Tiger 3 ಸಿನಿಮಾದ ಮೊದಲ ಪೋಸ್ಟರ್ ರಿಲೀಸ್; ಸಲ್ಮಾನ್ ಖಾನ್, ಕತ್ರೀನಾ ಕೈಫ್ ಗನ್‌ನೊಂದಿಗೆ ..!
ಮುಂಬಯಿ: ಬಾಲಿವುಡ್ ನ ಸೂಪರ್ ಹಿಟ್ ʼಟೈಗರ್ʼ ಸರಣಿಯ ಮೂರನೇ ಭಾಗದ ಮೊದಲ ಪೋಸ್ಟರ್ ಶನಿವಾರ(ಸೆ.2 ರಂದು) ರಿಲೀಸ್ ಆಗಿದೆ. ಸಲ್ಮಾನ್ ಖಾನ್ ಅವರ ʼಟೈಗರ್ʼ ಸರಣಿಗೆ ಬಾಲಿವುಡ್ ನಲ್ಲಿ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಸ್ಪೈ ಥ್ರಿಲ್ಲರ್ ಕಥಾಹಂದರದ ʼಟೈಗರ್ʼ ಸರಣಿಯ ಮೂರನೇ ಭಾಗದ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಆಗಿದೆ.
ಟೈಗರ್ ಮತ್ತು ಜೋಯಾ ಪಾತ್ರಗಳಲ್ಲಿ ಈ ಹಿಂದಿನ ʼಟೈಗರ್ʼ ಸಿನಿಮಾದಲ್ಲಿ ಕತ್ರೀನಾ ಹಾಗೂ ಸಲ್ಮಾನ್ ಕಾಣಿಸಿಕೊಂಡಿದ್ದರು. ಈ ಬಾರಿ ಮತ್ತೆ ಸಲ್ಮಾನ್ – ಕತ್ರೀನಾ ಮತ್ತೊಂದು ರೋಮಾಂಚನ ಸ್ಪೈ ಥ್ರಿಲ್ಲರವ ಜರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ʼಟೈಗರ್-3ʼ ಇದೇ ವರ್ಷದ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ ಹೇಳಿದೆ.
ಮನೀಶ್ ಶರ್ಮಾ ʼಟೈಗರ್-3ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸ್ಪೈ ಯೂನಿವರ್ಸ್ ನಲ್ಲಿ ಬಂದ ಈ ಹಿಂದಿನ ʼಟೈಗರ್ ಜಿಂದಾ ಹೈʼ, ʼವಾರ್ʼ, ʼಪಠಾಣ್ʼ ಸಿನಿಮಾಗಳ ಕಥೆಯ ಹಿನ್ನೆಲೆ ಹಾಗೂ ಕಥೆಯಲ್ಲಿನ ಘಟನೆಗಳ ಸುತ್ತ ʼಟೈಗರ್-3ʼ ಸಿನಿಮಾ ಬರಲಿದೆ.
ಸಿನಿಮಾದ ಪೋಸ್ಟರ್ ನ್ನು ಸಲ್ಮಾನ್ ಖಾನ್ ಅವರು ಹಂಚಿಕೊಂಡಿದ್ದಾರೆ. “ಈ ವರ್ಷದ ದೀಪಾವಳಿ ಹಬ್ಬಕ್ಕೆ ʼಟೈಗರ್-3ʼ ಯೊಂದಿಗೆ ಬರುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ ಅವರ 50ನೇ ಚಿತ್ರ ಇದಾಗಿದ್ದು, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.
Jailer ಸಿನಿಮಾ ಹಿಟ್: ರಜಿನಿಕಾಂತ್,ನೆಲ್ಸನ್‌ಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕರು
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ‘ಜೈಲರ್’ ಬಿಗೆಸ್ಟ್ ಹಿಟ್ ಆಗಿದೆ. 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದೆ.
ಸನ್ ಪಿಕ್ಚರ್ಸ್ ಸಿಇಒ ಕಲಾನಿತಿ ಮಾರನ್ ಅವರು ಇತ್ತೀಚೆಗೆ ‘ತಲೈವಾ’ ಅವರನ್ನು ಚೆನ್ನೈನ ಪೋಯಸ್ ಗಾರ್ಡನ್ ಮನೆಯಲ್ಲಿ ಭೇಟಿ ಮಾಡಿ ಸಿನಿಮಾದ ಲಾಭಾಂಶದ ಚೆಕ್ ಹಾಗೂ ‘BMWX7 ‘ ದುಬಾರಿ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಂದಾಜು 100 ಕೋಟಿ ರೂಪಾಯಿಯ ಚೆಕ್ ನ್ನು ರಜಿನಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಕಲಾನಿತಿ ಮಾರನ್ ಅವರು ‘ಜೈಲರ್’ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರನ್ನು ಭೇಟಿಯಾಗಿ ದುಬಾರಿ ಗಿಫ್ಟ್ ನ್ನು ನೀಡಿದ್ದಾರೆ.
ಜಗತ್ತಿನಲ್ಲಿ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿರುವ ಬ್ಲ್ಯಾಕ್ ಪೋರ್ಷೆ ಕಾರನ್ನು ಹಾಗೂ ಸಿನಿಮಾದ ಲಾಭಾಂಶದ ಚೆಕ್ ನ್ನು ನೆಲ್ಸನ್ ಅವರಿಗೆ ನೀಡಿದ್ದಾರೆ.
ಸನ್ ಪಿಕ್ಚರ್ಸ್ ನಟ ,ನಿರ್ದೇಶಕನಿಗೆ ನೀಡಿರುವ ಗಿಫ್ಟ್ ನ ವಿಡಿಯೋವನ್ನು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ ವೈರಲ್ ಆಗಿದೆ.