ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಟೊಮೆಟೊ: ರೂಪಾಯಿ 200ರ ಗಡಿ ದಾಟುವ ಸಾಧ್ಯತೆ, ಗ್ರಾಹಕರು ಕಂಗಾಲು

Twitter
Facebook
LinkedIn
WhatsApp
ಟೊಮೆಟೊ: ರೂಪಾಯಿ 200ರ ಗಡಿ ದಾಟುವ ಸಾಧ್ಯತೆ, ಗ್ರಾಹಕರು ಕಂಗಾಲು

ಬೆಂಗಳೂರು: ಈಗಾಗಲೇ ಗಗನದತ್ತ ಮುಖ ಮಾಡಿದ್ದ ಟೊಮೆಟೋ (Tomato) ದರ ಮತ್ತಷ್ಟು ಏರಿಕೆ ಕಂಡಿದೆ. ಮೊದಲೇ ಕಂಗಾಲಾಗಿದ್ದ ಗ್ರಾಹಕರಿಗೆ ದರ (Price) ಏರಿಕೆ ಮತ್ತಷ್ಟು ಶಾಕ್ ನೀಡಿದೆ.

ನಾಟಿ ಟೊಮೆಟೋ ಕೆಜಿಗೆ 140 ರಿಂದ 150 ರೂ.ಗೆ ಹಾಗೂ ಫಾರ್ಮ್ ಟೊಮೆಟೋ 120 ರಿಂದ 130 ರೂ.ಗೆ ಏರಿಕೆ ಕಂಡಿದೆ. ಇದರಿಂದ ಟೊಮೆಟೋ ಮಾರಾಟಗಾರರ ಅದೃಷ್ಟ ಶುಕ್ರದೆಸೆಗೆ ತಿರುಗಿದೆ. ಇನ್ನೊಂದೆಡೆ ಗ್ರಾಹಕರಿಗೆ ಗಗನ ಕುಸುಮವಾಗಿ ಕಾಡಿದೆ.

ಕಳೆದ ಒಂದು ವಾರದ ಹಿಂದೆ ಕೆಜಿಗೆ 70-80 ರೂ.ಗೆ ಇದ್ದ ಟೊಮೆಟೋ ದರ ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಈ ಬಾರಿ ರಾಜ್ಯದಲ್ಲಿ ಟೊಮೆಟೋ ಇಳುವರಿ ಕಡಿಮೆಯಾಗಿದ್ದು ಇದಕ್ಕೆ ಕಾರಣವಾಗಿದೆ. ಅಲ್ಲದೇ ಜಡಿ ಮಳೆಯಿಂದಾಗಿ ಒಂದಷ್ಟು ಕಡೆ ಬೆಲೆ ಹಾನಿಯಾಗಿದ್ದು ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ.

ಇದರಿಂದ ಕೆಲವು ಮಾರುಕಟ್ಟೆಗಳಿಗೆ ಟೊಮೆಟೋ ಪೂರೈಕೆಯೇ ಆಗಿಲ್ಲ. ಬಹುತೇಕ ಎಲ್ಲಾ ತರಕಾರಿ ಅಂಗಡಿಗಳಲ್ಲೂ ಕಾಣುತ್ತಿದ್ದ ಟೊಮೆಟೋ ಕೆಆರ್ ಮಾರ್ಕೆಟ್‍ನಿಂದ  (KR Market) ಕಾಣೆಯಾಗಿದೆ. 

21 ಲಕ್ಷ ಮೌಲ್ಯದ ಟೊಮೆಟೋ ತುಂಬಿದ್ದ ಲಾರಿ ನಾಪತ್ತೆ ಕೇಸ್‌ – ಹಣದೊಂದಿಗೆ ಚಾಲಕ, ಕ್ಲೀನರ್ ಪರಾರಿ

ಕೋಲಾರ: 21 ಲಕ್ಷ ರೂ. ಮೌಲ್ಯದ ಟೊಮೆಟೋ (Tomato) ಹೊತ್ತುಕೊಂಡು ಕೋಲಾರದಿಂದ (Kolara) ರಾಜಸ್ಥಾನಕ್ಕೆ ತೆರಳುತ್ತಿದ್ದ ಲಾರಿ ಕಳ್ಳತನಕ್ಕೆ (Lorry Theft) ಟ್ವಿಸ್ಟ್‌ ಸಿಕ್ಕಿದೆ.

ಚಾಲಕ ಹಾಗೂ ಲಾರಿ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಕೋಲಾರ ನಗರ ಠಾಣೆಗೆ ಮಂಡಿ ಮಾಲೀಕರು ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ಶುರು ಮಾಡಿದಾಗ ಟೊಮೆಟೋವನ್ನು ಗುಜರಾತ್‍ನ (Gujarat) ಅಹಮದಾಬಾದ್‌ನಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಟೊಮೆಟೋ ಮಾರಾಟ ಮಾಡಿ ಹಣ ಪಡೆದು ಚಾಲಕ ಹಾಗೂ ಕ್ಲೀನರ್ ನಾಪತ್ತೆಯಾಗಿದ್ದಾರೆ.

ಕೋಲಾರದ ಮಂಡಿ ಮಾಲೀಕರಾದ ಸಕ್ಲೇನ್ ಹಾಗೂ ಮುನಿರೆಡ್ಡಿ ಅವರು ಈ ಮಾಹಿತಿ ನೀಡಿದ್ದು, ಮೆಹತ್ ಟ್ರಾನ್ಸ್‌ಪೋರ್ಟ್‌ ಮಾಲೀಕ ಸಾಧಿಕ್ ಅವರು ಈಗ ಗುಜರಾತ್‌ನತ್ತ ಹೊರಟಿದ್ದು ಅಲ್ಲೇ ದೂರು ನೀಡಲು ಮುಂದಾಗಿದ್ದಾರೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯ (APMC Market) ಎ.ಜಿ.ಟ್ರೇಡರ್ಸ್‌ನ ಸಕ್ಲೇನ್‌ ಹಾಗೂ ಎಸ್‌.ವಿ.ಟಿ. ಟ್ರೇಡರ್ಸ್‌ನ ಮುನಿರೆಡ್ಡಿ ಎಂಬುವರು ಸುಮಾರು 21 ಲಕ್ಷ ಮೌಲ್ಯದ ಸುಮಾರು 750 ಕ್ರೇಟ್‌ (11 ಟನ್‌) ಟೊಮೆಟೋವನ್ನು ಜುಲೈ 27ರಂದು ರಾಜಸ್ಥಾನದ ಜೈಪುರಕ್ಕೆ ಮೆಹತ್‌ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಲಾರಿಯ ಮೂಲಕ ಕಳುಹಿಸಿಕೊಟ್ಟಿದ್ದರು.

ನಿಗದಿ ಪ್ರಕಾರ ಶನಿವಾರ ರಾತ್ರಿ ಜೈಪುರಕ್ಕೆ ಲಾರಿ ತಲುಪಬೇಕಿತ್ತು. ಶನಿವಾರ ಮಧ್ಯಾಹ್ನದವರೆಗೆ ವ್ಯಾಪಾರಿಗಳ ಜೊತೆ ಲಾರಿ ಚಾಲಕ ಅನ್ವರ್‌ ಸಂಪರ್ಕದಲ್ಲಿದ್ದ. ಆ ನಂತರ ಆತನ ಸಂಪರ್ಕ ಕಡಿತವಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಠಾಣೆಯಲ್ಲಿ ದೂರು ನೀಡಿದ ಬಳಿಕ ಚಾಲಕ ಗುಜರಾತ್‌ನಲ್ಲಿ ಟೊಮೆಟೋ ಮಾರಾಟ ಮಾಡಿರುವ ವಿಷಯ ತಿಳಿದು ಬಂದಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯು ದೇಶದಲ್ಲಿ ಟೊಮೆಟೋ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿಂದ ಹೊರ ರಾಜ್ಯಗಳು ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಟೊಮೆಟೋವನ್ನು ಕಳುಹಿಸಿಕೊಡಲಾಗುತ್ತದೆ. ಆದರೆ ಕಳೆದ ಕೆಲ ದಿನಗಳಿಂದ ಟೊಮೆಟೋ ಬಂಗಾರವಾಗಿದ್ದು ರೈತರು ಜಮೀನಿನಲ್ಲಿ ಕಾಯುತ್ತಿದ್ದರೆ ಇತ್ತ ಮಾರುಕಟ್ಟೆಯಲ್ಲಿ ಸಿಸಿ ಟಿವಿ ಹಾಗೂ ಪೊಲೀಸ್ ಕಣ್ಗಾವಲನ್ನು ಇರಿಸಲಾಗಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಟೊಮೆಟೋವನ್ನು ಕೋಲಾರದ ರೈತರು ಬೆಳೆಯುತ್ತಾರೆ. ಅದರಲ್ಲೂ ಉತ್ತಮ ಗುಣಮಟ್ಟದ ಟೊಮೆಟೋ ಬೆಳೆದರೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈಗ ಹಲವು ಮಾರಕ ಕಾಯಿಲೆಗಳು ಬಂದ ಹಿನ್ನೆಲೆ ಟೊಮೆಟೋ ಇಳುವರಿ ಕಡಿಮೆಯಾಗಿದ್ದು ಬೆಲೆ ಭಾರೀ ಏರಿಕೆಯಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist