ದಾಖಲಾಗಿದ್ದ ಎಲ್ಲ ಮೊತ್ತವನ್ನೂ ಅದು ಹಿಂದಿಕ್ಕಿದ್ದು ಟಿ ಸೀರಿಸ್ ಕಂಪೆನಿಯು 65 ಕೋಟಿ ರೂಪಾಯಿ ಹಣ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ರಿಲೀಸ್ ಆಗುವ ಅಷ್ಟು ಭಾಷೆಗಳಿಗೆ ಈ ಹಕ್ಕು ಅನ್ವಯಿಸಲಿದೆ.

ಈ ಹಿಂದೆ ರಿಲೀಸ್ ಆಗಿರುವ ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ಸೇಲ್ ಆಗಿತ್ತು. ಆರ್.ಆರ್.ಆರ್ ಆಡಿಯೋ ಹಕ್ಕು 25 ಕೋಟಿಗೆ ಬಿಕರಿ ಆಗಿತ್ತು. ಸಾಹೋ ಸಿನಿಮಾದ ಆಡಿಯೋ ಹಕ್ಕು ಕೂಡ 22 ಕೋಟಿಗೆ ಸೇಲ್ ಆಗಿತ್ತು. ಈ ಎಲ್ಲ ದಾಖಲೆಗಳನ್ನೂ ಪುಷ್ಪ 2 ಸಿನಿಮಾ ಮುರಿದಿದೆ. ಅಲ್ಲದೇ, ಓಟಿಟಿಗೂ ಭಾರೀ ಮೊತ್ತಕ್ಕೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ