10 ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಸರ್ಕಾರ ಆದೇಶ
ಬೆಂಗಳೂರು, ಸೆ.02: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಧಿಕಾರಿಗಳ ವರ್ಗಾವಣೆ ಜೋರಾಗಿ ನಡೆಯುತ್ತಿದೆ. ಕಳೆದ ಜೂನ್ನಲ್ಲಿ 11ಐಎಎಸ್ ಅಧಿಕಾರಿಗಳನ್ನು ಹಾಗೂ ಜುಲೈ 1 ರಂದು 14 ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಇದೀಗ ತನ್ನ ವರ್ಗಾವಣೆಯನ್ನು ಮತ್ತೆ ಮುಂದುವರೆಸಿದ್ದು, ಬರೊಬ್ಬರಿ 10 ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ (IPS Officers Transfer) ಸರ್ಕಾರ ಆದೇಶ ಹೊರಡಿಸಿದೆ. ಈ ಕೆಳಗಿನಂತಿದೆ ವರ್ಗಾವಣೆಗೊಂಡವರು.
ಇನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸಿಐಡಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹಾಗೂ ಕನಿಕಾ ಸಿಕ್ರಿವಾಲ್ ಅವರನ್ನು ನೇಮಿಸಲಾಗಿದೆ. ಗುಪ್ತಚರ ಇಲಾಖೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಗುಂಜನ್ ಆರ್ಯ, ಕುಶಾಲ್ ಚೌಕ್ಸೆ. ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಸಿದ್ದಾರ್ಥ್ ಗೋಯಲ್ ನೇಮಕವಾದರ, ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ರೋಹನ್ ಜಗದೀಶ್ ಅವರು ನೇಮಕಗೊಂಡಿದ್ದಾರೆ.
ಇನ್ನು ಬೆಂಗಳೂರು ಉಗ್ರರ ನಿಗ್ರಹ ದಳ ಎಸ್ಪಿಯಾಗಿ ಶಿವಾನ್ಷು ರಜಪೂತ್, ಉಡುಪಿ ಎಎನ್ಎಫ್ ಎಸ್ಪಿ ಆಗಿ ಜಿತೇಂದ್ರ ಕುಮಾರ್ ದಯಾಮ, ಕೆಎಸ್ಆರ್ಪಿ ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ ಎಂ.ಎನ್.ದೀಪನ್ ಹಾಗೂ ಬೆಂಗಳೂರು ವೈರ್ಲೆಸ್ ವಿಭಾಗದ ಎಸ್ಪಿಯಾಗಿ ಹೆಚ್.ಎನ್.ಮಿಥುನ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ.
ಇನ್ನು ಜೂನ್ 6 ರಂದು 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಕರ್ನಾಟಕ ಸರ್ಕಾರ ಆದೇಶಿಸಿತ್ತು. ಕಪಿಲ್ ಮೋಹನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈವರೆಗೆ ಈ ಹುದ್ದೆಯನ್ನು ಹೆಚ್ಚುವರಿಯಾಗಿ ಪಂಕಜ್ ಕುಮಾರ್ ಪಾಂಡೆ ಅವರು ನಿಭಾಯಿಸುತ್ತಿದ್ದರು. ಬಳಿಕ ಈ ಸೇವೆಯಿಂದ ಪಂಕಜ್ ಅವರನ್ನು ಮುಕ್ತಿಗೊಳಿಸಲಾಗಿತ್ತು. ಇದೀಗ ಮತ್ತೆ 10 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.