Tomato Price: ದಾಖಲೆ ಬರೆದ ಟೊಮೇಟೊ ದರ, 26 ಕೆ.ಜಿ. ಟೊಮೆಟೊ 5000 ರೂಪಾಯಿಗೆ ಹರಾಜು!
tomato price: ಚಿಕ್ಕಮಗಳೂರು: ಟೊಮೆಟೊದ ಬೆಲೆ ಮತ್ತೆ ಏರಿಕೆಯಾಗಿ ಕಾಫಿನಾಡಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಟೊಮೆಟೊ ದರ ಗಗನಕ್ಕೇರಿದ್ದು, 200 ರೂಪಾಯಿ ಗಡಿ ತಲುಪಿದೆ. 26 ಕೆ.ಜಿ.ಟೊಮೆಟೊ 5000 ರೂಪಾಯಿಗೆ ಹರಾಜಾಗಿದೆ. ಟೊಮೆಟೊಕೊಳ್ಳಲು ಮಾರುಕಟ್ಟೆಗೆ ಹೋದ ಗ್ರಾಹಕರು ಬೆಲೆ ಏರಿಕೆ ಕಂಡು ಶಾಕ್ ಆಗಿದ್ದಾರೆ.
ಇಷ್ಟಕ್ಕೂ ಕಾಫಿನಾಡಿನಲ್ಲಿ ಟೊಮೆಟೊ ಬೆಲೆ ಈ ಪರಿ ಏರಿಕೆಯಾಗಲು ಕಾರಣ ಉತ್ತರ ಭಾರತದಲ್ಲಿ ಚಿಕ್ಕಮಗಳೂರಿನ ಟೊಮೆಟೊಗೆ ಭಾರಿ ಬೇಡಿಕೆ. ಇಲ್ಲಿ ಬೆಳೆದ ಟೊಮೆಟೊ ಉತ್ತರ ಭಾರತಕ್ಕೆ ಸಾಗಾಟವಾಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈ ಕುರಿತು ಖಾಸಗಿ ವಾಹಿನಿ ಒಂದರಲ್ಲಿ ಮೋಹನ್ (ವ್ಯಾಪಾರಿ) ಮಾತನಾಡಿ, ಮೈಸೂರಿನಿಂದ ಚಿಕ್ಕಮಗಳೂರಿಗೆ ಬಂದು, ಎ.ಪಿ.ಎಮ್.ಸಿ ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಟೊಮಟೊ ಸೆಲ್ ಮಾಡಿದ್ದೇವೆ. ಚಿಕ್ಕಮಗಳೂರಿನಲ್ಲಿ ಕ್ವಾಲಿಟಿಗೆ ಬೆಲೆ ಕೊಡುತ್ತಾರೆ ಹಾಗಾಗಿ ಚಿಕ್ಕಮಗಳೂರಿಗೆ ತಂದು ಮಾರಿದ್ದೇವೆ. ಈ ಹಿಂದೆ ಬೆಲೆ ತುಂಬಾ ಕಡಿಮೆ ಇದ್ದು, ತುಂಬಾ ಲಾಸ್ ಮಾಡಿಕೊಂಡಿದ್ವಿ ಆದರೆ ಈ ಬಾರಿ ಒಳ್ಳೆಯ ಬೆಲೆ ಸಿಕ್ಕಿದೆ ಎಂದಿದ್ದಾರೆ.
ಕೋಲಾರ : ದಾಖಲೆ ಸೃಷ್ಟಿಸಿದ ಟೊಮೆಟೊ ಬೆಲೆ; 15 ಕೆಜಿ ಟೊಮೆಟೊ ಬಾಕ್ಸ್ ಬರೋಬ್ಬರಿ ₹2600ಕ್ಕೆ ಸೇಲ್!
ಕೋಲಾರದ ಸಿಎಂಆರ್ ಟೊಮೆಟೊ ಮಂಡಿಯಲ್ಲಿ 15 ಕೆಜಿ ತೂಕದ ಬಾಕ್ಸ್ 2,600 ರೂಪಾಯಿಗೆ ಹರಾಜಾಗಿದೆ. ದಾಖಲೆ ಬೆಲೆಗೆ ಟೊಮೆಟೊ ಹಾಜರಾದ ಪರಿಣಾಮ ರೈತರು ಫುಲ್ ಖುಷಿಯಾಗಿದ್ದಾರೆ.
ತರಕಾರಿ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಅದರಲ್ಲೂ ಟೊಮೆಟೊ ಬೆಲೆ ಬೆಂಕಿಯಂತೆ ಉರಿಯುತ್ತಿದೆ.
ಆದರೆ ಟೊಮೆಟೊ ಈಗ ರೈತರ ಬದುಕನ್ನೇ ಬದಲಿಸುತ್ತಿದೆ. ಕೋಲಾರದಲ್ಲಿ ರೈತನೊಬ್ಬ ಟೊಮೆಟೊ ಮಾರಾಟ ಮಾಡಿ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದಾನೆ.
ಹೌದು, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿದ್ದು, ಇಂದು ಬೆಳಗ್ಗೆ ನಡೆದ ಟೊಮೆಟೊ ಹಾಜರಿನಲ್ಲಿ 15 ಕೆಜಿ ತೂಕದ ಟೊಮೆಟೊ ಬಾಕ್ಸ್ ಬರೋಬ್ಬರಿ 2500 ರೂಪಾಯಿಗೆ ಹರಾಜಾಗಿದೆ.
ಕೋಲಾರದ ಸಿಎಂಆರ್ ಟೊಮೆಟೊ ಮಂಡಿಯಲ್ಲಿ 15 ಕೆಜಿ ತೂಕದ ಬಾಕ್ಸ್ 2,600 ರೂಪಾಯಿಗೆ ಹರಾಜಾಗಿದೆ. ದಾಖಲೆ ಬೆಲೆಗೆ ಟೊಮೆಟೊ ಹಾಜರಾದ ಪರಿಣಾಮ ರೈತರು ಫುಲ್ ಖುಷಿಯಾಗಿದ್ದಾರೆ.
ಇನ್ನು, ಆಂಧ್ರದ ಪುಂಗನೂರು ಮೂಲದ ಟೊಮೆಟೊ ಬೆಳೆಗಾರ ಮುರಳಿ, ಮಾರ್ಕೆಟ್ನಲ್ಲಿ ತಿರುಪತಿ ಎಂದೇ ಫೇಮಸ್ ಆಗಿರುವ ರೈತ ಟೊಮೆಟೊ ಬೆಳೆದು ಕೋಟ್ಯಾಧಿಪತಿಯಾಗಿದ್ದಾರೆ.
ಆಂಧ್ರ ಪ್ರದೇಶ ಈ ರೈತ ಕಳೆದ ಒಂದೂವರೆ ತಿಂಗಳಿಂದ 5 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದ್ದಾರೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ತಿರುಪತಿ ಎಂದೇ ಈ ಮುರುಳಿ ಹೆಸರು ವಾಸಿಯಾಗಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ರೈತ ಮುರಳಿ 40 ಸಾವಿರ ಟೊಮೆಟೊ ಬಾಕ್ಸ್ ಮಾರಾಟ ಮಾಡಿ 5 ಕೋಟಿಗೂ ಅಧಿಕ ಆದಾಯ ಗಳಿಸಿದ್ದಾರೆ. ರೈತ ಮುರಳಿ ಪುಂಗನೂರು ಬಳಿ 22 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದು ಭರ್ಜರಿ ಇಳುವರಿ ಪಡೆದುಕೊಂಡಿದ್ದಾರೆ.