ಟೊಮೆಟೊ ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸಿದ ಪೊಲೀಸ್ ಕಾನ್‌ಸ್ಟೇಬಲ್!

ಹಾಸನ: ಟೊಮೆಟೊ (Tomato) ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಖರೀದಿ ಮಾಡೋದಂತೂ ದೂರದ ಮಾತಾಗಿಬಿಟ್ಟಿದೆ. ಬೆಲೆ ಏರಿಕೆ ಇದ್ದರೂ ಬೇಡಿಕೆ ಮಾತ್ರ ತಗ್ಗಿಲ್ಲ. ಇದೀಗ ಚಿನ್ನದ ಬೆಲೆ ಎನಿಸಿಕೊಂಡಿರೋ ಟೊಮೆಟೊವನ್ನು ಭರ್ಜರಿಯಾಗಿ ಬೆಳೆದು ಪೊಲೀಸ್ ಕಾನ್‌ಸ್ಟೇಬಲ್ (Police Constable) ಒಬ್ಬರು ಲಕ್ಷಾಂತರ ರೂ. ಆದಾಯ ಗಳಿಸಿದ್ದಾರೆ.
ಬೇಲೂರು ತಾಲೂಕಿನ ಹಳೆಬೀಡು ಹೋಬಳಿ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದಾರೆ. ಇವರು ಒಂದು ಎಕರೆ 6 ಗುಂಟೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದು, ಈಗಾಗಲೇ 20 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ಬೈರೇಶ್ ಇತ್ತೀಚೆಗೆ ಸಾವಿರ ಬಾಕ್ಸ್ ಟೊಮೆಟೊ ಮಾರಾಟ ಮಾಡಿದ್ದಾರೆ. ಇನ್ನೂ ಸಾವಿರ ಬಾಕ್ಸ್ ಹಣ್ಣು ನಿರೀಕ್ಷೆಯಲ್ಲಿದ್ದಾರೆ. ಸರ್ಕಾರಿ ಕೆಲಸದ ನಡುವೆಯೂ ಒಳ್ಳೆಯ ಕೃಷಿ ಮಾಡಿ ಬೈರೇಶ್ ಲಕ್ಷಾಂತರ ರೂ. ಲಾಭ ಪಡೆದಿದ್ದಾರೆ.
ಟೊಮೆಟೊ ಬೆಲೆ ಏರಿಕೆ ಹಿನ್ನೆಲೆ ಅಲ್ಲಲ್ಲಿ ಟೊಮೆಟೊ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಅದೇ ರೀತಿ ಪೊಲೀಸ್ ಪೇದೆ ಬೈರೇಶ್ ಹೊಲಕ್ಕೂ ಕಳ್ಳರ ಕಾಟ ತಪ್ಪಿಲ್ಲ. ಕಳ್ಳರು ಈಗಾಗಲೇ ಬೈರೇಶ್ ಹೊಲದಿಂದ ನೂರಾರು ಬಾಕ್ಸ್ ಟೊಮೆಟೊ ಕಳ್ಳತನ ಮಾಡಿದ್ದಾರೆ. ನಂತರ ಎಚ್ಚೆತ್ತುಕೊಂಡ ಅವರು ರಾತ್ರಿಯಿಡೀ ಹೊಲದಲ್ಲಿ ಕಾವಲು ಕಾದು ಟೊಮೆಟೊಗಳನ್ನು ಉಳಿಸಿಕೊಂಡಿದ್ದಾರೆ.
ಉಡುಪಿ, ಮಂಗಳೂರಿನಿಂದ ವರ್ತಕರು ಆಗಮಿಸಿ ಬೈರೇಶ್ ಹೊಲದಿಂದ ಟೊಮೆಟೊ ಖರೀದಿ ಮಾಡುತ್ತಾರೆ. ಮಳೆ ಕೊರತೆ, ರೋಗ ಬಾಧೆ, ಕಳ್ಳರ ಕಾಟದ ನಡುವೆಯೂ ಟೊಮೆಟೊ ಬೆಳೆದು ಭರ್ಜರಿ ಆದಾಯ ಗಳಿಸಿರುವ ಬೈರೇಶ್ ಇತರರಿಗೂ ಮಾದರಿಯಾಗಿದ್ದರೆ.
ಪೊಲೀಸರೆಂದು ಹೇಳಿ ಮನೆಗೆ ನುಗ್ಗಿದ ಖದೀಮರು; ಚಾಕು ತೋರಿಸಿ ಕೈಯಲ್ಲಿದ್ದ ಉಂಗುರ, ಇತರೆ ವಸ್ತುಗಳನ್ನು ದೋಚಿದ ಕಳ್ಳರು
ಬೆಂಗಳೂರು: ಮಹಾನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿರುವ ಯುವಕರೇ ಹುಷಾರು, ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಹೌದು ನಾವು ಪೊಲೀಸರೆಂದು ಹೇಳಿ ಯುವಕರಿದ್ದ ಬಾಡಿಗೆ ಮನೆಗೆ ನುಗ್ಗಿ ಸುಲಿಗೆ ಮಾಡಿದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ (Vidyaranyapura Police Station) ವ್ಯಾಪ್ತಿಯಲ್ಲಿ ನಡೆದಿದೆ. ನಿಮ್ಮ ರೂಂನಲ್ಲಿ ಡ್ರಗ್ಸ್ ಸೇವಿಸುವ ಬಗ್ಗೆ ಮಾಹಿತಿಯಿದೆ, ಪರಿಶೀಲನೆ ನಡೆಸಬೇಕೆಂದು ಒಳಗಡೆ ಬಂದಿದ್ದಾರೆ. ಮನೆಯಲ್ಲಿ ಏನೂ ಬೆಲೆ ಬಾಳುವ ವಸ್ತುಗಳು ಸಿಗದ ಕಾರಣ ನಾಲ್ವರು ಯುವಕರಿಗೆ ಚಾಕು ತೋರಿಸಿ ಕೈಯಲ್ಲಿದ್ದ ಉಂಗುರ, ಇತರೆ ವಸ್ತುಗಳನ್ನು ದೋಚಿದ್ದಾರೆ. ಅಷ್ಟೇ ಅಲ್ಲದೆ ಫೋನ್ ಪೇ ಮೂಲಕ 13 ಸಾವಿರ ಹಣವನ್ನ ಅಕೌಂಟ್ಗೆ ಹಾಕಿಸಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಖದೀಮರಿಗಾಗಿ ಬಲೆ ಬೀಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕರು
ಇನ್ನು ಈ ಮೂವರು ಯುವಕರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೇ, ಓರ್ವ ಯುವಕ ವ್ಯಾಸಂಗ ಮಾಡುತ್ತಿದ್ದ. ಇಂದು(ಜು.14) ಬೆಳಗ್ಗಿನ ಜಾವ ಮನೆಯ ಬಾಗಿಲು ತಟ್ಟಿದ್ದ ಸುಲಿಗೆಕೋರರು. ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಒಳ ನುಗ್ಗಿ, ಯುವಕರಿಗೆ ಚಾಕು ತೋರಿಸಿ ಸುಲಿಗೆ ಮಾಡಿದ್ದಾರೆ. ಆರೋಪಗಳಿಗಾಗಿ ವಿದ್ಯಾರಣ್ಯಪುರ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪೇಂಟ್ ಅಂಡ್ ಹಾರ್ಡ್ ವೇರ್ ಅಂಗಡಿಯಲ್ಲಿ ಕಳ್ಳನ ಕರಾಮತ್ತು
ಮಂಡ್ಯ: ಪೇಂಟ್ ಅಂಡ್ ಹಾರ್ಡ್ ವೇರ್ ಅಂಗಡಿಯಲ್ಲಿ ಕಳ್ಳ ತನ್ನ ಕರಾಮತ್ತು ತೋರಿಸಿದ್ದಾನೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಿಕ್ಕೆರೆ ಗ್ರಾಮದ ರಾಮಲಿಂಗಯ್ಯ ಎಂಬುವವರ ಸೇರಿದ ಅಂಗಡಿ ಇದಾಗಿದ್ದು, ಅಂಗಡಿಗೆ ನುಗ್ಗಿದ ಖತರ್ನಾಕ್ ಕಳ್ಳ, ಕ್ಯಾಶ್ ಕೌಂಟರ್ ಡ್ರಾಯರ್ನಿಂದ ಹತ್ತು ಸಾವಿರ ಹಣ ಎಗರಿಸಿದ್ದಾನೆ. ಕಳ್ಳತನ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.