4 ಐಎಎಸ್ ಅಧಿಕಾರಿಗಳ ವರ್ಗಾವಣೆ ; ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಅವರನ್ನು ಬಿಎಂಆರ್ ಡಿಎ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಯಾದಗಿರಿ ಜಿಲ್ಲಾಧಿಕಾರಿಯನ್ನಾಗಿ ಸುಶೀಲಾ, ವಿಜಯನಗರಕ್ಕೆ ಎಂಎಸ್ ದಿವಾಕರ್, ಬಳ್ಳಾರಿಗೆ ಟಿ ವೆಂಕಟೇಶ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಜುಲೈ 10 ರಂದು ರಾಜ್ಯ ಸರ್ಕಾರ 9 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿತ್ತು.
ಅರಮನೆ ನಗರಿಯಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಕಮಿಷನರ್ ಸೂಚನೆ; ವಿದ್ಯಾರ್ಥಿ, ಪೋಷಕರಿಗೆ ಖಡಕ್ ವಾರ್ನಿಂಗ್ :
ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ(Mysuru) ಬೈಕ್ ವ್ಹೀಲಿಂಗ್ (Bike Wheeling) ಪ್ರಕರಣಗಳು ಹೆಚ್ಚಾಗಿವೆ. ಒಂದು ವಾರದಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಸದ್ಯ ಬೈಕ್ ಸ್ಟಂಟ್‌ಗೆ(Bike Stunt) ಬ್ರೇಕ್ ಹಾಕಲು ಮೈಸೂರು ಪೊಲೀಸರು(Mysuru Police) ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಬೈಕ್ ಸ್ಟಂಟ್ ಮಾಡುತ್ತಿರುವ ಯುವಕರು ಹಾಗೂ ಸ್ಟಂಟ್‌ಗೆ ಬಳಸಿದ ಬೈಕ್ಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.
ಬನ್ನಿಮಂಟಪ ಎನ್ಆರ್ ಮೊಹಲ್ಲಾ ರಿಂಗ್ ರಸ್ತೆಗಳಲ್ಲಿ ಬಿಂದಾಸ್ ವ್ಹೀಲಿಂಗ್ ಮಾಡುವ, ಐಶಾರಾಮಿ ಬೈಕ್‌ಗಳು ಟಿವಿಎಸ್ ಮೊಪೆಡ್‌ನಲ್ಲೂ ವ್ಹೀಲಿಂಗ್ ಮಾಡುವವರಿಗೆ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೈಕ್ ವ್ಹೀಲಿಂಗ್ ವಿರುದ್ದ ಕಠಿಣ ಕ್ರಮ ಎಫ್ಐಆರ್ ದಾಖಲಿಸುವುದಾಗಿ ವಿದ್ಯಾರ್ಥಿಗಳು, ಪೋಷಕರಿಗೂ ವಾರ್ನಿಂಗ್ ನೀಡಲಾಗಿದೆ. ಮಕ್ಕಳ ಬೈಕ್ ಚಾಲನೆ ಬಗ್ಗೆ ನಿಗಾ ಇಡಿ. ಎಫ್ಐಆರ್ ದಾಖಲಾದರೆ ಭವಿಷ್ಯಕ್ಕೆ ಮಾರಕವಾಗಲಿದೆ. ಬೈಕ್ ವೀಲಿಂಗ್ ಬೇರೆ ವಾಹನ ಸವಾರರಿಗೂ ಸಮಸ್ಯೆಯಾಗುತ್ತದೆ ಎಂದು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ.